ದೇಹದ ತೂಕವನ್ನು ಇಳಿಸಕೊಳ್ಳಲು ಜನರು ಬೇರೆ ಬೇರೆ ರೀತಿಯ ಕ್ರಮಗಳನ್ನು ಅನುಸರಿಸಿದರೂ ಬಹಳಷ್ಟು ಜನರಿಗೆ ಹೊಟ್ಟೆಯ ಭಾಗದಲ್ಲಿನ ಬೊಜ್ಜು ದೊಡ್ಡ ಸಮಸ್ಯೆಯಾಗಿದೆ. ಈ ಹೊಟ್ಟೆಯ ಭಾಗದ ಬೊಜ್ಜು ಇಳಿಸುವುದು ಹಲವರಿಗೆ ಅದರಲ್ಲೂ ಮಹಿಳೆಯರಿಗೆ ದೊಡ್ಡ ಸಾಧನೆಯೇ ಸರಿ.

ಕೊಬ್ಬಿನ ಕೇಂದ್ರವಾಗಿರುವ ಹೊಟ್ಟೆ, ದೇಹದ ಆರೋಗ್ಯದ ಮೇಲೂ ಪ್ರತಿಕೂಲ ಪರಿಸ್ಥತಿಯನ್ನು ನಿರ್ಮಾಣ ಮಾಡುತ್ತದೆ. ಆದರೆ ನೀವು ಚಿಂತಿಸುವ ಅಗತ್ಯವಿಲ್ಲ. ನಾವು ಹೇಳುವ ಈ ಐದು ಜೀವನ ಶೈಲಿಯನ್ನು ನಿಮ್ಮದಾಗಿಸಿಕೊಳ್ಳಿ. ಅದು ನಿಮ್ಮ ದೇಹದ ತೂಕ ಬಹು ಬೇಗ ಇಳಿಸಲು ಸಹಾಯ ಮಾಡಬಲ್ಲದು.

1. ದೇಹಕ್ಕೆ ನೀರನ್ನು ಒದಗಿಸಿ:
ನೀರು ಕುಡಿಯುವುದು ದೇಹದ ತೂಕ ಇಳಿಸಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಒಳ್ಳೆಯ ದಾರಿಯಂತೂ ಹೌದು. ಅದರ ಜೊತೆಗೆ ಗ್ರೀನ್ ಟೀ, ಬ್ಲಾಕ್‌ ಟೀ, ಬ್ಲಾಕ್‌ ಕಾಫಿ, ಹಣ್ಣಿನ ರಸಗಳು ಮುಂತಾದ ದ್ರವಾಹಾರಗಳನ್ನು ಸೇವಿಸುವುದು ಉತ್ತಮ. ಇವುಗಳು ಉತ್ತಮ ಆರೋಗ್ಯ ಮತ್ತು ಕೊಬ್ಬನ್ನು ಕರಗಿಸಿಲೂ ಒಳ್ಳೆಯದು. ಏಕೆಂದರೆ ಅವುಗಳು ಬಹಳ ಸಮಯ ನಿಮ್ಮ ಹಸಿವನ್ನು ತಡೆಯುವುದಷ್ಟೆ ಅಲ್ಲ ಸಕ್ಕರೆ, ಎಣ್ಣೆಗಳಿಂದ ಮಾಡಿದ ಆರೋಗ್ಯಕ್ಕೆ ಉತ್ತಮವಲ್ಲದ ಕುರುಕಲು ತಿಂಡಿಗಳನ್ನು ತಿನ್ನದಂತೆ ತಡೆಯುವುದು.

2. ಸಿಹಿ ಪದಾರ್ಥಗಳಿಂದ ದೂರವಿರಿ:
ಸಿಹಿ ತಿನಿಸುಗಳು ಆರ್ದತೆ ಮತ್ತು ಆಕ್ಸಿಟೋಸಿನ್‌ ಗಳಿಂದ ಕೂಡಿರುತ್ತದೆ. ಸಕ್ಕರೆ ಭರಿತ ಸಿಹಿ ತಿಂಡಿಗಳಿಗಿಂತ ರುಚಿಕರವಾದದ್ದು ಯಾವುದೂ ಇಲ್ಲ. ಸಕ್ಕರೆಯನ್ನು ಸ್ಲೋ ಪಾಯ್ಸನ್‌ ಎಂದೂ ತಿಳಿದಿದ್ದೇವೆ, ಏಕೆಂದರೆ ಇದು ದೇಹದಲ್ಲಿ ಬಹಳ ಸಮಯದವರೆಗೆ ಇರುವುದಲ್ಲದೆ ಹೊರ ಹಾಕುವದೂ ಕಷ್ಟ. ಡೋನಟ್‌, ಕೇಕ್‌, ಚಾಕಲೇಟ್‌, ಕುಕ್ಕಿಸ್‌ ಮುಂತಾದವುಗಳಲ್ಲಿ ಸ್ಯಾಚುರೇಟೆಡ್‌ ಪ್ಯಾಟ್‌ ಗಳು ಅಧಿಕವಾಗಿದ್ದು ಅವು ತೂಕ ಇಳಿಸುವುದಕ್ಕೆ ಒಳ್ಳೆಯದಲ್ಲ.

3. ಪ್ರೋಟೀನ್‌ಯುಕ್ತ ಆಹಾರಗಳನ್ನು ಸೇವಿಸಿ:
ಪ್ರೋಟೀನ್‌ಯುಕ್ತ ಆಹಾರಗಳು ಬಹಳ ಸಮಯದವರೆಗೆ ನಿಮ್ಮ ಹಸಿವನ್ನು ನೀಗಿಸುವುದು ಏಕೆಂದರೆ ಅವು ಜೀರ್ಣವಾಗುವುದಕ್ಕೆ ಸಮಯ ತೆಗೆದುಕೊಳ್ಳುತ್ತವೆ. ಇವು ಬಾಯಿ ಚಪಲವನ್ನು ಕಡಿಮೆ ಮಾಡಿ ದೇಹಕ್ಕೆ ಪೂರ್ಣ ಪ್ರಮಾಣದ ಶಕ್ತಿಯನ್ನು ಒದಗಿಸಲು ಸಹಾಯಕವಾಗಿದೆ. ಪ್ರೋಟೀನ್‌ ಅಂಶ ಹೇರಳವಾಗಿರು ಬೇಳೆಕಾಳುಗಳು, ಓಟ್ಸ್‌ , ಹಸಿರು ತರಕಾರಿಗಳು, ಮೊಟ್ಟೆ ಮತ್ತು ಬಾದಾಮಿಗಳನ್ನು ನಿಮ್ಮ ನಿತ್ಯದ ಆಹಾರಗಳಲ್ಲಿ ಸೇರಿಸದರೆ ಉತ್ತಮ ಲಾಭವಾಗುವುದು.

4. ಉಪ್ಪನ್ನು ಕಡಿಮೆ ಮಾಡಿ:
ಉಪ್ಪಿನಲ್ಲಿರುವ ಸೋಡಿಯಂ ನಮ್ಮ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಈ ನಿಧಾನ ಗತಿಯಲ್ಲಿ ಆಗುವ ಚಯಾಪಚಯ ಕ್ರಿಯೆಯು ತೂಕ ಕಡಿಮೆ ಮಾಡಲು ಕಷ್ಟವಾಗುತ್ತದೆ. ಆಹಾರ ತಜ್ಞರು ರಾತ್ರಿಯ ಊಟವನ್ನು 8 ಗಂಟೆಯೊಳಗೆ ಮಾಡಲು ಸಲಹೆ ನೀಡುತ್ತಾರೆ, ಏಕೆಂದರೆ ರಾತ್ರಿಯ ಸಮಯದಲ್ಲಿ ಚಯಾಪಚಯ ಕ್ರಿಯೆಯು ನಿಧಾನ ಗತಿಯಲ್ಲಿ ಆಗುವುದರಿಂದ ಆಹಾರ ಪದಾರ್ಥಗಳನ್ನು ಜೀರ್ಣಿಸುವುದು ದೇಹಕ್ಕೆ ಕಷ್ಟದಾಯಕವಾಗುತ್ತದೆ.

5. ಧಾನ್ಯಗಳನ್ನು ಸೇವಿಸಿ:
ಧಾನ್ಯಗಳಲ್ಲಿ ಬಹಳ ವಿಧಗಳಿವೆ ಮತ್ತು ಅವುಗಳು ತೂಕವನ್ನು ಇಳಿಸಲು ಪರಿಣಾಮಕಾರಿಯಾಗಿದೆ. ಸಂಸ್ಕರಿಸಿದ ಧಾನ್ಯಗಳಿಗಿಂತ ಪೂರ್ಣ ಪ್ರಮಾಣದ ಧಾನ್ಯಗಳು ಉಪಯುಕ್ತವಾಗಿದೆ. ಬ್ರೆಡ್‌, ಆಟಾ, ಬಿಸ್ಕತ್‌ ಮುಂತಾದವುಗಳಲ್ಲಿ ಸಂಸ್ಕರಿಸಿದ ಧಾನ್ಯಗಳನ್ನು ಬಳಸುತ್ತಾರೆ. ಇವು ಅಷ್ಟೇನು ಪ್ರಯೋಜನಕಾರಿಯಲ್ಲ, ಆದರೆ ಪೂರ್ಣ ಧಾನ್ಯಗಳ ಸೇವನೆಯು ತೂಕ ಇಳಿಸಲು ಬಹಳ ಪ್ರಯೋಜನಕಾರಿಯಾಗಿದೆ. ಯಾವುದಾದರೊಂದು ರೀತಿಯಲ್ಲಿ ಅಂತಹ ಧಾನ್ಯಗಳನ್ನು ಸೇವಿಸಿ.

5 lifestyle to lose belly fat

ಇದನ್ನೂ ಓದಿ: ಚೆನ್ನಾಗಿ ನಿದ್ರೆ ಮಾಡಲು ಇಲ್ಲಿವೆ ಪಂಚ ಸೂತ್ರಗಳು. . .