ಚಿಕ್ಕಮಗಳೂರು: ಆರ್ಥಿಕವಾಗಿ ಯಾರು ಹಿಂದೆ ಉಳಿಯಬಾರದೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೆ ತಂದು ವಿವಿಧ ಹಂತದಲ್ಲಿ ತಳ ಸಮುದಾಯದ ಜನರನ್ನು ಆರ್ಥಿಕವಾಗಿ ಸದೃಢವಾಗಿಸಲು ಹಲವು ಬಗೆಯ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ನಗರಸಭೆ ಪೌರಾಯುಕ್ತ ಬಿ.ಸಿ ಬಸವರಾಜ್ ತಿಳಿಸಿದರು.

ಅವರು ಇಂದು ನಗರಸಭೆ ಸಭಾಂಗಣದಲ್ಲಿ ಡೇ-ನಲ್ಮ್ ಯೋಜನೆಯಡಿ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ಯೋಜನೆಯಡಿ ಗುರಿತಿಸಲ್ಪಟ್ಟ ಬೀದಿ ವ್ಯಾಪಾರಿಗಳ ಸಾಮಾಜಿಕ, ಆರ್ಥಿಕ ಸಮೀಕ್ಷೆಯಡಿ ಸ್ವನಿಧಿಯಿಂದ ಸಮೃದ್ಧಿ ಮೇಳ ಹಾಗೂ ಒಚಿi ಃhi ಆigiಣಚಿಟ ಅಭಿಯಾನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬೀದಿ ಬದಿ ವ್ಯಾಪಾರಸ್ಥರಿಗೆ ಎಲ್ಲಾ ಬ್ಯಾಂಕುಗಳು ದಾಖಲೆ ಇಲ್ಲದೆ ಪ್ರಥಮವಾಗಿ ೧೦ ಸಾವಿರ ಸಾಲ ಸೌಲಭ್ಯ ನೀಡಿದ್ದಾರೆ. ಇದಕ್ಕಾಗಿ ೧೨೦೦ ಅರ್ಜಿಗಳು ಬಂದಿದ್ದು ೧೦ ಸಾವಿರ ರೂ ಪಡೆದು ಕಂತನ್ನು ಸರಿಯಾಗಿ ಪಾವತಿಸಿರುವ ೬೦೦ ಜನ ಫಲಾನುಭವಿಗಳಿಗೆ ೨೦ ಸಾವಿರ ರೂ ಸಾಲ ಸೌಲಭ್ಯ ನೀಡಲಾಗಿದೆ ಎಂದರು.

ಈ ೨೦ ಸಾವಿರ ರೂ ಪಡೆದವರು ಕಂತುಗಳನ್ನು ಸರಿಯಾಗಿ ನಿಗದಿತ ಸಮಯಕ್ಕೆ ಪಾವತಿಸಿರುವ ೩೦೦ ಪ್ರತಿಯೊಬ್ಬ ಫಲಾನುಭವಿಗಳಿಗೆ ೫೦ ಸಾವಿರ ರೂ ಸಾಲ ಮಂಜೂರು ಮಾಡಲಾಗಿದೆ. ಈ ಸಾಲವನ್ನು ನಿಗದಿತ ಸಮಯಕ್ಕೆ ಪಾವತಿಸುವವರಿಗೆ ೧ ಲಕ್ಷದವರೆಗೆ ಸಾಲ ಸೌಲಭ್ಯ ದೊರೆಯಲಿದೆ. ಈ ರೀತಿ ಪಾವತಿಸಿರುವ ೧೫೦ ಫಲಾನುಭವಿಗಳಿಗೆ ತಲಾ ೫ ಲಕ್ಷ ರೂವರೆಗೆ ಸಾಲ ದೊರೆಯಲಿದೆ ಎಂದು ಹೇಳಿದರು.

ಈಗ ನೀವು ಏನೇನು ಉದ್ಯೋಗ ಸ್ಥಾಪಿಸಲು ಗುರಿ ಇಟ್ಟುಕೊಂಡಿದ್ದೀರಿ ಸಾಲ ಸೌಲಭ್ಯ ಪಡೆದುಕೊಂಡು ಉದ್ಯೋಗ ಸ್ಥಾಪಿಸಿದ ನಂತರ ನಿಗದಿತ ಸಮಯಕ್ಕೆ ಸಾಲ ಮರು ಪಾವತಿ ಮಾಡಿ ಬ್ಯಾಂಕಿನ ಚಟುವಟಿಕೆಗಳು ಪೂರಕವಾಗಿ ನಡೆಯುವಂತೆ ಸಹಕರಿಸಬೇಕೆಂದರು.

ನೀವು ಆರ್ಥಿಕವಾಗಿ ಸದೃಢರಾಗಿ ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ಮುಂದೆ ಅವರ ಭವಿಷ್ಯ ಉಜ್ವಲಗೊಳಿಸಲು ಶ್ರಮಿಸಬೇಕೆಂಬ ದೃಷ್ಠಿಕೋನ ಇಟ್ಟುಕೊಂಡು ಉದ್ಯೋಗ ಸ್ಥಾಪನೆ ಮಾಡಿ ಎಂದು ಕರೆ ನೀಡಿದರು.

ನಗರಸಭೆ ಡೇ-ನಲ್ಮ್ ಯೋಜನೆಯ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ೨೦೨೩-೨೪ ನೇ ಸಾಲಿನ ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಗುರಿ ನಿಗದಿಯಾಗಿದ್ದು, ಸರ್ಕಾರ ರೂಪಿಸಿದ ಯೋಜನೆಗಳಿಗೆ ಸಾಲ ವಿತರಣೆ ನಗರಸಭೆ ವತಿಯಿಂದ ಮುಂದಾಗಿದೆ. ಟೈಲರಿಂಗ್ ೧೨, ಹೋಟೆಲ್ ಉದ್ಯಮ ೪, ಬಟ್ಟೆ ವ್ಯಾಪಾರಕ್ಕೆ ೧೦, ದಿನಸಿ ಅಂಗಡಿ ೮, ಸೆಂಟ್ರಿಂಗ್ ೩, ಹೂವಿನ ವ್ಯಾಪಾರ ೧, ಗ್ಯಾರೇಜ್ ೧, ಪೈಂಟಿಂಗ್ ೧ , ಎಲೆಕ್ಟ್ರಿಷಿಯನ್ ೨, ಹಣ್ಣು ತರಕಾರಿ ವ್ಯಾಪಾರಕ್ಕೆ ೫, ಗಾರೆ ಕೆಲಸ ೨, ಡ್ರೈ ಕ್ಲೀನರ್, ಚಿಪ್ಸ್ ಅಂಗಡಿ, ಮೊಬೈಲ್ ಶಾಪ್, ಫ್ಯಾನ್ಸಿ ಸ್ಟೋರ್, ಛಾಯಾಚಿತ್ರ ಗ್ರಾಹಕ, ಕಂಪ್ಯೂಟರ್ ಸೆಂಟರ್, ಬ್ಯೂಟಿ ಪಾರ್ಲರ್, ಚಿನ್ನ-ಬೆಳ್ಳಿ ಅಂಗಡಿ ಸೇರಿ ತಲಾ ೧ ಅರ್ಜಿಗಳು ಸಗಟು ವ್ಯಾಪಾರಕ್ಕೆ ೩ ಹೀಗೆ ೨೧ ರೀತಿಯ ಚಟುವಟಿಕೆಗಳನ್ನು ಸ್ಥಾಪಿಸಲು ೫೮ ಅರ್ಜಿಗಳು ಬಂದಿವೆ ಎಂದು ಮಾಹಿತಿ ನೀಡಿದರು.

ಈ ಸ್ವನಿಧಿ ಸಮಿತಿ ಸಭೆಯಲ್ಲಿ ಈ ಎಲ್ಲಾ ಅರ್ಜಿಗಳಿಗೆ ಅನುಮೋದನೆ ನೀಡಿ ಬ್ಯಾಂಕ್‌ಗಳಿಗೆ ರವಾನಿಸಿದರೆ ತಕ್ಷಣ ಸಾಲ ಸೌಲಭ್ಯ ಸಂಬಂಧಿಸಿದ ಫಲಾನುಭವಿಗಳಿಗೆ ದೊರೆಯಲಿದೆ ಎಂದರು.

ಕೆನರಾ ಬ್ಯಾಂಕ್ ವಿಭಾಗೀಯ ಕಚೇರಿಗೆ ಒಟ್ಟು ೨೨ ಅರ್ಜಿಗಳು, ಎಸ್‌ಬಿಐ ಶಾಖೆಗೆ ೧೮, ಇಂಡಿಯನ್ ಓವರ್‌ಸಿಸ್ ಬ್ಯಾಂಕಿಗೆ ೫, ಬ್ಯಾಂಕ್ ಆಫ್ ಬರೋಡ ೩, ಹೆಚ್‌ಡಿಎಫ್‌ಸಿ ಗೆ ೧, ಯುಕೋ ಬ್ಯಾಂಕಿಗೆ ೩, ಇಂಡಿಯನ್ ಬ್ಯಾಂಕಿಗೆ ೧, ಬ್ಯಾಂಕ್ ಆಫ್ ಇಂಡಿಯಾಗೆ ೧, ಯೂನಿಯನ್ ಬ್ಯಾಂಕಿಗೆ ೧, ಐಡಿಬಿಐ ಗೆ ೩, ಕರ್ನಾಟಕ ಬ್ಯಾಂಕ್‌ಗೆ ೧, ಕರ್ನಾಟಕ ಗ್ರಾಮೀಣ ಬ್ಯಾಂಕಿಗೆ ೨ ಒಟ್ಟು ೫೮ ಅರ್ಜಿಗಳನ್ನು ರವಾನಿಸಲಾಗಿದೆ ಎಂದು ಹೇಳಿದರು.

ಸಾಲ ಸೌಲಭ್ಯ ದೊರೆತ ಫಲಾನುಭವಿಗಳಿಗೆ ಅವರು ಆಯ್ಕೆ ಮಾಡಿಕೊಂಡಿರುವ ಚಟುವಟಿಕೆಗಳಿಗೆ ಸಂಬಂದಿಸಿದಂತೆ ಉಚಿತವಾಗಿ ೫ ದಿನಗಳ ಕಾಲ ತರಬೇತಿ ನೀಡಲಾಗುವುದು ಎಂದರು.

ಸಭೆಯಲ್ಲಿ ಎಸ್‌ಬಿಐ ಶಾಖೆ ವ್ಯವಸ್ಥಾಪಕ ಗಿರೀಶ್, ವಿವಿಧ ಇಲಾಖೆಗಳ ಅಧಿಕಾರಿಗಳು, ಪ್ರಾದೇಶಿಕ ಕಚೇರಿ ಅಧಿಕಾರಿಗಳು, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.

Atma Nirbhar Yojana of Pradhan Mantri Street Vendors under Day-Nalm Yojana