ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲ್ಲೂಕಿನ ಆಸಂದಿಯಲ್ಲಿ ಐತಿಹಾಸಿಕ ಪುರಾತನ ಕಾಲದ ೨ ವಿಗ್ರಹಗಳು ಪತ್ತೆಯಾಗಿವೆ.
ಚಂಡಿಕಾ ಭಾಮಿನಿ ದೇವಾಲಯದ ಉತ್ಖನನದ ವೇಳೆ ತಲೆಮಾರಿನಿಂದ ಮಣ್ಣಿನಲ್ಲಿ ಹೂತಿದ್ದ ೨ ಅಡಿ ಎತ್ತರದ ವಿಗ್ರಹವೊಂದು ದೊರಕಿದೆ. ಪರಿಶೀಲಿಸಿದಾಗ ಬೇಲೂರಿನ ಚೆನ್ನಕೇಶವನನ್ನು ಹೋಲುವ ಈ ಸೌಮ್ಯ ವದನವಾಗಿ ಸುಂದರವಾಗಿದೆ. ಜತೆಗೆ ಬಲಗೈಲಿ ಶಂಖಾ, ಪದ್ಮ, ಎಡಗೈಯಲ್ಲಿ ಚಕ್ರಾ ಗದಾವಿದೆ.
ಕೇಶವಃ ಕ್ಷೇಶನಾಶನಃ ಎಂಬಂತೆ ಕಷ್ಟಗಳು ಪರಿಹರಿಸುವ ಸೌಮ್ಯ ಕೇಶವನ ಸುತ್ತಲೂ ಪ್ರಭಾವಳಿಯ ರೀತಿಯ ರಚನೆಯಿದೆ. ಅಲ್ಲಿ ದಶವಾತಾರದ ಸೂಕ್ಷ್ಮ ಕೆತ್ತನೆಗಳಿವೆ. ಎಡಬಲದಲ್ಲಿ ಪತ್ನಿಯರಾದ ಶ್ರೀದೇವಿ, ಭೂದೇವಿಯರ ಕೆತ್ತನೆಗಳಿವೆ. ಒಟ್ಟಾರೆ ವಿಗ್ರಹ ನೋಡಲು ಸ್ಪುರದ್ರೂಪಿಯಾಗಿದೆ.