ನವದೆಹಲಿ: ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ್‌, ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶ (ಎನ್‌ಸಿಆರ್‌) ಸುತ್ತಮುತ್ತಲ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಭೂಕಂಪನ ಸಂಭವಿಸಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ, ಸಾವು-ನೋವು ವರದಿಯಾಗಿಲ್ಲ.

ರಿಕ್ಟರ್‌ ಮಾಪಕದಲ್ಲಿ ಭೂಕಂಪನ ತೀವ್ರತೆ 5.7 ದಾಖಲಾಗಿದ್ದು, ಭೂಕಂಪನದ ಕೇಂದ್ರ ಬಿಂದು, ಅಫ್ಘಾನಿಸ್ತಾನ ಮತ್ತು ತಜಕಿಸ್ತಾನದ ಗಡಿ ಮಧ್ಯೆ ಕಂಡುಬಂದಿದೆ.

ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರವು 5.7 ತೀವ್ರತೆಯ ಭೂಕಂಪನವು. ಬೆಳಗ್ಗೆ 9.45ರ ಸುಮಾರಿಗೆ ಆಗಿದೆ. ಇದರ ಕೇಂದ್ರಬಿಂದು ಅಫ್ಘನ್‌- ತಜಕಿಸ್ತಾನದ ಗಡಿ ಮಧ್ಯದಲ್ಲಿ ಹಿಂದು-ಖುಷ್‌ ಪ್ರಸ್ಥಭೂಮಿಯಲ್ಲಿ ಇದ್ದು, ಭೂ ಮೇಲ್ಮೈನಿಂದ 210 ಕಿ.ಮೀ. ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದೆ. ಉತ್ತರಾಖಂಡದಲ್ಲಿ 3.6 ತೀವ್ರತೆಯ ಭೂಕಂಪನ ಸಂಭವಿಸಿದೆ. ಭೂಮಿ ನಡುಗಿದ್ದರಿಂದ ಜನರು ಭಯ ಭೀತರಾಗಿ ಮನೆಯಿಂದ ಓಡಿ ಹೊರಗೆ ಬಂದಿದ್ದಾರೆ. ಆದರೆ  ಯಾವುದೇ ದೊಡ್ಡ ಅನಾಹುತ, ಮರಣ, ಗಾಯಗೊಂಡಿರುವ ಬಗ್ಗೆ ವರದಿ ಆಗಿಲ್ಲ ಎಂದು ತಿಳಿಸಿದೆ.

ಪಾಕ್‌ ರಾಜಧಾನಿ ಇಸ್ಲಾಮಾಬದ್‌ನ ಡಬ್ಲ್ಯೂಎಸ್‌ಡಬ್ಲ್ಯೂನಿಂದ 189 ಕಿ.ಮೀ. ದೂರದಲ್ಲಿ 7.3 ರಿಕ್ಟರ್‌ ತೀವ್ರತೆಯ ಭೂಕಂಪನ ವ್ಯಕ್ತವಾಗಿದೆ ಎಂದು ಪಾಕ್‌ ಭೂವಿಜ್ಞಾನ ಇಲಾಖೆ ಟ್ವೀಟ್‌ ಮಾಡಿದೆ.

20 ಸೆಕೆಂಡ್‌ ಕಾಲ ಭೂಮಿ ನಡುಗಿದ ಅನುಭವ ಆಗಿದೆ ಎಂದು ಉತ್ತರ ಪ್ರದೇಶದ ನೊಯ್ಡಾದ ಜನರು ಟ್ವೀಟ್ ಮಾಡಿದ್ದರೆ, ದೆಹಲಿಯಲ್ಲೂ ಕಂಪನ ಉಂಟಾಗಿದೆ ಎಂದು ಮತ್ತೊಬ್ಬರು ಅದಕ್ಕೆ ಪ್ರತಿಕ್ರಿಯಿಸಿದ್ದಾರೆ.

‘ಮಲಗಿದ್ದೆ ತಲೆ ತಿರುಗಿದಂತೆ ಆಯಿತು. ಕಣ್ಣುಬಿಟ್ಟೆ ಫ್ಯಾನ್‌ ವಾಲುಡುತ್ತಿತ್ತು. 25ರಿಂದ 30 ಸೆಕೆಂಡ್‌ ಕಟ್ಟಡ ನಡುಗಿತು. ಇದು ತೀವ್ರ ತರಹದ ಭೂಕಂಪ ಎಂದುಕೊಂಡೆ ಎಂದು ಶಶಾಂಕ ಸಿಂಗ್‌ ಟ್ವೀಟ್‌ ಮಾಡಿದ್ದಾರೆ.

Strong Tremors Felt In Delhi, Noida, J&K After Earthquake In Afghanistan

ಇದನ್ನು ಓದಿ: ಕರ್ನಾಟಕದಲ್ಲೂ ಭೂಕಂಪನ: ಜನರಲ್ಲಿ ಜೀವಭಯ

ಇದನ್ನೂ ಓದಿ: Earthquake experience: ಚಿಕ್ಕಬಳ್ಳಾಪುರದಲ್ಲಿ ನಡುಗಿದ ಭೂಮಿ: ಎರಡು ಬಾರಿ ಭೂಕಂಪನದ ಅನುಭವ.