ನವದೆಹಲಿ: ದೇಶದಲ್ಲಿ ಗುರುವಾರ ಬೆಳಿಗ್ಗೆಗೆ ಕೊನೆಗೊಂಡ 24 ತಾಸಿನಲ್ಲಿ ಕೊರೊನಾ ದೈನಿಕದ ಸಂಖ್ಯೆ 14,148ಕ್ಕೆ ತಗ್ಗಿದ್ದು,  ಇದೇ ಅವಧಿಯಲ್ಲಿ 302 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ಮರಣಿತರ ಸಂಖ್ಯೆ 5,12,924ಕ್ಕೆ ಏರಿದೆ. 24 ತಾಸಿನ ಅವಧಿಯಲ್ಲಿ 30 ಸಾವಿರಕ್ಕೂ ತುಸು ಹೆಚ್ಚು ಮಂದಿ ಕೋವಿಡ್‌ ಸೋಂಕಿನಿಂದ ಮುಕ್ತರಾಗಿದ್ದಾರೆ. ಚೇತರಿಕೆ ಪ್ರಮಾಣ ಶೇ. 98.46ಕ್ಕೆ ಏರಿದೆ. ಒಟ್ಟಾರೆ ಗುಣಮುಖರ ಸಂಖ್ಯೆ 4,22,19,896 ಇದೆ. ಒಟ್ಟಾರೆ ಸಕ್ರಿಯ ಪ್ರಕರಣಗಳು ಸಂಖ್ಯೆ1,48,359 (ಶೇ. 0.35) ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದೈನಿಕ ಪಾಸಿಟಿವಿಟಿ ದರ ಶೇ. 1.22 ಇದ್ದು, ಬುಧವಾರದವರೆಗೆ ದೇಶದಲ್ಲಿ ಒಟ್ಟಾರೆ 76,35,69,165 ಸ್ಯಾಂಪಲ್‌ಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಹೇಳಿದೆ.

ದೆಹಲಿಯಲ್ಲಿ 583 ಹೊಸ ಪ್ರಕರಣಗಳು ವರದಿಯಾಗಿದ್ದು, ಪಾಸಿಟಿವಿಟಿ ದರ ಶೇ. 1.05 ಇದೆ. ಮೂವರು ಸಾವನ್ನಪ್ಪಿದ್ದಾರೆ. 603 ರೋಗಿಗಳು ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ದೆಹಲಿಯಲ್ಲಿ ಒಟ್ಟಾರೆ ಕೇಸ್‌ಗಳ ಸಂಖ್ಯೆ 18,57,598ಕ್ಕೆ ಏರಿದ್ದು,  26,109 ಮಂದಿ ಒಟ್ಟಾರೆ ಸಾವನ್ನಪ್ಪಿದ್ದಾರೆ ಎಂದು ದೆಹಲಿ ಸರ್ಕಾರದ ಆರೋಗ್ಯ ಇಲಾಖೆಯ ವಾರ್ತಾಪತ್ರ ತಿಳಿಸಿದೆ.

ಓಮಿಕ್ರಾನ್‌ನಿಂದ ಪ್ರತಿರೋಧ ಶಕ್ತಿ ಹೆಚ್ಚಳ:

ಓಮಿಕ್ರಾನ್‌ ಸೋಂಕು ತೀವ್ರ ಪ್ರಸರಣ ಕಂಡಿದ್ದರೂ ಈ ವೈರಸ್‌ಗೆ ತಗುಲಿದವರಲ್ಲಿ ಪ್ರತಿರೋಧ ಶಕ್ತಿ ಕೂಡ ಹೆಚ್ಚಿದೆ. ಇದನ್ನು ‘ಹಾರ್ಡ್‌ ಇಮ್ಯೂನಿಟಿ’ ಎನ್ನಲಾಗುತ್ತದೆ ಎಂದು ಈ ಕುರಿತು ಅಧ್ಯಯನ ನಡೆಸಿದ ಅಮೆರಿಕದ ಪರಿಣತರ ತಂಡ ಹೇಳಿದೆ.

India reports 14,148 new cases

ಇದನ್ನು ಓದಿ: ಎಚ್‌ಐವಿ ಪೀಡಿತರಿಗೆ ಕೋವಿಡ್‌ ಸೋಕಿನಿಂದ 21 ರೂಪಾಂತರಿ ಸೃಷ್ಟಿ: ಅಧ್ಯಯನ

ಇದನ್ನೂ ಓದಿ: Corona infection : ಬೆಂಗಳೂರಿನಲ್ಲಿ 485 ಕೇಸ್ ಸೇರಿದಂತೆ ರಾಜ್ಯದಲ್ಲಿಂದು 1001 ಮಂದಿಗೆ ಕೊರೊನಾ ಸೋಂಕು ಧೃಡ: ಕಿಲ್ಲರ್ ಕೊರೊನಾಗೆ 18 ಮಂದಿ ಬಲಿ