ಚಿಕ್ಕಮಗಳೂರು: ಜಿಲ್ಲೆಯಲ್ಲಿ ಶುಕ್ರವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಶೇ.೭೫.೦೨ ರಷ್ಟು ಮತದಾನ ನಡೆದಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಮತದಾನದಲ್ಲಿ ಏರಿಕೆಯಾಗಿದೆ. ಅಂದರೆ, ೨೦೧೯ರಲ್ಲಿ ಶೇ. ೭೩.೧೭ ರಷ್ಟು ಮತದಾನವಾಗಿದ್ದರೆ, ೨೦೨೪ರಲ್ಲಿ ಶೇ. ೭೫.೦೨ ರಷ್ಟು ಮತದಾನವಾಗಿದೆ. ಈ ಬಾರಿ ಶೇ. ೧.೮೫ ರಷ್ಟು ಹೆಚ್ಚಾಗಿ ಮತದಾನವಾಗಿದೆ.

ಶೃಂಗೇರಿಯಲ್ಲಿ ಪುರುಷರು ೧೬೮೯೫೧ ಮಹಿಳೆಯರು ೧೩೫೬೭೮ ಶೇಕಡವಾರು ೮೦.೩೧, ಮೂಡಿಗೆರೆಯಲ್ಲಿ ಪುರುಷರು ೧೭೧೬೪೨ ಮಹಿಳೆಯರು ೧೩೨೯೭೫ ಶೇಕಡವಾರು ೭೭.೪೭, ಚಿಕ್ಕಮಗಳೂರುನಲ್ಲಿ ಪುರುಷರು ೨೩೨೨೧೦, ಮಹಿಳೆಯರು ೧೬೪೨೫೩ ಶೇಕಡವಾರು ೭೦.೭೩, ತರೀಕೆರೆ ಯಲ್ಲಿ ಪುರುಷರು ೧೯೩೧೨೫ ಮಹಿಳೆಯರು, ೧೪೩೪೮೨ ಶೇಕಡವಾರು ೭೪.೨೯, ಕಡೂರು ಪುರುಷರು ೨೦೮೨೫೩, ಮಹಿಳೆಯರು ೧೫೫೬೨೬ ಶೇಕಡವಾರು ೭೪.೭೩ ಮತದಾನವಾಗಿದೆ.

ಕ್ಷೇತ್ರವಾರು ಅಂಕಿ ಅಂಶ ನೋಡಿದರೆ, ಮತದಾನದಲ್ಲಿ ಶೃಂಗೇರಿ ಕ್ಷೇತ್ರ ಮೊದಲ ಸ್ಥಾನದಲ್ಲಿದ್ದರೆ, ಚಿಕ್ಕಮಗಳೂರು ಕ್ಷೇತ್ರ ಕೊನೆಯ ಸ್ಥಾನದಲ್ಲಿದೆ. ಇನ್ನುಳಿದ ೩ ಕ್ಷೇತ್ರಗಳಲ್ಲಿ ಸರಾಸರಿ ಶೇ. ೭೫ ರಷ್ಟು ಮತದಾನ ಆಗಿದೆ. ಇನ್ನೊಂದು ಆಘಾತಕಾರಿ ವಿಷಯವೆಂದರೆ, ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಚಿಕ್ಕಮಗಳೂರು ಹೊರತುಪಡಿಸಿ ಇನ್ನುಳಿದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳೆಯರು ಕಡಿಮೆ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ವಿಧಾನಸಭಾ ಚುನಾವಣೆಗೆ ಹೋಲಿಕೆ ಮಾಡಿದರೆ ಈ ಬಾರಿ ಜನರಲ್ಲಿ ಮತದಾನದ ಬಗ್ಗೆ ಉತ್ಸಾಹ ಇರಲಿಲ್ಲ.

ಕೇರಳದಿಂದ ಎನ್.ಆರ್.ಪುರ ತಾಲೂಕಿನಲ್ಲಿ ರಬ್ಬರ್ ತೋಟಗಳಲ್ಲಿ ಕೆಲಸಕ್ಕಾಗಿ ಬಂದಿರುವ ಹಲವು ಮಂದಿ ಕಾರ್ಮಿಕರು ವೋಟ್ ಮಾಡಲು ತಮ್ಮ ಸ್ವಗ್ರಾಮಕ್ಕೆ ತೆರಳಲೇ ಇಲ್ಲ. ಇನ್ನು ಚಿಕ್ಕಮಗಳೂರು ಗ್ರಾಮೀಣ ಭಾಗದ ಜನರು ಗ್ರಾಮಗಳಲ್ಲಿ ಇದ್ದರೂ ಸಹ ಮತಗಟ್ಟೆಗೆ ಹೋಗಿ ಮತದಾನ ಮಾಡಲಿಲ್ಲ. ಒಟ್ಟಾರೆ ಮತದಾನದಲ್ಲಿ ಶೇಕಡವಾರು ಏರಿಕೆಯಾದರೂ ಜನರು ಊರುಗಳಲ್ಲಿ ಇದ್ದರೂ ಕೂಡ ಮತದಾನ ಮಾಡದೆ ಇರುವುದು ಯಕ್ಷ ಪ್ರಶ್ನೆಯಾಗಿದೆ.

75.02 percent voting in the Lok Sabha elections held in the district