ಭೋಪಾಲ್‌: ಮಧ್ಯಪ್ರದೇಶದ ಕಾಂತಿ ಜಿಲ್ಲೆಯ ಸ್ಲೀಮನಾಬಾದ್‌ನಲ್ಲಿ ನಿರ್ಮಾಣ ಹಂತದಲ್ ಬಾರ್ಗಿ ನಾಲಾ ಯೋಜನೆಯ ಸುರಂಗ ಶನಿವಾರ ಸಂಜೆ ಕುಸಿದಿದ್ದು, ಸಿಲುಕಿಕೊಂಡಿದ್ದ 9 ಕಾರ್ಮಿಕರ ಪೈಕಿ 7 ಮಂದಿಯನ್ನು ರಕ್ಷಿಸಲಾಗಿದೆ.

ರಾಜ್ಯ ವಿಪತ್ತು ನಿರ್ವಹಣಾ ತಂಡ (ಎಸ್‌ಡಿಆರ್‌ಎಫ್‌)  ತಂಡ ಪರಿಹಾರ ಕಾರ್ಯಕೈಗೊಂಡಿದ್ದು, ಸ್ಥಳೀಯ ಜಿಲ್ಲಾಧಿಕಾರಿ ಪ್ರಿಯಾಂಕ್‌ ಮಿಶ್ರಾ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಶ್‌ ರಾಜೋರಾ ಖುದ್ದು ನಿಗಾ ವಹಿಸಿದ್ದಾರೆ.

ಇನ್ನಿಬ್ಬರು ಕಾರ್ಮಿಕರ ರಕ್ಷಣೆಗಾಗಿ ಸುರಂಗದಲ್ಲಿನ ಭೂಕುಸಿತದ ಅವಶೇಷಗಳನ್ನು ತೆಗೆಯಲಾಗುತ್ತಿದೆ. ಸುರಂಗದ ಮಧ್ಯೆ ಸಿಲುಕಿರುವ ಕಾರ್ಮಿಕರು ಕರೆಗೆ ಸ್ಪಂದಿಸುತ್ತಿದ್ದಾರೆ ಎಂದು ರಾಜೋರಾ ಹೇಳಿದ್ದಾರೆ.

ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌  ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದು, ಪರಿಹಾರ ಕಾರ್ಯ ಪೂರ್ಣವಾಗುವವರೆಗೂ ಸ್ಥಳದಲ್ಲೇ ಮೊಕ್ಕಾಂ ಹೂಡುವಂತೆ ಕಾಂತಿ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

ನರ್ಮದಾ ನದಿಯ ರಾಣಿ ಅವಂತಿ ಬಾಯಿ ಸಾಗರ್‌ ಅಣೆಕಟ್ಟೆಯ ಬಲದಂಡೆಯ ಬಾರ್ಗಿ ವಿಭಾಗೀಯ ಯೋಜನೆಗಳ ಕಾಮಗಾರಿ ನಡೆಯುತ್ತಿವೆ. ಈ ನಾಲೆಗಳ ಮೂಲಕ ರೇವಾ ಮತ್ತು ಸತ್ನಾ ಜಿಲ್ಲೆಗಳಿಗೆ ನೀರಾವರಿ ಕಲ್ಪಿಸಲಾಗುತ್ತಿದೆ. ಈ ವಿಸ್ತರಣಾ ಕಾಮಗಾರಿಯಲ್ಲಿ ಕಾಂತಿ ಜಿಲ್ಲೆಯ ಸ್ಲೀಮನಾಬಾದ್‌ನಲ್ಲಿ ಸುರಂಗದ ಮೂಲಕ ನಾಲೆ ಸಾಗುತ್ತದೆ.. ಮುಖ್ಯ ನಾಲೆಯ ಉದ್ದ 194.4 ಕಿ.ಮೀ. ಇದ್ದು, ಇದರ ವಿತರಣಾ ಕಾಲುವೆಗಳು 255 ಕಿ.ಮೀ. ಉದ್ದಕ್ಕೂ ಹರಡಿಕೊಂಡಿದೆ. ಒಟ್ಟಾರೆ ಬಲದಡೆಯ ಯೋಜನಾ ಪ್ರದೇಶ 2,700 ಕಿ.ಮೀ. ಈ ಯೋಜನೆ ಪೂರ್ಣಗೊಂಡ ನಂತರ 2.45 ಲಕ್ಷ ಹೆಕ್ಟೇರ್‌ ಭೂಮಿಗೆ ನೀರುಣಿಸುತ್ತದೆ.

Madhya Pradesh Tunnel Caves In, 7 Labourers Rescued, 2 Still Trapped

ಇದನ್ನು ಓದಿ: ಕಪ್ಪು ಬಣ್ಣಕ್ಕೆ ತಿರುಗಿದ ನದಿ, ಅರುಣಾಚಲದಲ್ಲಿ ಸಾವಿರಾರು ಮೀನುಗಳ ಮಾರಣಹೋಮ

ಇದನ್ನೂ ಓದಿ: ಕೇರಳದಲ್ಲಿ ಮಳೆಯಿಂದ ಭೂಕುಸಿತ, ಪ್ರವಾಹಕ್ಕೆ 27 ಮಂದಿ ಸಾವು