ಆದಾಯ ತೆರಿಗೆ (Income Tax) ಕಟ್ಟದೇ ತಪ್ಪಿಸಿಕೊಳ್ಳುವ ಎಷ್ಟೋ ದೊಡ್ಡ ದೊಡ್ಡ ಉದ್ಯಮಿಗಳಿದ್ದಾರೆ. ಚಿತ್ರ ನಟರಂತೂ ಎತ್ತಿದ ಕೈ. ಆದರೆ ಅಕ್ಷಯ್​ ಕುಮಾರ್​ ಅವರು ಇದಕ್ಕೆ ತದ್ವಿರುದ್ಧ. ನಟ ಅಕ್ಷಯ್ ಕುಮಾರ್ (Akshay Kumar) ಅವರು ಹಲವು ಸೂಪರ್ ಹಿಟ್​ ಚಿತ್ರಗಳಲ್ಲಿ ನಟಿಸಿದ್ದಾರೆ. ವರ್ಷಕ್ಕೆ ಏನಿಲ್ಲವೆಂದರೂ ನಾಲ್ಕೈದು   ಸಿನಿಮಾಗಳನ್ನು ಮಾಡುವ ನಟ ಅಕ್ಷಯ್​ ಕುಮಾರ್​  ಪ್ರತಿ ವರ್ಷ ಅವರಿಗೆ ನೂರಾರು ಕೋಟಿ ರೂಪಾಯಿ ಲಾಭ ಗಳಿಸುತ್ತಾರೆ. ಇಷ್ಟೇ ಅಲ್ಲದೇ ಜಾಹೀರಾತುಗಳಲ್ಲಿಯೂ ಇವರು ನಟಿಸುವ ಕಾರಣ, ಇವರ ಆದಾಯ ಬಹಳ ದೊಡ್ಡದ್ದೇ ಇದೆ. ಇವರ ಆದಾಯಕ್ಕೆ ತಕ್ಕಂತೆ ಅವರು ಸರಿಯಾಗಿ ತೆರಿಗೆ ಪಾವತಿ (Income Tax) ಮಾಡುತ್ತಾರೆ.  ದೇಶದಲ್ಲೇ ಅತಿ ಹೆಚ್ಚು ಆದಾಯ ತೆರಿಗೆ ಕಟ್ಟುವ ನಟರಲ್ಲಿ ಅಕ್ಷಯ್ ಕುಮಾರ್ ಕೂಡ ಒಬ್ಬರು ಎನಿಸಿಕೊಂಡಿದ್ದಾರೆ. ಇದಕ್ಕಾಗಿ ಕಳೆದ ವರ್ಷ ಆದಾಯ ತೆರಿಗೆ ಇಲಾಖೆಯಿಂದ ಅವರನ್ನು ಸನ್ಮಾನಿಸಲಾಗಿದ್ದು, ಸೂಪರ್ ಸ್ಟಾರ್​ಗೆ ಗೌರವ ಪತ್ರವನ್ನೂ ನೀಡಲಾಗಿತ್ತು.

ಇತ್ತೀಚಿನ ಸಂದರ್ಶನವೊಂದರಲ್ಲಿ, ಅಕ್ಷಯ್ ಕುಮಾರ್ ಅವರು ಅತಿ ಹೆಚ್ಚು ತೆರಿಗೆ ಪಾವತಿಸುವವರ ಬಗ್ಗೆ ಮಾತನಾಡಿದ್ದಾರೆ. ಆಜ್ ತಕ್ ಜೊತೆಗಿನ ಸಂಭಾಷಣೆಯಲ್ಲಿ, ಈ ವಿಷಯವನ್ನು ಅಕ್ಷಯ್ ಕುಮಾರ್ ಬಹಿರಂಗಪಡಿಸಿದ್ದಾರೆ. ‘ನೀವು ನಿಮ್ಮ ತೆರಿಗೆಯನ್ನು ಪಾವತಿಸಿದರೆ  ತೆರಿಗೆ ಇಲಾಖೆಯವರು ಸರಿಯಾಗಿ ಮಾತನಾಡುತ್ತಾರೆ. ಒಬ್ಬ ಅಕೌಂಟೆಂಟ್ ಮಗನಾಗಿ ನಾನು ತೆರಿಗೆಯನ್ನು ಸರಿಯಾಗಿ ಪಾವತಿಸುತ್ತಾನೆ ಎಂಬ ಬಗ್ಗೆ ನನಗೆ ಹೆಮ್ಮೆ ಇದೆ. ತೆರಿಗೆಯನ್ನು ಸಮಾನವಾಗಿ ಪಾವತಿಸುವುದನ್ನು ನಾನು ಪ್ರೀತಿಸುತ್ತೇನೆ. ನನ್ನ ತಂದೆ ನನಗೆ ತೆರಿಗೆ ಪಾವತಿಸಲು ಕಲಿಸಿದರು. ಯಾರೋ ಬಂದು ನನ್ನ ಮನೆಗೆ ಬಂದು ನಾನು ಹಣವನ್ನು ಎಲ್ಲಿ ಬಚ್ಚಿಟ್ಟಿದ್ದೇನೆ ಎಂದು ಕೇಳುವುದು ನನಗೆ ಇಷ್ಟವಿಲ್ಲ’ ಎಂದು  ಅಕ್ಷಯ್ ಕುಮಾರ್ ಹೇಳಿದ್ದಾರೆ. ಅವರು ಕಳೆದ ಬಾರಿ  29.5 ಕೋಟಿ ರೂಪಾಯಿ (29.5 Crores) ತೆರಿಗೆ ಪಾವತಿಸಿದ್ದಕ್ಕಾಗಿ ಗೌರವಿಸಲಾಗಿತ್ತು. ಕಳೆದ 5 ವರ್ಷಗಳಲ್ಲಿ ಭಾರತದ ಅತಿ ಹೆಚ್ಚು ತೆರಿಗೆ ಪಾವತಿದಾರರ ಪೈಕಿ ನಿರಂತರವಾಗಿ ನಟ ಅಕ್ಷಯ್‌ಗೆ ಈ ಗೌರವವನ್ನು ನೀಡಲಾಗುತ್ತಿದೆ.  ಈ ಹಿಂದೆಯೂ ಅಕ್ಷಯ್ ಭಾರತದ ಅತಿ ಹೆಚ್ಚು ತೆರಿಗೆ ಪಾವತಿದಾರ ಎಂಬ ಕೀರ್ತಿಗೆ ಭಾಜನರಾಗಿದ್ದರು.

ತೆರಿಗೆ ಪಾವತಿ ಜೊತೆ ಅವರು,  ತಾವು ಭಾರತೀಯ ಪಾಸ್‌ಪೋರ್ಟ್‌ಗೆ (Passport) ಅರ್ಜಿ ಸಲ್ಲಿಸಿರುವುದಾಗಿ ಹೇಳಿದ್ದಾರೆ.  ದೇಶದ ಮೇಲಿನ ಪ್ರೀತಿಯನ್ನು ಸಾಬೀತುಪಡಿಸಲು ಕೆನಡಾದ ಪಾಸ್‌ಪೋರ್ಟ್ ಅನ್ನು ತ್ಯಜಿಸುವುದಾಗಿ ಅಕ್ಷಯ್ ಹೇಳಿದ್ದಾರೆ. “ಭಾರತವೇ ನನಗೆ ಸರ್ವಸ್ವ. ನಾನು ಗಳಿಸಿದ್ದೆಲ್ಲವೂ ಇಲ್ಲಿಂದ ಸಿಕ್ಕಿದೆ. ದೇಶಕ್ಕಾಗಿ ಏನಾದರೂ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ ಎಂದಿದ್ದಾರೆ.   ‘ನಾನು ಕೆನಡಾ ನಾಗರಿಕತೆ ಪಡೆಯುವುದರ ಹಿಂದಿನ ಕಾರಣ ಗೊತ್ತಿಲ್ಲದೆ ಜನರು ಮಾತನಾಡುತ್ತಿದ್ದಾಗ ಬೇಸರವಾಗುತ್ತಿತ್ತು. ಭಾರತವೇ ನನ್ನ ಸರ್ವಸ್ವ. ನಾನು ಏನಾದರೂ ಗಳಿಸಿದ್ದರೆ, ಪಡೆದುಕೊಂಡಿದ್ದರೆ ಅದು ಇಲ್ಲಿಂದ. ನನಗೆ ಹಿಂತಿರುಗಿ ಬರುವ ಅದೃಷ್ಟಸಿಕ್ಕಿದೆ’ ಎಂದಿದ್ದಾರೆ. ‘90ರ ದಶಕದಲ್ಲಿ ತಮ್ಮ 15 ಸಿನಿಮಾಗಳು ನಿರಂತರವಾಗಿ ಫ್ಲಾಪ್‌ ಆದ ಮೇಲೆ ಸಿನಿಮಾ ಕೈ ಹಿಡಿಯುತ್ತಿಲ್ಲ. ಕೆಲಸ ಮಾಡಬೇಕೆನಿಸಿತು. ಕೆನಡಾದಲ್ಲಿದ್ದ ನನ್ನ ಸ್ನೇಹಿತ ನನ್ನನ್ನು ಕರೆದ. ಆಗ ನಾನು ಹೋದೆ. ಆ ವೇಳೆಗೆ ನನ್ನ ಎರಡು ಸಿನಿಮಾ ಬಿಡುಗಡೆಯಾಗಬೇಕಿತ್ತು. ಅದೃಷ್ಟವಶಾತ್‌ ಅವು ಸೂಪರ್‌ ಹಿಟ್‌ ಆದವು. ಬಳಿಕ ನಾನು ಮತ್ತೆ ಭಾರತಕ್ಕೆ ಬಂದು ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದೆ. ಈ ನಡುವೆ ನಾನು ಪಾಸ್‌ಪೋರ್ಟ್ ಹೊಂದಿರುವುದೇ ಮರೆತಿತ್ತು. ಈಗ ಬದಲಾವಣೆಗೆ ಅರ್ಜಿ ಸಲ್ಲಿಕೆ ಮಾಡಿದ್ದೇನೆ. ಕೆನಡಾ ಪೌರತ್ವ ತ್ಯಜಿಸಲಿದ್ದೇನೆ’ ಎಂದಿದ್ದಾರೆ.

ಇನ್ನು ಸಿನಿ ಪಯಣದ ಕುರಿತು ಮಾತನಾಡುವುದಾದರೆ,  ಅಕ್ಷಯ್ ಕುಮಾರ್ ಅವರ ಹೊಸ ಚಿತ್ರ ‘ಸೆಲ್ಫಿ’ ಇಂದು ರಿಲೀಸ್​ ಆಗಿದೆ.  ಇದು ಮಲಯಾಳಂ ಸಿನಿಮಾದ ಸೂಪರ್‌ಹಿಟ್ ಚಿತ್ರ ‘ಡ್ರೈವಿಂಗ್ ಲೈಸೆನ್ಸ್’ ನ ಅಧಿಕೃತ ಹಿಂದಿ ರಿಮೇಕ್ ಆಗಿದೆ. ಅಕ್ಷಯ್ ಅವರಲ್ಲದೆ, ಇಮ್ರಾನ್ ಹಶ್ಮಿ (Imran Hashmi), ನುಶ್ರತ್ ಭರುಚಾ ಮತ್ತು ಡಯಾನಾ ಪ್ಯಾಂಟಿ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ಹೊಂದಿದ್ದಾರೆ. ರಾಜ್ ಮೆಹ್ತಾ ನಿರ್ದೇಶನದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಕ್ಷಯ್ ಅವರ ಮುಂಬರುವ ಚಿತ್ರಗಳಲ್ಲಿ ಟೈಗರ್ ಶ್ರಾಫ್ ಜೊತೆಗಿನ ‘ಬಡೆ ಮಿಯಾನ್ ಚೋಟೆ ಮಿಯಾನ್’ ಸೇರಿವೆ, ಇದನ್ನು ಅಲಿ ಅಬ್ಬಾಸ್ ಜಾಫರ್ ನಿರ್ದೇಶಿಸುತ್ತಿದ್ದಾರೆ. ಅವರು ‘OMG 2’ ಮುಂದಿನ ಭಾಗ ‘ಹೇರಾ ಫೇರಿ’ ಸೇರಿದಂತೆ ಅನೇಕ ಇತರ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Akshay Kumar is the actor who made the secret