ಶ್ರೀನಗರ: ಭಯೋತ್ಪಾದನಾ ಚಟುವಟಿಕೆಯಿಂದಾಗಿ ಋಣಾತ್ಮಕ ಸುದ್ದಿಯಲ್ಲಿ ಇರುತ್ತಿದ್ದ  ಜಮ್ಮು-ಕಾಶ್ಮೀರ ಈಗ ಧನಾತ್ಮಕವಾದ ಅಂಶಕ್ಕೆ ಸುದ್ದಿಯಾಗಿದೆ. ಕೇಂದ್ರಾಡಳಿತ ಪ್ರದೇಶದ ಬೇಸಿಗೆಯ ರಾಜಧಾನಿಯಾದ ಐತಿಹಾಸಿಕ ನಗರ ಶ್ರೀನಗರವು ವಿಶ್ವಸಂಸ್ಥೆಯ ಶೈಕ್ಷಣಿಕ, ವಿಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೊ)ಯ ಸೃಜನಾತ್ಮಕ ನಗರದ ಪಟ್ಟಿಗೆ ಸೇರಿದೆ. ಕರಕುಶಲ ಮತ್ತು ಜಾನಪದ ಕಲೆಯ ಶ್ರೀಮಂತಿಕೆಯನ್ನು ಹೊಂದಿರುವ ನಗರಗಳನ್ನು ಈ ಪಟ್ಟಿಯಲ್ಲಿ ಗುರುತಿಸಲಾಗುತ್ತದೆ. ಶ್ರೀನಗರವು ಶತಮಾನಗಳಿಂದ ಕುಸುರಿ ಕೆಲ ಮತ್ತು ಜಾನಪದ ಪರಂಪರೆಯ ಭವ್ಯ ಇತಿಹಾಸವನ್ನು ಹೊಂದಿದೆ.

ಶ್ರೀನಗರವನ್ನು ಸೃಜನಾತ್ಮಕ ನಗರದ ಪಟ್ಟಿಗೆ ಸೇರಿಸಿರುವ ವಿಷಯವನ್ನು ಯುನೆಸ್ಕೊ ತನ್ನ ವೆಬ್‌ಸೈಟ್‌ನಲ್ಲಿ ಸೋಮವಾರ ಪ್ರಕಟಿಸಿದ್ದು, ಈ ಪಟ್ಟಿಗೆ 49ನೇ ನಗರಗಳನ್ನು ಹೊಸದಾಗಿ ಅಡಕ ಮಾಡಲಾಗಿದೆ. ಈ ಮೂಲಕ ಒಟ್ಟಾರೆ ನಗರಗಳ ಸಂಖ್ಯೆ 246ಕ್ಕೆ ಏರಿದೆ ಎಂದು ಯುನೆಸ್ಕೊ ಮಹಾನಿದರ್ದೇಶಕ ಆಂಡ್ರೆ ಅಜೌಲೆ ಹೇಳಿದ್ದಾರೆ.

ನಾಲ್ಕು ವರ್ಷ ಅವಿರತ ಶ್ರಮ:

ಯುನೆಸ್ಕೊ ಸೃಜನಾತ್ಮಕ ನಗರಗಳ ಪಟ್ಟಿಗೆ ಶ್ರೀನಗರವನ್ನು ಸೇರಿಸಬೇಕೆಂದು ಜಮ್ಮು-ಕಾಶ್ಮೀರದ ಇನ್‌ಟೆಕ್‌ ಸಂಚಾಲಕ ಸಲೀಮ್‌ ಬೇಗ್‌ ನಾಲ್ಕು ವರ್ಷದಿಂದ ಅವಿರತವಾಗಿ ಶ್ರಮಿಸಿದ್ದರು. ಕಾಶ್ಮೀರದ ಕುಸರಿ ಕಲೆಗಾರಿಕೆ, ಶ್ರೀಮಂತ ಜಾನಪದ ಹಿನ್ನೆಲೆ ಮಾಹಿತಿಯನ್ನು ಕ್ರೋಢೀಕರಿಸಿ ಯುನೆಸ್ಕೊಗೆ ಸಲ್ಲಿಸಿದ್ದರು. ಶತಮಾನಗಳಷ್ಟು ಹಳೆಯ ಕರಕುಶಲ ಕಲೆಯನ್ನು ಜೀವಂತವಾಗಿರಿಸಿರುವ ಕಾಶ್ಮೀರದ ಕಲಾಕಾರರಿಗೆ ಸಂದ ಬಹುದೊಡ್ಡ ಮನ್ನಣೆ ಇದಾಗಿದೆ ಎಂದು ಸಲೀಮ್‌ ಹರ್ಷ ವ್ಯಕ್ತಪಡಿಸಿದ್ದಾರೆ. 2109ರಲ್ಲೇ ಶ್ರೀನಗರಕ್ಕೆ ಈ ಗೌರವ ಸಿಗಬೇಕಿತ್ತು. ಆದರೆ, ಕೈತಪ್ಪಿತು. ಈ ಸಾರಿ ಭಾರತದಿಂದ ಎರಡು ಶ್ರೀನಗರ ಮತ್ತು ಗ್ವಾಲಿಯರ್‌ಗಳು ಯುನೆಸ್ಕೊ ಸೃಜನಾತ್ಮಕ ನಗರದ ಪಟ್ಟಿಗೆ ಸೇರಿಲು ಪ್ರಯತ್ನಿಸಿದ್ದವು. ಅದೃಷ್ಟ ಶ್ರೀನಗರಕ್ಕೆ ಒಲಿಯಿತು ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಮೋದಿ ಅಭಿನಂದನೆ:

ಶ್ರೀನಗರವು ಯುನೆಸ್ಕೊದ ಪ್ರತಿಷ್ಠಿತ ಪಟ್ಟಿಗೆ ಸೇರಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಜಮ್ಮು-ಕಾಶ್ಮೀರದ ಜನರನ್ನು ಅಭಿನಂದಿಸಿದ್ದಾರೆ.

ಉಚ್ಚ ಕಲಾಶ್ರೀಮಂತಿಕಯನ್ನು ಹೊಂದಿರುವ ಸುಂದರ ನಗರ ಶ್ರೀನಗರಕ್ಕೆ ಅರ್ಹ ಸ್ಥಾನಮಾನ ದೊರಕಿದೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

Srinagar On UNESCO Creative Cities List

ಇದನ್ನು ಓದಿ: Music Dance Festival: ಪ್ರಾಚೀನ ಕಲೆಗಳು ಸಂಸ್ಕೃತಿಯ ಬೇರು

ಇದನ್ನು ಓದಿ: Exhibition: ಮೈಸೂರು; ಗಮನ ಸೆಳೆಯುತ್ತಿದೆ ಗಾಂಧಿ ಶಿಲ್ಪ ಬಜಾರ್ ವಸ್ತುಪ್ರದರ್ಶನ, ಮಾರಾಟ ಮೇಳ.