ಚಿಕ್ಕಮಗಳೂರು: ನಗರದಲ್ಲಿ ಬಲಿಜ ಸಮುದಾಯ ಯೋಗಿನಾರೇಯಣ ಗುರು(ಕೈವಾರ ತಾತಯ್ಯ) ಅವರ ದೇವಾಲಯ ನಿರ್ಮಾಣ ಕಾರ್ಯಕೈಗೊಂಡಿದ್ದು ಕಟ್ಟಡ ಹಾಗೂ ಸಮುದಾಯ ಭವನಕ್ಕೆ ಸರ್ಕಾ ರದಿಂದ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಭರವಸೆ ನೀಡಿದರು.

ನಗರದ ಹೊರವಲಯದಲ್ಲಿರುವ ಸಗನೀಪುರ ರಸ್ತೆಯ ಬಳಿ ಜಿಲ್ಲಾ ಹಾಗೂ ತಾಲ್ಲೂಕು ಬಲಿಜ ಸಂಘದ ವತಿಯಿಂದ ನಿರ್ಮಾಣವಾಗುತ್ತಿರುವ ಕೈವಾರ ತಾತಯ್ಯ ಅವರ ದೇವಾಲಯ ನಿರ್ಮಾಣಕ್ಕೆ ಭಾನುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಬಲಿಜ ಸಮುದಾಯ ಸಣ್ಣ ಸಮಾಜವಾದರೂ ಹಿಂದಿನಿಂದಲೂ ಅನೇಕ ಸಾಮಾಜಿಕ ಕಾರ್ಯ ಗಳಲ್ಲಿ ತೊಡಗಿದೆ. ಈಗ ಸಮುದಾಯ ಒಂದಾಗಿ ಸುಮಾರು ಒಂದು ಎಕರೆ ಜಾಗದಲ್ಲಿ ಕೈವಾರ ತಾತಯ್ಯ ಅವರ ದೇವಾಲಯ ನಿರ್ಮಾಣಕ್ಕೆ ಮುಂದಾಗಿದೆ. ಇದರಿಂದ ಸಮುದಾಯ ಮತ್ತ? ಸಂಘಟಿತವಾಗಲಿದೆ ಎಂದರು.

ಹಿಂದಿನ ಅವಧಿಯಲ್ಲಿ ದೇವಾಲಯ ನಿರ್ಮಾಣಕ್ಕೆ ಒಂದು ಎಕರೆ ಜಾಗ ಮಂಜೂರು ಮಾಡಲಾಗಿದೆ. ಈಗ ಭೂಮಿಪೂಜೆ ನೆರವೇರಿಸಲಾಗಿದ್ದು ದೇವಾಲಯ ಕಟ್ಟಡ ಪೂರ್ಣಗೊಳ್ಳಲು ಅಗತ್ಯ ಅನುದಾನ ಬಿಡುಗಡೆಗೊಳಿ ಸಲಾಗುವುದು ಅಲ್ಲದೇ ಸಮುದಾಯ ಭವನ ನಿರ್ಮಾಣಕ್ಕೂ ಸರ್ಕಾರದಿಂದ ಅನುದಾನ ನೀಡುವಂತೆ ಕೋರಲಾ ಗುವುದು ಎಂದು ಹೇಳಿದರು.

ಮಾಜಿ ಶಾಸಕ ಸಿ.ಟಿ.ರವಿ ಮಾತನಾಡಿ, ಯೋಗಿನಾರಾಯಣ ಗುರುಗಳು ಕಾಲಜ್ಞಾನಿಗಳಾಗಿ ತಮ್ಮ ಸಂದೇ ಶದ ಮೂಲಕ ನಾಡನ್ನು ಎಚ್ಚರಿಸಿದವರು. ಚಿಕ್ಕಮಗಳೂರಿನಲ್ಲಿ ಅವರ ದೇವಾಲಯ ನಿರ್ಮಾಣವಾಗಬೇಕು ಎಂಬು ದು ಬಲಿಜ ಸಮುದಾಯ ಬಹುವ?ಗಳ ಬೇಡಿಕೆಯಾಗಿತ್ತು. ಅದರಂತೆ ದೇವಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿದೆ. ಎಲ್ಲ ರೀತಿಯಲ್ಲಿ ಸಹಕಾರ ನೀಡುವುದಾಗಿ ಹೇಳಿದರು.

ಬಲಿಜ ಸಂಘದ ರಾಜ್ಯಾಧ್ಯಕ್ಷ ಎಸ್.ಪಿ.ಮುನಿಕೃಷ್ಣಪ್ಪ ಮಾತನಾಡಿ ಯೋಗೀನಾರೇಯಣ ಅವರ ದೇವಾಲಯ ಕಟ್ಟಡ ಸ್ಥಾಪನೆಗೆ ಜಿಲ್ಲಾ ಸಮಿತಿ ಮುಂದಾಗಿರುವುದು ಅತ್ಯಂತ ಖುಷಿಯ ಸಂಗತಿ. ರಾಜ್ಯ ಸಂಘದಿಂದಲೂ ದೇವಾಲಯ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಲಿಜ ಸಂಘದ ರಾಜ್ಯ ಉಪಾಧ್ಯಕ್ಷ ಸೂರ್ಯ ನಾರಾಯಣ್, ಪ್ರಧಾನ ಕಾರ್ಯದರ್ಶಿ ಶಿವಪ್ಪ, ಖಜಾಂಚಿ ನಾಗರಾಜ್, ಜಿಲ್ಲಾಧ್ಯಕ್ಷ ಆನಂದಶೆಟ್ಟಿ, ಉಪಾಧ್ಯಕ್ಷ ಜಯವರ್ಧನ್, ಪ್ರಧಾನ ಕಾರ್ಯದರ್ಶಿ ಕುಮಾರ್ ಆರ್.ಶೆಟ್ಟಿ, ಖಜಾಂಚಿ ಮಂಜುನಾಥ್, ಮುಖಂಡರುಗಳಾದ ದೇವರಾಜ್, ಗಿರೀಶ್, ಯಶವಚಿತ್, ಸತೀಶ್, ಮರಿಶೆಟ್ಟಿ, ಮತ್ತಿತರರು ಹಾಜರಿದ್ದರು.

Bhumi Puja for construction of Kaivara Tataya Temple