ಚಿಕ್ಕಮಗಳೂರು:   ಕಾನೂನು ಬಾಹಿರವಾಗಿ ಸರ್ಕಾರಿ ಭೂಮಿ ಖಾತೆ ಮಾಡಿಕೊಟ್ಟಿರುವ ಆರೋಪದ ಮೇಲೆ  ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನಲ್ಲಿ ಹಿಂದಿನ ತಹಸೀಲ್ದಾರ್ ಉಮೇಶ್ ಸೇರಿ ಮೂವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನಲ್ಲಿ ಸರ್ಕಾರಿ ಬೀಳು ಜಮೀನನ್ನು ಅಕ್ರಮವಾಗಿ ಜನರಿಗೆ ಖಾತೆ ಮಾಡಿಕೊಟ್ಟಿದ್ದಲ್ಲೇ ಅದನ್ನು ಪೌತಿ ಖಾತೆ, ದಾನ ಪತ್ರ ಎಂದು ಬೇರೆಯವರಿಗೆ ಖಾತೆ ಮಾಡಿಕೊಟ್ಟು ಸರಣಿ ಅಕ್ರಮಗಳನ್ನು ಎಸಗಿರುವ ತಹಸಿಲ್ದಾರರ್ ಉಮೇಶ್ ವಿರುದ್ಧ ಉಪವಿಭಾಗಾಧಿಕಾರಿ ಡಾ.ಕಾಂತರಾಜ್  ನೀಡಿದ ದೂರಿನನ್ವಯ ಕಡೂರು ಠಾಣೆಯಲ್ಲಿ ಕ್ರಿಮಿನಲ್ ಕೇಸು ದಾಖಲಿಸಲಾಗಿದೆ.

ಕಡೂರು ತಾಲೂಕಿನ ಉಳಿಗನಾರು ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಗ್ರಾಮದ ಹನುಮಯ್ಯ, ರತ್ನಮ್ಮ, ನಾರಾಯಾಣಪ್ಪ, ಗೌರಮ್ಮಗೆ ಖಾತೆ ಮಾಡಿಕೊಟ್ಟಿರುವ ಆರೋಪ ಉಮೇಶ್ ಮೇಲಿದೆ. ಕಾನೂನಿನ ನಿಯಮಗಳನ್ನು ಗಾಳಿ ತೂರಿ ಅಕ್ರಮವಾಗಿ 5.04 ಎಕರೆ ಸರ್ಕಾರಿ ಜಮೀನನ್ನ ನಾಲ್ವರಿಗೆ ಖಾತೆ ಮಾಡಿಕೊಟ್ಟಿದ್ದ ಉಮೇಶ್  ಮತ್ತು ನೌಕರರುತಹಸಿಲ್ದಾರ್ ಉಮೇಶ್, ನಿವೃತ್ತ  ಶಿರಸ್ತೆದಾರ್ ನಂಜುಂಡಯ್ಯ, ರೆವೆನ್ಯೂ ಇನ್ಸ್ ಪೆಕ್ಟರ್ ಬಸವರಾಜಪ್ಪ ವಿರುದ್ದ ಪ್ರಕರಣ ದಾಖಲಾಗಿದೆ.

ಸದ್ಯ ತಹಶೀಲ್ದಾರ್ ಉಮೇಶ್  ಕಡೂರಿನಿಂದ ವರ್ಗಾವಣೆ ಆಗಿ ಬೇರೆಡೆ ಕಾರ್ಯನಿರ್ವಹಿಸುತ್ತಿದ್ದಾರೆ.

Criminal case against three including former tehsildar Umesh in Kadur taluk