ನವದೆಹಲಿ: ಕ್ರಿಪ್ಟೋ ಕರೆನ್ಸಿ ಮೂಲಕ ನಡೆಯುತ್ತಿರುವ ಕಳ್ಳ ವ್ಯವಹಾರಗಳಿಗೆ ಕಡಿವಾಣ ಹಾಕಲಾಗುವುದು ಎಂದು ಕಳೆದ ವಾರ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದ ಸರ್ಕಾರ. ಈ ನಿಮಿತ್ತದ್ದ ಮಸೂದೆಯು ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇರುವುದರಿಂದ ಸಂಪುಟ ಟಿಪ್ಪಣಿಯನ್ನು ಹೊರಡಿಸಿದೆ.

ಕ್ರಿಪ್ರೋ ಕರೆನ್ಸಿ ಮೂಲಕ ಕಳ್ಳ ವ್ಯವಹಾರಕ್ಕೆ ಆಸ್ಪವಾಗುತ್ತದೆ. ಆದ್ದರಿಂದ ಇದನ್ನು ನಿಷೇಧಿಸುವುದು ಒಳಿತು ಎಂದು ಆರ್‌ಬಿಐ ಈ ಹಿಂದೆ ಸಲಹೆ ನೀಡಿತ್ತು. ಆದರೆ, ಇದನ್ನು ತಳ್ಳಿಹಾಕಿದ ಸರ್ಕಾರ, ಸಾರಾಸಗಟಾಗಿ ನಿಷೇಧಿಸುವುದಕ್ಕಿಂತ ಇದನ್ನು ನಿಯಂತ್ರಿಸುವುದು ಉತ್ತಮ ಎಂಬ ಅಭಿಪ್ರಾಯಕ್ಕೆ ಬಂದಿದೆ. ಕ್ರಿಪ್ಟೊ ಕರೆನ್ಸಿಯನ್ನು ಹೂಡಿಕೆಯಾಗಿ ಬಳಸಲು ಅಡ್ಡಿಯಿಲ್ಲ. ಆದರೆ, ಈ ರೀತಿಯ ಖಾಸಗಿ ಕರೆನ್ಸಿಗಳಿಗೆ ಕಾನೂನಿನ ಮಾನ್ಯತೆ ನೀಡುವುದಿಲ್ಲ ಎಂದು ಮೂರು ದಿನಗಳ ಹಿಂದೆ ಸಂಸತ್ತಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಷ್ಟನೆ ನೀಡಿದ್ದರು.

ಕ್ರಿಪ್ಟೊ ಕರೆನ್ಸಿಯಲ್ಲಿನ ಹೂಡಿಕೆಯನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ನಿಯಂತ್ರಣಕ್ಕೆ ತರಲಾಗುತ್ತದೆ. ಈಗಾಗಲೇ ಕ್ರಿಪ್ಟೊ ಕರೆನ್ಸಿಯಲ್ಲಿ ಹೂಡಿಕೆ ಮಾಡಿದವರು ಅದನ್ನು ಘೋಷಿಸಲು ಗಡುವನ್ನು ನಿಗದಿ ಮಾಡಲಾಗುತ್ತದೆ. ಅಷ್ಟರೊಳಗೆ ಘೋಷಣೆ ಮಾಡದವರ ವಿರುದ್ಧ ನಂತರ ಕ್ರಮ ಕೈಗೊಳ್ಳಲಾಗುತ್ತದೆ. ಇದರಲ್ಲಿ ದೊಡ್ಡ ಮೊತ್ತ ದಂಡ ಹಾಗೂ ಒಂದೂವರೆ ವರ್ಷದ ವರಗೆ ಸಜೆ ವಿಧಿಸುವ ಅಂಶವನ್ನು ಮಸೂದೆ ಒಳಗೊಂಡಿದೆ ಎನ್ನಲಾಗಿದೆ. ಜತೆಗೆ ಇಂಥ ಹೂಡಿಕೆಯಿಂದ ಗಳಿಸುವ ಆದಾಯಕ್ಕೆ ತೆರಿಗೆ ಹಾಕುವ ಅಂಶವೂ ನೂತನ ಮಸೂದೆಯಲ್ಲಿ ಇದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಪ್ರಸ್ತಾಪಿಸಿರುವ ವರ್ಚುವಲ್‌ ಕರೆನ್ಸಿಗೂ ಕ್ರಿಪ್ಟೊ ಕರೆನ್ಸಿಗೂ ಸಂಬಂಧವಿಲ್ಲ. ಡಿಜಿಟಲ್‌ ಕರೆನ್ಸಿಗೆ ನೋಟಿನ ಸ್ಥಾನಮಾನ ನೀಡಬೇಕು ಎಂದು ಆರ್‌ಬಿಐ ಕಳೆದ ಅಕ್ಟೋಬರ್‌ನಲ್ಲಿ ಮಾಡಿದ್ದ ಮನವಿಗೆ ಸರ್ಕಾರ ಸಮ್ಮತಿಸಿಲ್ಲ.

All Private Cryptocurrency Will Be Regulated

ಇದನ್ನು ಓದಿ: Bitcoin Explainer: ಬಿಟ್‌ಕಾಯಿನ್‌ ಎಂದರೇನು? ವಹಿವಾಟು ಹೇಗೆ ನಡೆಯುತ್ತೆ? ಇಲ್ಲಿದೆ ವಿವರ

ಇದನ್ನೂ ಓದಿ: Bitcoin Explainer: ಬಿಟ್‌ಕಾಯಿನ್‌ ಎಂದರೇನು? ವಹಿವಾಟು ಹೇಗೆ ನಡೆಯುತ್ತೆ? ಇಲ್ಲಿದೆ ವಿವರ