ಲಂಡನ್‌:  ಅಳಿಲು ನಿರುಪದ್ರವಿ ಎಂದು ಮರುಕು ಪಡೆಯುವರು ಬಹಳ ಮಂದಿ ಇದ್ದಾರೆ. ಆದರೆ, ಬ್ರಿಟನ್‌ನ  ಬಕ್ಲಿ ಪಟ್ಟಣದಲ್ಲಿ ಅಳಿಲೊಂದು ಕ್ರಿಸ್‌ಮಸ್‌ ಸಂಭ್ರಮದಲ್ಲಿದ್ದವರ ಮೇಲೆ ಒಂದಲ್ಲ ಎರಡು ದಿನ ಎರಗಿ, 18 ಜನರನ್ನು ಗಾಯಗೊಳಿಸಿದೆ.

ಫ್ಲಿಂಟ್‌ಶೈರ್‌ನ ಬಕ್ಲಿ ಎಂಬ ಪಟ್ಟಣದಲ್ಲಿ ಬೂದು ಬಣ್ಣದ ಅಳಿಲು ಏಕಾಏಕಿ ಜನರ ಮೇಲೆ ದಾಳಿ ಮಾಡಲು ಆರಂಭಿಸಿತ್ತು. ಜನರನ್ನು ಕಚ್ಚಿರುವ ಈ ಅಳಿಲಿಗೆ ಸಿನಿಮಾವೊಂದ ದುಷ್ಟ ಅಳಿನ ಹೆಸರು ‘ಸ್ಟ್ರೈಪ್‌’  ಅನ್ನೆ ಈ ಅಳಿಲಿಗೂ ಇರಿಸಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.

ಈ ಅಳಿಲಿಗೆ ಆಹಾರ ಕೊಟ್ಟು ಪೋಷಿಸುತ್ತಿದ್ದ ಕೊರಿನ್ನೆ ರೆನಾಲ್ಡ್‌ ಮುಜುಗರಕ್ಕೆ ಒಳಗಾಗಬೇಕಾಯಿತು. ಅದು ಸೌಮ್ಯವಾಗಿತ್ತು. ನಮ್ಮ ತೋಟಕ್ಕೆ ಕಳೆದ ಮಾರ್ಚ್‌ನಿಂದ  ಭೇಟಿ ನೀಡುತ್ತಿತ್ತು. ಸ್ನೇಹದಿಂದ ವರ್ತಿಸುತ್ತಿತ್ತು. ಆದರೆ ಈಗೇಕೆ ಹೀಗೆ ಕಟ್ಟ ನಡವಳಿಕೆ ತೋರಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ರೆನಾಲ್ಡ್‌ ಹೇಳಿದ್ದಾರೆ.

ಪಕ್ಷಿಗಳಿಗೆ ಇರಿಸಿದ್ದ ಆಹಾರವನ್ನು ಕದಿಯಲು ಮೊದಲು ಈ ಅಳಿಲು ಬಂತು ಆದರೆ, ನಂತರ ಸ್ನೇಹಮಯಿ ಆಯಿತು. ಆದರೆ ಕ್ರಿಸ್‌ಮಸ್‌ ಹಿಂದಿನ ದಿನ ಬಂದಾಗ ಆಹಾರ ಕೊಡಲು ಹೊದರೆ ಕಚ್ಚಿತು ಎಂದು ರೆನಾಲ್ಡ್‌ ಹೇಳಿದ್ದಾರೆ. ನಂತರ ಫೇಸ್‌ಬುಕ್‌ನಲ್ಲಿ ನೋಡಿದಾಗ ಇದೇ ರೀತಿ ಹಲವರಿಗೆ ಕಚ್ಚಿರುವುದು ತಿಳಿದುಬಂತು ಎಂದು ಎಂದಿದ್ದಾರೆ.

ಅದಕ್ಕೇನಾಗಿದೆ? ಕೂಡಲೇ ಅದನ್ನು ಹಿಡಯಬೇಕು ಎಂದು ನಿರ್ಧರಿಸಿದೆ. ಸಾಮಾನ್ಯವಾಗಿ ಅದಕ್ಕೆ ಆಹಾರ ನೀಡುತ್ತಿದ್ದ ಸ್ಥಳದಲ್ಲಿ ಹೋಗಿ ಬಲೆ ಬೀಸಿ 20 ನಿಮಿಷ ಕಾದು ಕುಳಿತೆ ನಂತರ ಅದು ಆ ಬಲೆಗೆ ಬಿತ್ತು. ನಾನು ಅದಕ್ಕೆ ಮೋಸ ಮಾಡಿದೆ ಎನಿಸಿದರೂ ದುಷ್ಟರಿಗೆ ಬುದ್ಧಿ ಕಲಿಸಬೇಕಿತ್ತು ಎಂದು ರೆನಾಲ್ಡ್‌ ಬರೆದಿದ್ದಾರೆ.

Vicious Squirrel Attacks 18 People In Two-Day

ಇದನ್ನು ಓದಿ: ಕಾನ್ಪುರದ ಸರ್ಕಾರಿ ಕಚೇರಿಯಿಂದ ಕಡತ ಕದ್ದೋಡಿದ ಮೇಕೆ ಹಿಂದೆ ಬಿದ್ದ ನೌಕರ

ಇದನ್ನೂ ಓದಿ: ಭಾರತದಲ್ಲಿ 6.20 ಕೋಟಿ ಬೀದಿ ನಾಯಿ, 91 ಲಕ್ಷ ಬೆಕ್ಕುಗಳಿವೆ!