ರಾಜಸ್ಥಾನ: ಟೋಕಿಯೋ ಪ್ಯಾರಾ ಒಲಿಂಪಿಕ್ಸ್ ಪದಕ ವಿಜೇತ ಭಾರತೀಯ ಕ್ರೀಡಾಪಟುಗಳಿಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೋಟಿಗಟ್ಟಲೆ ಬಹುಮಾನ ಘೋಷಿಸಿದ್ದಾರೆ.

ಚಿನ್ನದ ಪದಕ ವಿಜೇತ ಅವನಿ ಲೇಖರಾಗೆ ೩ ಕೋಟಿ, ಬೆಳ್ಳಿ ಗೆದ್ದ ದೇವೇಂದ್ರ ಜಜಾರಿಯಾಗೆ ೨ ಕೋಟಿ, ಕಂಚಿನ ಪದಕ ಗೆದ್ದ ಸುಂದರ್ ಸಿಂಗ್ ಗೆ ೧ ಕೋಟಿ ಬಹುಮಾನ ನೀಡಲಾಗುವುದು ಎಂದು ಸಿಎಂ ಪ್ರಕಟಿಸಿದ್ದಾರೆ. ಇದೇ ವೇಳೆ ಮೂವರು ಕ್ರೀಡಾಪಟುಗಳನ್ನು ರಾಜ್ಯ ಸರ್ಕಾರದ ಅರಣ್ಯ ಇಲಾಖೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಹುದ್ದೆಗೆ ನೇಮಿಸಲಾಗಿದೆ ಎಂದವರು ಹೇಳಿದ್ದಾರೆ.

ಭಾರತೀಯ ಶೂಟರ್ ಅವನಿ ಲೇಖರಾ ಸೋಮವಾರ ನಡೆದ ಮಹಿಳಾ R2-೧೦ ಮೀ. ಏರ್ ರೈಫಲ್ ಸ್ಟ್ಯಾಂಡ್ SH1 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಠಿಸಿದರು.  ೧೯ ವರ್ಷದ ಅವನಿ, ಪ್ಯಾರಾಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.