ಚಿಕ್ಕಮಗಳೂರು (ಕನ್ನಡನಾಡಿ ಸುದ್ದಿಜಾಲ):  ಮೂಡಿಗೆರೆ ತಾಲ್ಲೂಕಿನಲ್ಲಿನ ಸುಂಕಸಾಲೆ ಗ್ರಾಮಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ದುರ್ಗದ ಹಳ್ಳಿಯ ದೇವನಗದ್ದೆಯಲ್ಲಿ  ಭಾನುವಾರದಂದು ತಡರಾತ್ರಿ ಮನೆಯ ಗೋಡೆ ಮಳೆಯಿಂದ ಕುಸಿದ ಘಟನೆ ನಡೆದಿದೆ.

ಮನೆಯ ನಿವಾಸಿ ರಮೇಶ್ ಗೌಡ ಅವರು ರಾತ್ರಿ ಉಂಟಾದ ಶಬ್ದಕ್ಕೆ ಎದ್ದು ಹೋ ನೋಡಿದಾಗ ಮನೆಯ ಹಿಂಭಾಗದ ಗೋಡೆ ಕುಸಿದಿರುವುದು ಕಂಡಿದೆ.   ಅದೃಷ್ಟವಶಾತ್ ಯಾವುದೇ ಸಾವು-ನೋವಿಲ್ಲದೆ ಕುಟುಂಬದ ಸದಸ್ಯರು ಪಾರಾಗಿದ್ದಾರೆ.

ಮಲೆಮನೆ, ದುರ್ಗದಹಳ್ಳಿಗಳಲ್ಲಿ ೨0೧೯ ರಲ್ಲಿ ನೂರಾರು ಜನರ ಮನೆಗಳು ಕುಸಿದು ಹೋಗಿದ್ದವು, ಇದೀಗ ಮತ್ತೆ ಮನೆ ಕುಸಿತ ಉಂಟಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.  ಘಟನೆ ನಡೆದ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ