ನವದೆಹಲಿ: ಸಕ್ಕಾರೆ ಕಾರ್ಖಾನೆಗಳಿಲ್ಲಿ ಉತ್ಪಾದನೆಯಾಗುವ ಎಥನಾಲ್‌ನನ್ನು ಇಂಧನ ತೈಲಕ್ಕೆ ಬೆರೆಸುವ ಕಾರ್ಯಕ್ರಮ ಆರಂಭಿಸಿರುವ ಸರ್ಕಾರ, ಈಗ ಸಕ್ಕರೆ ಕಾರ್ಖಾನೆಯಿಂದ ಹೊರಸೂಸುವ ತ್ಯಾಜ್ಯವನ್ನು ಸುಸ್ಥಿರ ವೈಮಾನಿಕ ಇಂಧನದ (ಎಸ್‌ಎಎಫ್‌) ಆಕರವನ್ನಾಗಿ ಬಳಸುವ ಪ್ರಯೋಗಕ್ಕೆ ಉತ್ತೇಜನ ನೀಡುತ್ತಿದೆ. ಇದರಿಂದ ದುಬಾರಿಯಾಗಿರುವ ನಶಿಸುವ ಇಂಧನ ಮೇಲಿನ ಅವಲಂಬನೆ ಕಡಿಮೆಯಾಗಿ, ಪರಿಸರ ಸ್ನೇಹಿಯಾದ ಮತ್ತು ಕಡಿಮೆ ಖರ್ಚಿನಲ್ಲಿ ಸುಸ್ಥಿರವಾದ ಇಂಧನ ಪಡೆಯಲು ಸಾಧ್ಯವಿದೆ. ಈ ಸುಸ್ಥಿರ ಇಂಧನವು ಜಾಗತಿಕ ತಾಪಮಾನವನ್ನು ತಗ್ಗಿಸುವ ಭಾರತದ ಸಂಕಲ್ಪವನ್ನು ಈಡೇರಿಸುವ ಮಾರ್ಗವೂ ಆಗಿದೆ.

ಇಂಥ ತ್ಯಾಜ್ಯವನ್ನು ಸಹ-ವಿದ್ಯುದ್ವಿಭಜನೆ (ಕೋ-ಎಲೆಕ್ಟೋಲಿಸಿಸ್​) ಪ್ರಕ್ರಿಯೆಗೆ ಒಗ್ಗು ಮಾಡುವ ಮೂಲಕ ಎಸ್​ಎಎಫ್‌ ಪಡೆಯಬಹುದಾಗಿದೆ. ಸಹ- ದ್ಯುದ್ವಿಭಜನೆ ಎನ್ನುವುದು ಕ್ಲಿಷ್ಟವಾದ ಪ್ರಕ್ರಿಯೆಯೇನೂ ಅಲ್ಲ. ಇದು ಪಠ್ಯಕ್ರಮ ಥಿಯರಿಯಿಂದ ಕಾರ್ಖಾನೆಯ ಪ್ರಯೋಗಕ್ಕೆ ಪಕ್ಕಾಗಿದೆ.

ಇದು ನೀರಿನಿಂದ ಜಲಜನಕ ಮತ್ತು ಆಮ್ಲಜನಕವನ್ನು ವಿದ್ಯುತ್​ ಬಳಕೆ ಮಾಡಿ ಪ್ರತ್ಯೇಕ ಮಾಡುವ ಪ್ರಕ್ರಿಯೆ. ಇದರಲ್ಲಿ ಇಂಗಾಲದ ಡೈಆಕ್ಸೈಡ್‌​ ಕೂಡ ಪ್ರತ್ಯೇಕಗೊಂಡು ಸಿನ್​ ಅನಿಲ ಆಗುತ್ತದೆ. ಅದು ಇಂಗಾಲದ ಮಾನಾಕ್ಸೈಡ್​ ಮತ್ತು ಜಲಜನಕವನ್ನು ಉತ್ಪತ್ತಿ ಮಾಡುತ್ತದೆ ಸಿನ್​ ಅನಿಲವು ಅಥವಾ ಸಿನ್​ ಕಚ್ಚಾ ಧಾತು. ವೈಮಾನಿಕ ಇಂಧನದ ತಯಾರಿಕೆಗೆ ಅಗತ್ಯವಾದ ಇಂಗಾಲ ಆಧಾರಿತ ರಾಸಾಯನಿಕವನ್ನು ವರ್ಗೀಕರಿಸುವ ಸಂಯುಕ್ತ ಆಗಿದೆ.

ಸಹ-ವಿದ್ಯುದ್ವಿಭನೆಯ ಪ್ರಕ್ರಿಯೆಗೆ ಶಾಖ  ಬೇಕು. ಇದನ್ನು ಸಾಧಿಸಲು ಘನ ವಿದ್ಯುದ್ವಿಭಜನೆಯ ಕೋಶದ (ಎಸ್​ಒಇಸಿ) ತಂತ್ರಜ್ಞಾನದಿಂದ ಮಾತ್ರ ಸಾಧ್ಯ.

ಪುಣೆ ಮೂಲದ ಕಂಪನಿ “ಎಚ್​2ಇ ಪವರ್​ ಸಿಸ್ಟಂ” ಕಂಪನಿ ಸಹ-ವಿದ್ಯುದ್ವಿಭಜಕ ಪ್ರಕ್ರಿಯೆಯಿಂದ ಎಸ್​ಎಎಫ್‌​ ತಯಾರು ಮಾಡುವ ಪ್ರಯೋಗವನ್ನು ಆರಂಭಿಸಿದೆ. ಇದು ಯಶಸ್ವಿಯಾವುದನ್ನೇ ಕಾಗುತ್ತಿರುವ ಮಹಾರಾಷ್ಟ್ರದ ಕೆಲವು ಸಕ್ಕರೆ ಕಾರ್ಖಾನೆಗಳು ಮತ್ತು ವಸಂತದಾದಾ ಸಕ್ಕರೆ ಸಂಸ್ಥೆಯು ಎಸ್​ಎಎಫ್‌ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ತುದಿಗಾಲಲ್ಲಿ ನಿಂತಿವೆ.

HOW Sugar Plants Can Fly Airplanes

ಇದನ್ನು ಓದಿ: ದೇಶದಲ್ಲೆಲ್ಲೂ ವಿದ್ಯುತ್‌ಗೆ ಬರವಿಲ್ಲ, ಎಲ್ಲಾದರೂ ಇದ್ದರೆ ಅದು ಆಯಾ ರಾಜ್ಯಗಳ ಇತಿ-ಮಿತಿಗಳಿಂದಾಗಿರಬಹುದು: ಇಂಧನ ಸಚಿವ ಆರ್‌ಕೆ ಸಿಂಗ್‌

ಇದನ್ನೂ ಓದಿ: Electric Vehicle: ಮುಂದಿನ 2 ವರ್ಷದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಪೆಟ್ರೋಲ್‌ ವಾಹನದಷ್ಟೇ ಆಗಲಿದೆ