ನವದೆಹಲಿ: ದೇಶದಲ್ಲಿ ೪೫,೦೮೩ ಮಂದಿಗೆ ಹೊಸದಾಗಿ ಕೊರೊನಾ ಸೊಂಕು ಹರಡಿದೆ. ಮೂರನೆ ಅಲೆಯ ಭಯದ ನಡುವೆಯೇ ದಿನೇ ದಿನೇ ಸೊಂಕು ಹೆಚ್ಚುತ್ತಿದ್ದು, ಶಾಲೆಗೆ ಮಕ್ಕಳನ್ನು ಕಳಿಸುವ ಪಾಲಕರು ಸೇರಿದಂತೆ, ಸಾರ್ವಜನಿಕರು ಭಯಗೊಂಡಿದ್ದಾರೆ.

ಕೊರೊನಾದಿಂದ ೪೬೦ ಮಂದಿ ಮೃತರಾಗಿದ್ದು, ಒಟ್ಟು ೩,೨೬,೯೫,೦೩೦ ಪ್ರಕರಣಗಳು ಇವೆ.  ಸೊಂಕಿನ ಪ್ರಕರಣಗಳು ಸತತ ಐದನೇ ದಿನವೂ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಇಲ್ಲಿಯವರೆಗೆ ೪,೩೭,೮೩೦ ಮಂದಿ ಮೃತಪಟ್ಟಿದ್ದು, ಒಟ್ಟು ಸೊಂಕಿನ ಪ್ರಮಾಣ ೪,೩೭,೮೩೦ ಇದೆ.  ಗುಣಮುಖರಾಗುವ ಪ್ರಮಾಣ ೯೭.೫೩ ಇದೆ ಎಂದು ಸಚಿವಾಲಯ ಅಂಕಿ-ಅಂಶ ನೀಡಿದೆ.