ಕಡೂರು: ತಾಲ್ಲೂಕಿನ ಕುಂಕಾನಾಡು ಗ್ರಾಮದ ಆಂಜನೇಯಸ್ವಾಮಿ ರಥೋತ್ಸವ ಶನಿವಾರ ನಡೆಯಿತು. ಮೂಲಸ್ಥಾನದಲ್ಲಿ ಬೆಳಿಗ್ಗೆ ವಿಶೇಷ ಅಭಿಷೇಕ, ಪೂಜೆ ನೆರವೇರಿದ ನಂತರ ಮೂಲ ದೇವರಿಗೆ ಬೆಳ್ಳಿ ಕವಚ ಧಾರಣೆ ಮಾಡಿ ಅಲಂಕಾರ ನೆರವೇರಿಸಲಾಯಿತು.

ವಾದ್ಯಮೇಳದೊಂದಿಗೆ ಆಲಂಕೃತ ರಥದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಬಲಿಪೂಜೆಯ ನಂತರ ಭಕ್ತರು ಸುಡುಬಿಸಿಲಲ್ಲಿ ರಥ ಎಳೆದು ಸಂಭ್ರಮಿಸಿದರು.

ಸುತ್ತಮುತ್ತಲ ಗ್ರಾಮಸ್ಥರು ಆಲಂಕೃತ ಪಾನಕದ ಬಂಡಿಯನ್ನು ರಥದ ಸುತ್ತ ಓಡಿಸಿ ಹರಕೆ ತೀರಿಸಿದರು. ಭಕ್ತರಿಗೆ ಪಾನಕ, ಕೋಸಂಬರಿ, ಮಜ್ಜಿಗೆ ವಿತರಿಸಲಾಯಿತು.

ಕುಂಕಾನಾಡು ಗ್ರಾಮದ ಆಂಜನೇಯ ಸ್ವಾಮಿ ರಥೋತ್ಸವ ಸುತ್ತಮುತ್ತಲ ಗ್ರಾಮದಲ್ಲಿ ಖ್ಯಾತಿ ಪಡೆದಿದೆ. ಭಾನುವಾರ ಸೂರ್ಯಮಂಡಲದೊಂದಿಗೆ ಸ್ವಾಮಿಯ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. 30ರಂದು ಗ್ರಾಮದೇವತೆ ಅಂತರಘಟ್ಟಮ್ಮ ದೇವಿ ಬಾನ ಸೇವೆ ಹಾಗೂ ಮಹಿಷ ಉತ್ಸವ ನಡೆಯಲಿದೆ.

Anjaneyaswamy Chariotsavam of Kunkanadu village