ಅಮ್‌ಸ್ಟರ್‌ಡ್ಯಾಂ:  ಯುರೋಪ್‌ನ ಅಟ್ಲಾಂಟಿಕ್‌ ಸಾಗರದಲ್ಲಿ ಶಕ್ತಿಶಾಲಿ ‘ಯುನೈಸ್‌’ ಚಂಡಮಾರುತ ಬೀಸುತ್ತಿರುವ ಕಾರಣ ಮುನ್ನೆಚ್ಚರಿಕೆಯ ಕ್ರಮವಾಗಿ ಅನೇಕ ವಿಮಾನಯಾನ ಸಂಸ್ಥೆಗಳು  ಸಂಚಾರ ರದ್ದುಗೊಳಿಸಿವೆ.

ನೆದರ್‌ಲೆಂಡ್ಸ್‌ನ ಪ್ರತಿಷ್ಠಿತ ಕೆಎಲ್‌ಎಂ ವಿಮಾನಯಾನ ಸಂಸ್ಥೆ 167 ವಿಮಾನಗಳ ಸಂಚಾರವನ್ನು ಶುಕ್ರವಾರದ ವರೆಗೂ ರದ್ದುಗೊಳಿಸಿದೆ.

ಚಂಡಮಾರುತಿದಿಂದ ಭಾರಿ ಗಾಳಿ ಮತ್ತು ಮಳೆ ಬೀಳುತ್ತಿದ್ದು,  ವಿಮಾನ ಹಾರಾಟಕ್ಕೆ ಸಮಸ್ಯೆ ಎದುರಾದ ಕಾರಣ ಗುರುವಾರವೇ ಹಲವು ವಿಮಾನಗಳನ್ನು ರದ್ದುಗೊಳಿಸಲಾಗಿತ್ತು. ಈಗ ಇದನ್ನು ಶುಕ್ರವಾರಕ್ಕೂ ವಿಸ್ತರಿಸುವುದರ ಜೊತೆಗೆ ಇನ್ನಷ್ಟು ವಿಮಾನಗಳ ಸಂಚಾರವನ್ನು ರದ್ದು ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ. ಐರೋಪ್ಯ ಒಕ್ಕೂಟದ ಅನೇಕ ಸದಸ್ಯ ದೇಶಗಳಿಗೆ ಕೆಎಲ್‌ಎಂ ವೈಮಾನಿಕ ಸೇವೆ ಒದಗಿಸುತ್ತದೆ.

ತಾಸಿಗೆ 130 ಕಿ.ಮೀ. ವೇಗದಲ್ಲಿ ‘ಯುನೈಸ್‌’ ಚಂಡಮಾರುತ ಬೀಸುತ್ತಿದ್ದು, ನೆದರ್‌ಲೆಂಡ್ಸ್‌ನ ತೀರ ಪ್ರದೇಶಕ್ಕೆ ಶುಕ್ರವಾರ ಅಪ್ಪಳಿಸಬಹುದು ಎಂದು ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ಚಂಡಮಾರುತವು ಮುಂದೆ

ಬ್ರಿಟನ್‌ನತ್ತ ಸಾಗುವ ಲಕ್ಷಣವೂ ಇದೆ ಎಂದು ತಿಳಿಸಿದೆ. ಹೀಗಾಗಿ ಇಂಗ್ಲೆಂಡ್‌ ಮತ್ತು ಇನ್ನಿತರ ದೇಶಗಳ ಕಡಲಲ್ಲಿ ಎಚ್ಚರಿಕೆ ವಹಿಸಲಾಗಿದೆ.

‘ಯೂನೈಸ್‌’ ಚಂಡಮಾರುತವು ಅಟ್ಲಾಂಟಿಕ್‌ ಸಾಗರದ ದಕ್ಷಿಣ ಮತ್ತು ಪೂರ್ವ ಭಾಗದಲ್ಲಿ ಉದ್ಭವಿಸಿದ್ದು, ರಿಪ್‌ ರೋರಿಂಗ್‌ ಜೆಟ್‌ ಸ್ಟ್ರೀಮ್ ನೆರವಿನಿಂದ ಅದರ ವೇಗ ವರ್ಧಿಸಿದೆ.  ಇದರಿಂದ ಆಳೆತ್ತರದ ಅಲೆಗಳು ಏಳುತ್ತಿವೆ. ಜೋರು ಗಾಳಿಯಿಂದ ಕೂಡಿದ ಮಳೆ ವ್ಯಾಪಕವಾಗಲಿದೆ ಎಂದು ಹವಾಮಾನ ತಜ್ಞ ಸ್ಕಾಟ್‌ ಡಂಕನ್‌ ಟ್ವೀಟ್‌ ಮಾಡಿದ್ದಾರೆ.

Flights Cancelled, Alert Sounded As Powerful Storm Heads For UK

ಇದನ್ನು ಓದಿ: ಫಿಲಿಪ್ಪೀನ್ಸ್​ನಲ್ಲಿ ರೈ ಚಂಡಮಾರುತಕ್ಕೆ 208 ಮಂದಿ ಸಾವು

ಇದನ್ನೂ ಓದಿ: Jawad Cyclone: ಜವಾದ್ ಚಂಡಮಾರುತ ದುರ್ಬಲ, ಒಡಿಶಾ, ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಮಳೆ