ಚಿಕ್ಕಮಗಳೂರು: ಅಭಿವೃದ್ಧಿ ಹೆಸರಲ್ಲಿ ಮತ ಕೇಳಲು ತಾಕತ್ತಿಲ್ಲದ ಬಿಜೆಪಿ ಮೋದಿ ಗ್ಯಾರಂಟಿ ಹೆಸರಿನಲ್ಲಿ ಮತಯಾಚನೆ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ರೂಬಿನ್ ಮೊಸಸ್ ಆರೋಪಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನರೇಂದ್ರ ಮೋದಿ ಗ್ಯಾರಂಟಿ ಶ್ರೀಮಂತರಿಗೆ ಹೊರತು ಬಡವರಿಗೆ ಏನು ಉಪಯೋಗವಿಲ್ಲ ಎಂದು ದೂರಿದ ರೂಬಿನ್, ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಸುಮಾರು ೧.೫೦ ಲಕ್ಷ ಮತಗಳ ಅಂತರದಲ್ಲಿ ವಿಜಯ ಸಾಧಿಸಲಿದ್ದಾರೆ ಎಂದು ಹೇಳಿದರು.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರು ಸರಳ ಸಜ್ಜನ ರಾಜಕಾರಣಿ ವಿರೋಧ ಪಕ್ಷದವರಿಗಾಗಲಿ ಅವರ ವಿರುದ್ಧ ಸ್ಪರ್ಧಿಸಿರುವ ಅಭ್ಯರ್ಥಿಯ ವಿರುದ್ಧವಾಗಲಿ ಯಾವುದೇ ಹೇಳಿಕೆಗಳನ್ನು ಕೊಡದೆ ಇರುವ? ಸರಳರು ಅವರು ೨೦ ತಿಂಗಳ ಅಧಿಕಾರದ ಅವಧಿಯಲ್ಲಿ ಶಕ್ತಿ ಮೀರಿ ಕಡೂರು ಮೂಡಿಗೆರೆ ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಮೂಲ ಕಾರಣವಾಗಿದ್ದು ಅಂದಿನ ರೈಲ್ವೆ ಸಚಿವ ಮಲ್ಲಿಕಾರ್ಜುನ್ ಖರ್ಗೆಯವರು ಚಿಕ್ಕಮಗಳೂರಿನ ರೈಲ್ವೆ ಉದ್ಘಾಟನೆ ಸಂದರ್ಭದಲ್ಲಿ ಹೆಗ್ಡೆ ಅವರು ಸಂಸದರಾಗಿದ್ದು ಬಹಳ ಶ್ರಮ ವಹಿಸಿದ್ದಾರೆ ಎಂದು ಹೇಳಿದರು.

ಅಂದಿನಿಂದ ಇಲ್ಲಿ ವರೆಗೂ ೧೦ ವ?ಗಳ ಕಾಲ ಬಿಜೆಪಿ ಆಡಳಿತದಲ್ಲಿದ್ದು ಒಂದೇ ಒಂದು ಎಕ್ಸ್ ಪ್ರೆಸ್ ರೈಲಾಗಲಿ ಅಥವಾ ಚಿಕ್ಕಮಗಳೂರಿನಿಂದ ಸಕಲೇಶಪುರ, ಹಾಸನಕ್ಕೆ ರೈಲ್ವೆ ಮಾರ್ಗಗಳಾಗಲಿ ಆಗಿಲ್ಲ ಇದೇ ಬಿಜೆಪಿಯವರ ಮೋದಿ ಗ್ಯಾರಂಟಿ. ಅಭಿವೃದ್ಧಿ ತೋರಿಸಿ ಚುನಾವಣೆ ಎದುರಿಸಲು ಯೋಗ್ಯತೆ ಇಲ್ಲದ ಬಿಜೆಪಿಗರು ವ್ಯಕ್ತಿಯನ್ನು ತೋರಿಸಿ ಚುನಾವಣೆ ಎದುರಿಸುತ್ತಿದ್ದಾರೆ ಎಂದು ಟೀಕಿಸಿದರು.

ಮಾಜಿ ಶಾಸಕ ಸಿ.ಟಿ ರವಿ ಅಧಿಕಾರವಿಲ್ಲದೆ ಪರದಾಡುತ್ತಿದ್ದಾರೆ ಅತ್ತ ಶಾಸಕ ಸ್ಥಾನವೂ ಇಲ್ಲ ಇತ್ತ ಪಕ್ಷದಲ್ಲಿಯೂ ಯಾವ ಸ್ಥಾನವು ಇಲ್ಲದೆ ಕಂಗಾಲಾಗಿ ಚುನಾವಣೆಯ ಬಳಿಕ ಸರ್ಕಾರ ಬಿದ್ದು ಹೋಗುತ್ತದೆ ಎಂದು ಬೊಗಳೆ ಬಿಡುತ್ತಿದ್ದಾರೆ ಈಗಿನ ಬಿಜೆಪಿ ಪರಿಸ್ಥಿತಿ ನೋಡಿದರೆ ಮುಂದಿನ ಬಾರಿ ಅವರಿಗೆ ಶಾಸಕ ಸ್ಥಾನದ ಟಿಕೆಟ್ ಸಿಗುವುದೇ ಅನುಮಾನವಾಗಿದೆ ಕಾಂಗ್ರೆಸ್ ಭವಿ?ದ ಬಗ್ಗೆ ಮಾತನಾಡುವ ಬದಲು ತಮ್ಮ ರಾಜಕೀಯ ಭವಿ?ದ ಬಗ್ಗೆ ಗಮನ ಹರಿಸಲಿ ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಪಕ್ಷ ಚುನಾವಣೆಯ ಮುನ್ನ ಹೇಳಿದ್ದ ೫ ಗ್ಯಾರಂಟಿಗಳ ಬಗ್ಗೆ ಸರ್ಕಾರ ಬಂದ ನಂತರ ಆ ಗ್ಯಾರಂಟಿಗಳನ್ನು ಅಸ್ತಿತ್ವಕ್ಕೆ ತಂದಿದೆ ಈ ಗ್ಯಾರಂಟಿಗಳನ್ನು ಕೇವಲ ಕಾಂಗ್ರೆಸ್ಸಿಗರಿಗೆ ನೀಡದೆ ಎಲ್ಲ ಜಾತಿ, ಪಕ್ಷ ಮತ್ತು ಧರ್ಮದವರಿಗೂ ನೀಡಿ ನುಡಿದಂತೆ ನಡೆದ ಸರ್ಕಾರವೆಂದು ಸಾಬೀತು ಮಾಡಿದೆ. ಬಿಜೆಪಿಯವರು ಗ್ಯಾರಂಟಿಯ ಬಗ್ಗೆ ಬೊಬ್ಬೆ ಹೊಡೆಯುತ್ತಿದ್ದರು ನಂತರ ತಾವೇ ಚುನಾವಣೆಯ ಸಂದರ್ಭದಲ್ಲಿ ಅನೇಕ ಗ್ಯಾರಂಟಿಗಳನ್ನು ಘೋಷಿಸಿದರು ಈಗ ಮೋದಿ ಪರಿವಾರ, ಮೋದಿ ಗ್ಯಾರಂಟಿ ಎಂಬುದಾಗಿ ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಬಿಜೆಪಿಯ ಬಾಂಡ್ ಹಗರಣ ಬಹಿರಂಗವಾದ್ದರಿಂದ ಕೇಂದ್ರ ಸರ್ಕಾರವು ಅದನ್ನು ಮುಚ್ಚಿ ಹಾಕುವ ಸಲುವಾಗಿ ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಮೂರುವರೆ ಸಾವಿರ ಕೋಟಿ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿರುವುದನ್ನು ಖಂಡಿಸಿದರು.

ಗೆದ್ದೆತ್ತಿನ ಬಾಲ ಹಿಡಿಯುವ ಜೆಡಿಎಸ್ ಕೇವಲ ಮೂರು ಸ್ಥಾನಕ್ಕಾಗಿ ಬಿಜೆಪಿಯವರೊಂದಿಗೆ ಗುದ್ದಾಡಿ ಪಡೆದ ಮೂರು ಸೀಟಿನಲ್ಲಿ ಕೋಲಾರ ಬಿಟ್ಟರೆ ಎರಡು ಕಡೆ ಕುಟುಂಬಸ್ಥರನ್ನೇ ನಿಲ್ಲಿಸಿದ ಕೀರ್ತಿ ದೇವೇಗೌಡರದು. ಚುನಾವಣೆ ನಂತರ ಜೆಡಿಎಸ್ ಧೂಳಿಪಟ ಮಾಡುವ ಸಲುವಾಗಿ ಬಿಜೆಪಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ರಾಜ್ಯದಲ್ಲಿ ಕುಮಾರಸ್ವಾಮಿ ಮಾತ್ರ ಬಿಜೆಪಿ ವೇದಿಕೆಯಲ್ಲಿದ್ದರೆ ಚಿಕ್ಕಮಗಳೂರಿನಲ್ಲಿ ಬೋಜೇಗೌಡರು ಮಾತ್ರ ಬಿಜೆಪಿ ವೇದಿಕೆಯಲ್ಲಿರುತ್ತಾರೆ ಆದರೆ ಕಾರ್ಯಕರ್ತರು ಇವರ ಡೋಂಗಿ ಜಾತ್ಯಾತೀತತೆ ಕಂಡು ಬೇಸರಗೊಂಡು ಈ ಬಾರಿ ಕಾಂಗ್ರೆಸ್ಸಿಗೆ ಮತ ಚಲಾಯಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಿವಕುಮಾರ್, ಪ್ರಕಾಶ್ ರೈ, ರಾಮಚಂದ್ರ, ಸುರೇಶ್, ಭರತ್, ಶಭಾನ ಸುಲ್ತಾನ ಇದ್ದರುs

BJP has no strength to ask for votes in the name of development