ನವದೆಹಲಿ: ಕೊರೋನಾ ಹೊಸ ಆವೃತ್ತಿಯಂತಿರುವ ಒಮಿಕ್ರಾನ್ ದೆಹಲಿಯಲ್ಲಿ ಆರ್ಭಟಿಸುತ್ತಿದೆ. ಡಿಸೆಂಬರ್ 30-31 ಎರಡೇ ದಿನದ ಪರೀಕ್ಷೆಯಲ್ಲಿ ಶೇ.84ರಷ್ಟು ಮಂದಿಗೆ ಕೊರೋನ ದೃಢಪಟ್ಟಿರುವುದು ಆತಂಕ ಮೂಡಿಸಿದೆ. ಒಂದು ದಿನಗಳಿಂದ ನಾಲ್ಕು ಸಾವಿರ ಕೊರೋನಾ ಪ್ರಕರಣಗಳು ದಾಖಲಾಗಿದ್ದವು, ಸೋಮವಾರ, 4099 ಪ್ರಕರಣಗಳು ದಾಖಲಾಗುವ ಮೂಲಕ ಪಾಸಿಟೀವ್ ದರ ಶೇ.6.5ಕ್ಕೆ ಏರಿದೆ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಸೋಮವಾರ ಹೇಳಿದ್ದಾರೆ.

ಇಡೀ ರಾಷ್ಟ್ರದ 25 ರಾಜ್ಯಗಳಲ್ಲಿ ಕೊರೋನಾ ಆರ್ಭಟಿಸುತ್ತಿದೆ. ಇದರಲ್ಲಿ ಮಹಾರಾಷ್ಟ್ರ ಮೊದಲ ರಾಜ್ಯವಾದರೆ, ದೆಹಲಿ ಅದರ ನಂತರ ಸ್ಥಾನಗಳಿಸಿದೆ. ದೇಶದಲ್ಲಿ ಒಟ್ಟಾರೆ, ಸೋಮವಾರ 33,750 ಕೊರೋನಾ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 123 ಜನ ಮರಣ ಹೊಂದಿದ್ದಾರೆ.

ದೆಹಲಿಯ ಆರೋಗ್ಯ ಸಚಿವರು ಹೇಳುವ ಪ್ರಕಾರ, ಕೊರೋನಾ ಆರ್ಭಟಿಸುತ್ತಿದ್ದರೂ, ನಮ್ಮಲ್ಲಿ ಯಾವುದೇ ವೈದ್ಯಕೀಯ ಕೊರತೆ ಆಗಿಲ್ಲ. ಸಿಬ್ಬಂದಿ ಎಂಥ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಕೊರೋನ ಪರೀಕ್ಷೆಗೆಂದು ದೆಹಲಿಯ ಲೋಕನಾಯಕ್ ಆಸ್ಪತ್ರೆ, ಇನ್ ಸ್ಟಿಟ್ಯೂಟ್ ಆಫ್ ಲಿವರ್ ಸೈನ್ಸ್ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ.

ಭಾನುವಾರ ದೆಹಲಿ ನಗರದಲ್ಲೊಂದರಲ್ಲೇ 3,194 ಪ್ರಕರಣಗಳು ದಾಖಲಾಗಿದ್ದು, ಇದು ಶನಿವಾರಕ್ಕಿಂತ ಶೇ.15ರಷ್ಟು ಹೆಚ್ಚಾಗಿದೆ. ಶನಿವಾರ ಕೊರೋನಾದಿಂದಾಗಿ ಒಬ್ಬರು ಮರಣ ಹೊಂದಿದ್ದಾರೆ. ಒಟ್ಟಾರೆ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ 25,109ಕ್ಕೆ ಏರಿದಂತಾಗಿದೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.
ತಜ್ಞರ ಪ್ರಕಾರ ಇನ್ನು ಒಂದು ವಾರದಲ್ಲಿ ಪ್ರಕರಣಗಳು ಮತ್ತಷ್ಟು ಏರುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  Mekedatu Explainer: ಏನಿದು ಮೇಕೆದಾಟು ಅಣೆಕಟ್ಟು ಯೋಜನೆ? ವಿವಾದ ಏಕೆ? ಇಲ್ಲಿದೆ ಸಮಗ್ರ ಮಾಹಿತಿ

(Delhi Covid 19 Positivity rate increased to 6.5 percent)