ಚಿಕ್ಕಮಗಳೂರು:  ಜಿಲ್ಲೆಯಾದ್ಯಂತ ಸೂರ್ಯ ಕಿರಣದ ಪ್ರಖರತೆ ಹೆಚ್ಚಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಆರೋಗ್ಯಾಧಿಕಾರಿಗಳಿಗೆ ಹಾಗೂ ಇಲಾಖೆ ಸಿಬ್ಬಂದಿಗೆ ತರಬೇತಿ ನೀಡಿದ್ದು ಜನರಲ್ಲಿ ಅರಿವು ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಅಶ್ವಥ್ ಬಾಬು ತಿಳಿಸಿದರು.

ಅವರು ಇಂದು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ ಉ?ಂಶ ಹೆಚ್ಚಾಗಿದ್ದರೆ ಅದನ್ನು ತಡೆಯುವ ಬಗ್ಗೆ ಹಾಗೂ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ ಎಂದರು.

ಪ್ರಸ್ತುತ ಬೇಸಿಗೆಕಾಲ ಇರುವುದರಿಂದ ನಾಗರೀಕರು ಅತಿ ಹೆಚ್ಚು ಬಿಸಿಲಿನ ತಾಪದಿಂದ ಬಳಲುತ್ತಿರುವುದು ಕಂಡುಬಂದಿದ್ದು ಕೆ.ಆರ್ ಪೇಟೆ ಮತ್ತು ಬಯಲು ಭಾಗದಲ್ಲಿ ಈ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ ಎಂದು ಹೇಳಿದರು.

ಇದನ್ನು ಮನಗಂಡು ಫೀವರ್ ಸರ್ವಲೆನ್ಸ್ ಹಾಗೂ ಲಾರ್ವ ಸರ್ವೆ ಮಾಡಿದ್ದು ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಜ್ವರ ಕಾಣಿಸಿಕೊಂಡವರಿಗೆ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಆರೋಗ್ಯಾಧಿಕಾರಿಗಳು ಮತ್ತು ದಾದಿಯರಿಗೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

ಇದಕ್ಕೆ ಬೇಕಾದ ಅಗತ್ಯ ಔ?ಧಿಗಳು ದಾಸ್ತಾನಿಸಿದ್ದು ಕೊರತೆ ಇಲ್ಲ ಕೆಎಫ್‌ಡಿ ಸಹ ಮಳೆ ಬಂದ ಮೇಲೆ ಮಲೆನಾಡು ಭಾಗದಲ್ಲಿ ನಿಯಂತ್ರಣಕ್ಕೆ ಬಂದಿದೆ ಬಿಸಿಲ ತಾಪ ಹೆಚ್ಚಾಗಿ ಡಿಹೈಡ್ರೇಶನ್ ಉಂಟಾಗಿ ನಿತ್ರಾಣ ಗೊಳ್ಳುತ್ತಾರೆ ಅಂತಹ ವ್ಯಕ್ತಿಗಳಿಗೆ ತುರ್ತು ಚಿಕಿತ್ಸೆ ನೀಡಲು ಇಲಾಖೆ ಸೂಕ್ತ ಕ್ರಮ ವಹಿಸುತ್ತಿದೆ ಎಂದರು.

ಇಂತಹ ರೋಗಿಗಳಲ್ಲಿ ಬಿಪಿ ಕಡಿಮೆಯಾಗಿ ವಾಂತಿಯಾಗುವ ಸಾಧ್ಯತೆಗಳಿರುತ್ತವೆ. ಇದು ಹೆಚ್ಚಾಗಿ ವಯಸ್ಸಾದವರು, ಗರ್ಭಿಣಿಯರು ಹಾಗೂ ಮಕ್ಕಳಲ್ಲಿ ಹೆಚ್ಚಾಗಿದ್ದು ಈ ರೀತಿಯ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಪಡೆಯುವುದರ ಜೊತೆಗೆ ನೀರು, ದ್ರವರೂಪದ ಆಹಾರಗಳನ್ನು ಸೇವಿಸಬೇಕೆಂದು ಸಲಹೆ ನೀಡಿದರು.

ಆದ? ಮಧ್ಯಾಹ್ನ ಸುಡು ಬಿಸಿಲಿನಲ್ಲಿ ಸುತ್ತಾಡುವುದನ್ನು ಕಡಿಮೆ ಮಾಡಬೇಕು ಪ್ರತಿಯೊಬ್ಬ ನಾಗರೀಕರು ಆರೋಗ್ಯಕ್ಕೆ ಆದ್ಯತೆ ಕೊಟ್ಟು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

Citizens should pay more attention to health in summer