ಹರಿಯಾಣ: ಪ್ರೆಸ್ ಕಾನ್ಫೆರೆನ್ಸ್ ಮೂಲಕ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಮಾತನಾಡಿ, ರೈತರನ್ನು ವಿರೋಧಿಸಿದ್ದ ಪೊಲೀಸ್ ಅಧಿಕಾರಿ ಪರ ವಹಿಸಿಕೊಂಡಿರುವ ಘಟನೆ ನಡೆದಿದೆ.

ಹರಿಯಾಣದಲ್ಲಿ ನಡೆದ ರೈತ ಪ್ರತಿಭಟನೆಯ ಸಂದರ್ಭದಲ್ಲಿ ಐಎ.ಎಸ್ ಅಧಿಕಾರಿ ಆಯುಷ್ ಸಿನ್ಹಾ ಪೊಲೀಸರಿಗೆ ನಿರ್ದೇಶನ ನೀಡಿ, ಪ್ರತಿಭಟನಾ ನಿರತ ರೈತರು ಮುಖ್ಯಮಂತ್ರಿ ಸಭೆ ನಡೆಸುವ ಸ್ಥಳಕ್ಕೆ ಆಗಮಿಸದಂತೆ ತಡೆ ಹಿಡಿಯುವಂತೆ ಹೇಳುವ ಸನ್ನಿವೇಶದಲ್ಲಿ, ಯಾರೂ ತಪ್ಪಿಸಿಕೊಂಡು ಬರಬಾರದು, ಅಕಸ್ಮಾತ್ ಬಂದರೆ, ಅವರ ತಲೆ ಹೊಡೆದು ತರಬೇಕು ಎಂಬ ವಿವಾದಾತ್ಮಕ ಹೇಳಿಕೆಯ ಆಡಿಯೋ ವೈರಲ್ ಆಗಿತ್ತು.

ಇದಾದ ನಂತರ ಹೋರಾಟಗಾರರ ಮೇಲೆ ಲಾಠಿ ಛಾರ್ಜ್ ನಡೆಸಿದ್ದು, ಅನೇಕ ರೈತ ಹೋರಾಟಗಾರರು ತೀವ್ರವಾಗಿ ಗಾಯಗೊಂಡ ಹಿನ್ನೇಲೆ ವ್ಯಾಪಕವಾದ ಆಕ್ರೋಶ ಜನರಿಂದ ವ್ಯಕ್ತವಾಗಿತ್ತು. ಮುಖ್ಯಮಂತ್ರಿಯವರು ಇದೇ ಸಂದರ್ಭದಲ್ಲಿ ಜನರನ್ನು ಶಾಂತಗೊಳಿಸಲು ಪ್ರೆಸ್ ಕಾನ್ಫಿರೆನ್ಸ್ ನಲ್ಲಿ ಮಾತನಾಡಿ, ಅಧಿಕಾರಿಯನ್ನೇ ವಹಿಸಿಕೊಂಡಿದ್ದರು.

ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆ, ಎಲ್ಲದಕ್ಕೂ ಒಂದು ಮಿತಿ ಕೂಡಾ ಇದೆ, ನಾನು ಬರಬಾರದು ಎಂದು ಹೇಳುವುದು ಸರಿಯೇ? ಎಂದು ಪ್ರತಿಭಟನಾಕಾರರನ್ನು ಮುಖ್ಯಮಂತ್ರಿ ಪ್ರಶ್ನಿಸಿದ್ದರು.

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಅವಕಾಶವಿದೆ, ಕಪ್ಪುಬಾವುಟ ತೋರಿಸಬಹುದು, ಘೋಷಣೆ ಸಹ ಕೂಗಬಹುದಿತ್ತು.  ಆದರೆ ಹಿಂಸೆಯಲ್ಲಿ ತೊಡಗುವುದು ಸರಿಯಲ್ಲ ಎಂದು ಹೇಳುತ್ತಾ ಅಧಿಕಾರಿಯ ಕ್ರಮವನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡರು.

ಕೆಲವರು ನನಗೆ ಫೋನ್ ಮಾಡಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದರು ರೈತರೆಲ್ಲರೂ ನನ್ನವರೇ ಎಂದು ನಾನೇ ಸುಮ್ಮನಾಗಿದ್ದೆ.  ಈ ರೀತಿ ಪ್ರತಿಭಟನೆಯಿಂದ ಏನು ಲಾಭವಿದೆ?  ಅಧಿಕಾರಿಯ ವರ್ತನೆಯ ಕುರಿತು ತನಿಖೆ ನಡೆಸಲಾಗುವುದು, ಡಿಐಜಿ ಕೂಡಾ ಇದರ ಬಗ್ಗೆ ಗಮನ ಹರಿಸುತ್ತಿದ್ದಾರೆ ಎಂದವರು ಹೇಳಿದರು.

ಮರುದಿವಸ ಉಪಮುಖ್ಯಮಂತ್ರಿ ದುಶಯಂತ್ ಚೌಟಲ ಈ ಘಟನೆಯನ್ನು ಖಂಡಿಸಿ ಪ್ರತಿಕ್ರಿಯಿಸಿದ್ದಷ್ಟೇ ಅಲ್ಲದೆ, ಸರ್ಕಾರವು ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.