ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಟ್ವೆಂಟಿ–20 ರ್‍ಯಾಂಕಿಂಗ್ ಪಟ್ಟಿ ಬುಧವಾರ ಬಿಡುಗಡೆಯಾಗಿದ್ದು, ಬ್ಯಾಟರ್ ವಿಭಾಗದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಒಂದು ಸ್ಥಾನ ಕುಸಿದು, ಆರನೇ ಸ್ಥಾನ ಗಳಿಸಿದ್ದಾರೆ. ಕನ್ನಡಿಗ ಕೆ.ಎಲ್.ರಾಹುಲ್ 8ನೇ ಸ್ಥಾನ ಪಡೆದಿದ್ದಾರೆ.

ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಅರ್ಧಶತಕ ಸಿಡಿಸಿದ ಹೊರತಾಗಿಯೂ ಕೊಹ್ಲಿ ಅವರ ಸ್ಥಾನ ಕುಸಿದಿದೆ.

ಕೊಹ್ಲಿ ಅವರು 725 ರೇಟಿಂಗ್ ಪಾಯಿಂಟ್ ಹೊಂದಿದ್ದು, ರಾಹುಲ್ 684 ರೇಟಿಂಗ್ ಪಾಯಿಂಟ್ ಹೊಂದಿದ್ದಾರೆ.

ಓದಿ: ICC T20 WC: ಭಾರತವೇ ಟ್ವೆಂಟಿ-20 ವಿಶ್ವಕಪ್ ಗೆಲ್ಲಲಿದೆ ಎಂದ ವೀರೇಂದ್ರ ಸೆಹ್ವಾಗ್

ಪಾಕಿಸ್ತಾನದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ಮೂರು ಸ್ಥಾನ ಮೇಲಕ್ಕೇರಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾದ ಬ್ಯಾಟರ್ ಏಡನ್ ಮಾರ್‌ಕ್ರಂ ಮೂರನೇ ಸ್ಥಾನ ಪಡೆದಿದ್ದಾರೆ. ಇವರು ಈ ಹಿಂದೆ 9ನೇ ಸ್ಥಾನದಲ್ಲಿದ್ದರು. ಮೊದಲೆರಡು ಸ್ಥಾನಗಳಲ್ಲಿ ಕ್ರಮವಾಗಿ ಪಾಕಿಸ್ತಾನದ ನಾಯಕ ಬಾಬರ್ ಅಜಂ (820 ರೇಟಿಂಗ್ ಪಾಯಿಂಟ್) ಮತ್ತು ಇಂಗ್ಲೆಂಡ್‌ನ ದಾವಿದ್ ಮಲನ್ (831 ರೇಟಿಂಗ್ ಪಾಯಿಂಟ್) ಇದ್ದಾರೆ.

ಅಗ್ರ 9 ಬೌಲರ್‌ಗಳ ಪಟ್ಟಿಯಲ್ಲಿ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ. ಅದೇ ದೇಶದ ಮತ್ತೊಬ್ಬ ಬೌಲರ್ ಮೆಹದಿ ಹಸನ್ 9ನೇ ಸ್ಥಾನದಲ್ಲಿದ್ದಾರೆ.

ಪಾಕಿಸ್ತಾನದ ಶಾಹೀನ್ ಆಫ್ರಿದಿ ಎರಡನೇ ಸ್ಥಾನ ಪಡೆದಿದ್ದಾರೆ. ಇದು ಶಾಹೀನ್ ಜೀವನಶ್ರೇಷ್ಠ ಸಾಧನೆಯಾಗಿದೆ. ಹ್ಯಾರಿಸ್ ರೌಫ್ 17ನೇ ಸ್ಥಾನ ಪಡೆದಿದ್ದಾರೆ.

ಇನ್ನಷ್ಟು ಸುದ್ದಿಗಳು…

ICC T20 World Cup: ಭಾರತ–ಪಾಕಿಸ್ತಾನ ಕ್ರಿಕೆಟ್ ಪಂದ್ಯ ರಾಷ್ಟ್ರ ಧರ್ಮಕ್ಕೆ ವಿರುದ್ಧ ಎಂದ ರಾಮ್‌ದೇವ್

Bollywood: ಜಾನ್ಹವಿ ಕಪೂರ್​ಳನ್ನು ಸುಸ್ತು ಮಾಡಿದ ಚಿತ್ರವಿದು…

ಮತ್ತೆ ಸಿನಿಮಾ ಮಾಡುತ್ತಿರುವ ಯಾಮಿ ಗೌತಮ್-ಆದಿತ್ಯ ಧರ್: ಹೆಂಡತಿ ನಟಿ, ಗಂಡ ನಿರ್ದೇಶಕ