ದೆಹಲಿ (ಕನ್ನಡನಾಡಿ ಸುದ್ದಿಜಾಲ): ಮತ್ತೆ ಮೂರನೇ ಅಲೆಯಲ್ಲಿ ಜಗತ್ತನ್ನು ತಲ್ಲಣಿಸುವಂತೆ ಮಾಡುತ್ತಿರುವ ಕೊರೋನಾ ವೈರಾಣುವನ್ನು ಮಣಿಸಲು ‘ಮಿಶ್ರ ವ್ಯಾಕ್ಸಿನ್’ ವಿಧಾನವನ್ನು ಪರಿಗಣಿಸಲಾಗುತ್ತಿದೆ ಎಂದು ಸಂಶೋಧನೆಗಳು ದೃಢಪಡಿಸಿವೆ.

ದೇಶೀಯ ವ್ಯಾಕ್ಸಿನ್ ಗಳಾದ ಕೋವಿಡ್ ಶೀಲ್ಡ್ ಮತ್ತು ಕೋವ್ಯಾಕ್ಸಿನ್ ಗಳಲ್ಲಿ ಯಾವುದು ಬೆಸ್ಟ್ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮನೆ ಮಾಡಿತ್ತು.  ಇದೇ ವೇಳೆ ಕೋವಿಡ್-೧೯ ಲಸಿಕೆಯ ಈ ಮಿಶ್ರಣವು ಉತ್ತರ ಪ್ರದೇಶದಲ್ಲಿ ಯಶಸ್ವಿಯಾಗಿ ಪ್ರಯೋಗವಾಗಿದೆ.

ರಾಜ್ಯದ ಸುಮಾರು ೧೮ ಮಂದಿಯ ಮೇಲೆ ಈ ಪ್ರಯೋಗ ನಡೆಸಿದ್ದಾರೆ, ಇದರಲ್ಲಿ ಮೊದಲ ಡೋಸ್ ಕೋವಿಶೀಲ್ಡ್ ನೀಡಲಾಗಿದ್ದರೆ, ಎರಡನೇ ಡೋಸ್ ಅನ್ನು ಕೋವ್ಯಾಕ್ಸಿನ್ ಅನ್ನು ನೀಡಲಾಗಿದೆ.  ಈ ರೀತಿಯ ‘ವ್ಯಾಕ್ಸಿನ್ ಮಿಶ್ರಣ’ ವೈಜ್ಞಾನಿಕ ಪ್ರಯೋಗದಿಂದ ಇನ್ನಷ್ಟು ಬಲವಾದ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗಿರುವುದು ಕಂಡುಬಂದಿದೆ ಎಂದು ಐಸಿಎಂಆರ್ ವಿಜ್ಞಾನಿ ರಜನಿಕಾಂತ್ ತಿಳಿಸಿದ್ದಾರೆ.