ನವದೆಹಲಿ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಯುವಕನೊಬ್ಬ ಆಸ್ಪತ್ರೆಯ ಬಿಲ್ ನೋಡಿ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ನವದೆಹಲಿ (NewDelhi)ಯಲ್ಲಿ ನಡೆದಿದೆ.

ಮೃತ ಯುವಕನನ್ನು ನಿತೇಶ್ (24) ಎಂದು ಗುರುತಿಸಲಾಗಿದೆ. ಈತ ಖಾಸಗಿ ಹೋಟೆಲ್‍ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ನಿತೇಶ್ ತನ್ನ ಆರೋಗ್ಯಕ್ಕಾಗಿ ಸಾಕಷ್ಟು ಖರ್ಚು ಮಾಡಿದ್ದನು. ಇದಲ್ಲದೆ ನನ್ನ ಅನಾರೋಗ್ಯದಿಂದ ತನ್ನ ತಂದೆ-ತಾಯಿಗೆ ಆರ್ಥಿಕ ಹೊರೆಯಾಗುವುದು ಬೇಡ ಎಂದು ನಿತೀಶ್ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿದ್ದಾನೆ.  ಇದನ್ನೂ ಓದಿ: ಮಗುವಿಗೆ ಹೊಡೆದ ಅಂತ ಶಿಕ್ಷಕನಿಗೆ ಅಟ್ಟಾಡಿಸಿ, ಹಿಗ್ಗಾಮುಗ್ಗ ಥಳಿಸಿದ ಪೋಷಕರು

ದೆಹಲಿಯ ಆದರ್ಶ ನಗರದಲ್ಲಿರುವ ಖಾಸಗಿ ಹೋಟೆಲೊಂದರಲ್ಲಿ ನಿತೇಶ್ ಮೃತದೇಹ ಪ್ಲಾಸ್ಟಿಕ್‍ನಿಂದ ಮುಖ ಮುಚ್ಚಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಕ್ಸಿಜನ್ ಗ್ಯಾಸ್ ಬಳಸಿಕೊಂಡು ಆತ್ನಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ನಿತೇಶ್ ಮಂಗಳವಾರ ಹೋಟೆಲ್‍ನಲ್ಲಿ ಕೊಠಡಿಯೊಂದನ್ನು ಕಾಯ್ದಿರಿಸಿದ್ದಾನೆ. ಕೊಠಡಿಯೊಳಗೆ ಸಣ್ಣ ಬ್ಯಾಗೊಂದು ಪತ್ತೆಯಾಗಿದೆ. ಇದನ್ನು ಪರಿಶೀಲಿಸಿದಾಗ ಅದರಲ್ಲಿ ಸುಮಾರು ಆಸ್ಪತ್ರೆ ಬಿಲ್ ಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಅನಾರೋಗ್ಯದಿಂದಾಗಿ ಚಿಕಿತ್ಸೆಯ ಬಿಲ್ (Hospital Bill) ಹೆಚ್ಚಾಗುತ್ತಿರುವುದೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.

Young man commits suicide after seeing hospital bill