PM-KISAN ಯೋಜನೆಯಡಿಯಲ್ಲಿ, ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ ₹ 6,000 ಹಣವನ್ನು ನೀಡಲಾಗುತ್ತದೆ. ₹ 2,000 ರೂಪಾಯಿಯ ಮೂರು ಸಮಾನ ಕಂತುಗಳಲ್ಲಿ ರೈತರಿಗೆ ಪಾವತಿಸಲಾಗುತ್ತದೆ. ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಅಂದಹಾಗೆ 2022 ಆರಂಭದ ದಿನವೇ ಕೇಂದ್ರ ಸರ್ಕಾರ ದೇಶದ ಕೃಷಿಕ ಸಮುದಾಯಕ್ಕೆ ಖುಷಿಯ ಸುದ್ದಿಯೊಂದನ್ನು ನೀಡಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 10ನೇ ಕಂತಿನ ಹಣವನ್ನು ಇಂದು ಶನಿವಾರ(ಜನವರಿ 1) ರಂದು ಪ್ರಧಾನಿ ನರೇಂದ್ರ ಮೋದಿ ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ದೇಶದ 10 ಕೋಟಿ ಫಲಾನುಭವಿ ಕೃಷಿಕರ ಬ್ಯಾಂಕ್ ಖಾತೆಗೆ ಒಟ್ಟು ₹20,900 ಕೋಟಿಯನ್ನು ಬಿಡುಗಡೆ ಮಾಡಿದ್ದಾರೆ. ಇಂದು ಮಧ್ಯಾಹ್ನ ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ 10 ಕೋಟಿಗೂ ಹೆಚ್ಚು ಫಲಾನುಭವಿ ರೈತರಿಗೆ ಹಣ ಬಿಡುಗಡೆ ಮಾಡಿದ್ದಾರೆ. ಅಂದಹಾಗೆ ಗಮನಿಸಬೇಕಾದ ಅಂಶವೇನೆಂದರೆ ಇದು ದೇಶದ ರೈತರ ಖಾತೆಗೆ ಸೇರ್ಪಡೆಗೊಳ್ಳುತ್ತಿರುವ 10ನೇ ಕಂತಾಗಿದೆ.

ಬಿಡುಗಡೆಯಾದ ಇತ್ತೀಚಿನ ಕಂತಿನೊಂದಿಗೆ, ಯೋಜನೆಯಡಿ ಒದಗಿಸಲಾದ ಒಟ್ಟು ಮೊತ್ತವು ಸುಮಾರು ₹1.8 ಲಕ್ಷ ಕೋಟಿಯನ್ನು ಮುಟ್ಟಿದೆ. PM-KISAN ಯೋಜನೆಯನ್ನು ಫೆಬ್ರವರಿ 2019 ರಲ್ಲಿ ಘೋಷಿಸಲಾಯಿತು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಹಣ ನಮ್ಮ ಅಕೌಂಟ್‌ಗೆ ಬಂದಿದೆಯೇ ಇಲ್ಲವೇ ಎಂದು ಪರಿಶೀಲಿಸುವುದು ಹೇಗೆ?
ಹಂತ 1: ಕೇಂದ್ರ ಸರ್ಕಾರದ ಅಧಿಕೃತ ವೆಬ್‌ಸೈಟ್ https://pmkisan.gov.in/ ಭೇಟಿ ನೀಡಿ.

ಹಂತ 2: ಮೇಲ್ಭಾಗದಲ್ಲಿ, “ಫಾರ್ಮರ್ಸ್ ಕಾರ್ನರ್” ಆಯ್ಕೆ ಇದೆ ಮತ್ತು ಒದಗಿಸಿದ ಆಯ್ಕೆಯ ಲಿಂಕ್ ಅನ್ನು ಆಯ್ಕೆಮಾಡಿ.

ಹಂತ 3: ಆಧಾರ್ ಸಂಖ್ಯೆ, ಖಾತೆ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ- ಈ ಮೂರರಲ್ಲಿ ಒಂದನ್ನು ಆಯ್ಕೆಮಾಡಿ

ಹಂತ 4: ನಂತರ ‘ಸೆಟ್ ಡೇಟಾ’ ಕ್ಲಿಕ್ ಮಾಡಿ. ನಂತರ ಬ್ಯಾಂಕ್ ಖಾತೆಗೆ ಹಣ ಪಾವತಿಯಾಗದೆಯೇ ಎಂದು ನಿಮಗೆ ತೋರಿಸುತ್ತದೆ.

ನೀವು PM ಕಿಸಾನ್‌ನ ಅಧಿಕೃತ ವೆಬ್‌ಸೈಟ್‌ನಿಂದ ಅಥವಾ Google Play store/App Store ನಿಂದ PM ಕಿಸಾನ್ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಸಹ ಹಣ ನಿಮ್ಮ ಬ್ಯಾಂಕ್ ಖಾತೆಗೆ ಪಾವತಿಯಾಗಿದೆಯೇ ಎಂದು ಪರಿಶಿಲಿಸಬಹುದು.

ಇದನ್ನೂ ಓದಿ: ರೈತರಿಗಾಗಿ ವೆಬ್ ಆಧಾರಿತ ಸ್ವ-ಸಹಾಯ ಪೋರ್ಟಲ್ ಆರಂಭಿಸಿದ ಎಚ್‍ಡಿಎಫ್‍ಸಿ ಎರ್ಗೊ

(PM Kisan Samman Nidhi 10th instalment released here is the step how to check it)