ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನ ಅಪಾರ್ಟ್ ಮೆಂಟ್ ಗಳಲ್ಲಿ ಕರೋನ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಬಿಬಿಎಂಪಿ ೮೨ ಅಪಾರ್ಟ್‌ಮೆಂಟ್ ಗಳನ್ನು ಸೀಲ್ ಡೌನ್ ಮಾಡಿದೆ.

ಅಪಾರ್ಟ್‌ಮೆಂಟ್ ಗಳಲ್ಲಿ ವಾಸಿಸುವವರು ಹೆಚ್ಚು ಪಾರ್ಟಿ ಮಾಡೋದು, ಮೋಜು, ಮಸ್ತಿ ಮಾಡೋದು ಜಾಸ್ತಿ ಇರೋದ್ರಿಂದ ಈ ಸಮಸ್ಯೆ ಉಲ್ಬಣವಾಗುವ ಸೂಚನೆ ಕಾಣುತ್ತಿದೆ.

ಈ ಕುರಿತು ಕ್ರಮ ತೆಗೆದುಕೊಂಡಿರುವ ಬಿಬಿಎಂಪಿ ವಿದೇಶಗಳಿಂದ ಅಪಾರ್ಟ್‌ಮೆಂಟ್ ಗಳಿಗೆ ಬರುವವರಿಗೆ ಕಡ್ಡಾಯವಾಗಿ ಕ್ವಾರಂಟೈನ್ ನಿಯಮ ವಿಧಿಸಲಿದೆ, ಹಾಗೆಯೇ ಕಡ್ಡಾಯವಾಗಿ ಕರೋನಾ ಟೆಸ್ಟ್ ಮಾಡಿಸಿಕೊಳ್ಳಲು ಸೂಚಿಸಿದೆ.