ಬೆಂಗಳೂರು: ಶುಕ್ರವಾರ ವರಮಹಾಲಕ್ಷ್ಮೀ ವ್ರತವನ್ನು ರಾಜ್ಯಾದ್ಯಂತ ಆಚರಿಸಲಿದ್ದು, ಹಬ್ಬದ ಸಾಮಾನು ಖರೀದಿಸಲು ವಾರದಿಂದಲೇ ಜನ ಚಿಕ್ಕಪೇಟೆ, ಬಳೆಪೇಟೆ, ಮಾಮೂಲ್ ಪೇಟೆ, ಮಲ್ಲೇಶ್ವರಂ, ಯಶವಂತಪುರ ಮಾರ್ಕೆಟ್ ಮುಂತಾದ ಜನಸಂದಣೆ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿರುವುದು ಮಾಮೂಲಿಯಾಗಿದೆ.

ನಾಳೆನೇ ವರಮಹಾಲಕ್ಷ್ಮೀ ಹಬ್ಬ ಇದ್ದರೂ ಸಹ ಸರ್ಕಾರ, ಬಿಬಿಎಂಪಿ ಅಧಿಕೃತ ನಿಯಮ ಹೇರದೆ ಇರೋದು, ಕೊರೊನಾ ಸೋಂಕು ಹರಡದಂತೆ ಅನುಸರಿಸಬೇಕಾದ ನಿಯಮ ಗಾಳಿಗೆ ತೂರಲು ಇನ್ನಷ್ಟು  ಅವಕಾಶ ಆಗಿದೆ.

ಬೆಂಗಳೂರಿನಲ್ಲಿ ಮಾರುಕಟ್ಟೆಯಲ್ಲಿ ಆಗಮಿಸಿದ್ದ ಬಿಬಿಎಂಪಿ ಮಾರ್ಷಲ್ಸ್, ಮಾಸ್ಕ್ ಹಾಕದವರಿಗೆ ದಂಡ ವಿಧಿಸಿದ್ದಾರೆ.  ಬಿಬಿಎಂಪಿಯಿಂ ಹೆಚ್ಚಿನ ಜನಸಂದಣೆ ಸ್ಥಳಗಳಿಗೆ ಮಾರ್ಷಲ್ ಗಳು ನಿಯೋಜನೆಯಾಗಿದ್ದಾರೆ.  ಇದೋಂದು ತರ ಸಾಮೂಹಿಕವಾಗಿ ಜನ ಮಾಸ್ಕ್ ಧರಿಸದೆ ಅಡ್ಡಾಡುವುದು ಬಿಬಿಎಂಪಿಗೂ ಸಹ ತಲೆನೋವಾಗಿದೆ.