ಚಿಕ್ಕಮಗಳೂರು: ಆಹಾರದ ಕೊರತೆ, ನೈಸರ್ಗಿಕ ವಿಪತ್ತು ಮತ್ತು ಸಾಂಕ್ರಾಮಿಕ ರೋಗ ಗಳು ಸಂಭವಿಸಿದ ವೇಳೆಯಲ್ಲಿ ನೆರವು ನೀಡುವ ಗುಣವನ್ನು ರೆಡ್‌ಕ್ರಾಸ್ ಸಂಸ್ಥೆ ಒಳಗೊಂಡಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚಂದ್ರಪ್ಪ ಹೇಳಿದರು.

ನಗರದ ಗೌರಿಕಾಲುವೆ ಸಮೀಪ ವಿಶ್ವ ರೆಡ್‌ಕ್ರಾಸ್ ಜನ್ಮದಿನಾಚರಣೆ ಅಂಗವಾಗಿ ವಿಕಲಚೇತನ ಮಕ್ಕಳ ಆಶಾದೀಪಾ ಕೇಂದ್ರಕ್ಕೆ ಆರ್ಥಿಕ ಸಹಾಯಧನ ಹಾಗೂ ಹಣ್ಣುಹಂಪಲು ವಿತರಣಾ ಕಾರ್ಯಕ್ರಮದಲ್ಲಿ ಬುಧ ವಾರ ಪಾಲ್ಗೊಂಡು ಅವರು ಮಾತನಾಡಿದರು.

ರೆಡ್‌ಕ್ರಾಸ್ ಸಂಸ್ಥೆಯು ಅಗತ್ಯವಿರುವ ವ್ಯಕ್ತಿಗಳು ಮತ್ತು ಸಮುದಾಯಗಳ ಯೋಗಕ್ಷೇಮವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಮತ್ತು ಅವರ ಪ್ರಯತ್ನಗಳು ಅನೇಕ ಜೀವನದ ಮೇಲೆ ಧನಾತ್ಮಕ ವಾಗಿ ಪ್ರಭಾವ ಬೀರಿ ಆಡುಮುಟ್ಟದ ಸೊಪ್ಪಿಲ್ಲದಂತೆ ಕಾರ್ಯನಿರ್ವಹಿಸಿದವರು ಎಂದರು.

ಸರ್ಕಾರವು ವಿಕಲಚೇತನ ಮಕ್ಕಳಿಗೆ ಉಚಿತವಾಗಿ ಲ್ಯಾಪ್‌ಟಾಪ್, ಸ್ಕೂಟಿ ಸೇರಿದಂತೆ ಹಲವಾರು ಸೌಲಭ್ಯ ಒದಗಿಸಿ ಮುಂದಿನ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ಹೊತ್ತಿದೆ ಎಂದ ಅವರು ನಾಗರೀಕರು ಇಂಥ ಕಾರ್ಯಗಳಲ್ಲಿ ಸಮಯ ಬಿಡು ಮಾಡಿಕೊಂಡು ಕೈಜೋಡಿಸಬೇಕು ಎಂದು ಹೇಳಿದರು.

ಇತ್ತೀಚೆಗೆ ಬಾಲ್ಯವಿವಾಹ, ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಅತ್ಯಂತ ಜಾಗೃತೆಯಿಂ ದ ಮಕ್ಕಳನ್ನು ಪೋಷಿಸುವುದು ಮುಖ್ಯವಾಗಿದೆ. ಈ ವಿರುದ್ಧ ಸಾರ್ವಜನಿಕರು ಕಟ್ಟೆಚ್ಚರ ವಹಿಸಬೇಕು. ಇಂಥ ಪ್ರಕರಣಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಅಥವಾ ಮಕ್ಕಳ ರಕ್ಷಣಾ ಇಲಾಖೆಗೆ ಮಾಹಿತಿ ತಿಳಿಸಿ ರಕ್ಷಿಸುವ ಕಾರ್ಯ ಮಾಡಬೇಕು ಎಂದರು.

ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಪ್ರದೀಪ್‌ಗೌಡ ಮಾತನಾಡಿ ರೆಡ್ ಕ್ರಾಸ್ ದಿನವನ್ನು ಹೆನ್ರಿ ಡ್ಯೂನಾಂಟ್ ಅವರ ಜನ್ಮದಿನದ ನೆನಪಿಗಾಗಿ ಆಚರಿಸಲಾಗುತ್ತದೆ. ಅವರು ರೆಡ್ ಕ್ರಾಸ್ ಸ್ಥಾಪಕರು ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರಾಗಿದ್ದು ಇವರ ಜನ್ಮದಿನದ ಅಂಗವಾಗಿ ಆಶಾದೀಪಾ ಕೇಂದ್ರಕ್ಕೆ ಸಂಸ್ಥೆಯಿಂದ ೧೦ ಸಾವಿರ ರೂ.ಗಳ ಚೆಕ್‌ನ್ನು ವಿತರಿಸಿ ಸಹಾಯಹಸ್ತ ಕಲ್ಪಿಸಲಾಗಿದೆ ಎಂದರು.

ರೆಡ್‌ಕ್ರಾಸ್ ವಿಪತ್ತುಗಳು ಮತ್ತು ತುರ್ತು ಪರಿಸ್ಥಿತಿಗಳಿಂದ ಬಳಲುತ್ತಿರುವ ಜನ ರಿಗೆ ಮಾನವೀಯ ನೆರವು ಮತ್ತು ಬೆಂಬಲವನ್ನು ನೀಡುವಲ್ಲಿ ನಿಸ್ವಾರ್ಥ ತ್ಯಾಗಗಳನ್ನು ಗುರುತಿಸುವಲ್ಲಿ ಅಡಗಿದೆ. ವಿಶ್ವಾದ್ಯಂತ ಲಕ್ಷಾಂತರ ಜನರಿಗೆ ಜೀವ ಉಳಿಸುವ ಸಹಾಯವನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದರು.

ನಗರಸಭೆ ಮಾಜಿ ಸದಸ್ಯ ರೂಬೆನ್‌ಮೋಸಸ್ ಮಾತನಾಡಿ ವಿಕಲಚೇತನ ಮಕ್ಕಳ ಶ್ರೇಯೋಭಿವೃದ್ದಿ ಗಾಗಿ ವಿವಿಧ ಸಂಘ-ಸಂಸ್ಥೆಗಳು ಹಾಗೂ ಸರ್ಕಾರ ಸೇತುವೆಯ ಕೊಂಡಿಯಾಗಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಮಕ್ಕಳ ಉತ್ತಮ ಭವಿಷ್ಯ ಬಯಸುವವರು ಭಾಷಣಕ್ಕೆ ಸೀಮಿತರಾಗದೇ ಕಾರ್ಯೋನ್ಮು ಖರಾಗಬೇಕು ಎಂದು ಸಲಹೆ ಮಾಡಿದರು.

ಮಾನವ ಜನ್ಮ ಅಪರೂಪವಾದುದು. ಇರುವಷ್ಟು ದಿನಗಳಲ್ಲಿ ಸ್ವಾರ್ಥದಿಂದ ಬದುಕುವುದು ಬಿಟ್ಟು ಸಾಮಾಜಿಕ ಕಾರ್ಯ ಹಾಗೂ ವಿಕಲಚೇತನರ ಸೇವೆಯಲ್ಲಿ ತೊಡಗಿಸಿಕೊಂಡರೆ ಮರಣದ ನಂತರವು ಸ್ಮರಿ ಸುವ ಕೆಲಸವಾಗಲಿದೆ. ಹೀಗಾಗಿ ಪ್ರತಿಯೊಬ್ಬರು ದೈನಂದಿನ ಚಟುವಟಿಕೆ ನಡುವೆಯು ಸತ್ಕಾರ್ಯಗಳಲ್ಲಿ ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ರೆಡ್‌ಕ್ರಾಸ್ ಸಂಸ್ಥೆ ಉಪಾಧ್ಯಕ್ಷ ಪವನ್, ಕಾರ್ಯದರ್ಶಿ ರಸೂಲ್‌ಖಾನ್, ಖಜಾಂಚಿ ಲಿಖಿತ್, ಆರೋಗ್ಯ ಸಮಿತಿ ಅಧ್ಯಕ್ಷ ಡಾ. ಕೆ.ಸುಂದರಗೌಡ, ಯುತ್‌ರೆಡ್‌ಕ್ರಾಸ ಅಧ್ಯಕ್ಷ ನಂಜೇಶ್ ಬೆಣ್ಣೂರು, ನಿರ್ದೇಶಕರಾದ ವಿಲೀಯಂ ಪಿರೇರಾ, ವಿನಾಯಕ ಹಾಗೂ ಆಶಾದೀಪಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

The Red Cross is about improving the well-being of communities