ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆ ದೇಶದ ಜನರಿಗೆ ಒಂಥರಾ ಗುಟ್ಟಿನ ವಿಷಯದಂತೆ ಭಾಸವಾಯಿತು. ರಾಜಸ್ಥಾನದಲ್ಲಿ ಆದ ಮದುವೆ ಬಹಳ ಸಿಕ್ರೇಟ್ ಆಗಿತ್ತು. ಚಿತ್ರರಂಗದ ಬಹುತೇಕರಿಗೆ ಸಹ ಮದುವೆಗೆ ಆಮಂತ್ರಣ ಇರಲಿಲ್ಲ. ಕೇವಲ ಕೆಲವೇ ಆಪ್ತರ ಸಮ್ಮುಖದಲ್ಲಿ ಮದುವೆ ನೆರವೇರಿತು. ಇಷ್ಟು ಖಾಸಗಿಯಾಗಿ ನಡೆದ ಮದುವೆಯನ್ನೇ ಉದಾಹರಣೆಯನ್ನಾಗಿ ತೆಗೆದುಕೊಂಡು ದೆಹಲಿ ಪೊಲೀಸರು ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಸೈಬರ್ ಸೆಕ್ಯುರಿಟಿಯ ಕುರಿತು ಜನರಲ್ಲಿ ಜಾಗೃತೆ ಮೂಡಿಸಲು ದೆಹಲಿ ಪೊಲೀಸರು ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆಯನ್ನು ಉದಾಹರಣೆಯನ್ನು ತೆಗೆದುಕೊಂಡಿದ್ದಾರೆ. ನೋಡಿ, ಬಾಲಿವುಡ್ ಸೆಲೆಬ್ರಿಟಿಗಳಾದ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಎಷ್ಟೆಲ್ಲ ಖಾಸಗಿಯಾಗಿ ಮದುವೆಯಾದರು, ನಿಮ್ಮ ಪಾಸ್‌ವರ್ಡ್‌ಗಳೂ ಸಹ ಅಷ್ಟೇ ಖಾಸಗಿಯಾಗಿ ಇರಬೇಕು ಎಂಬ ಸಂದೇಶ ಸಾರಲು ದೆಹಲಿ ಪೊಲೀಸರು ಜನರಿಗೆ ಸಂದೇಶ ಸೇರಲು ತಾರಾಜೋಡಿಯ ಮದುವೆಯನ್ನು ಬಳಸಿಕೊಂಡಿದ್ದಾರೆ.

ದೆಹಲಿ ಪೊಲೀಸ್ ಇಲಾಖೆ, ಮುಂಬೈ ಪೊಲೀಸ್ ಇಲಾಖೆ ಸೇರಿದಂತೆ ಹಲವು ಇಲಾಖೆಗಳು ಜನರಲ್ಲಿ ಹಲವು ಬಗೆಯ ಜಾಗೃತಿ ಮೂಡಿಸಲು ಇಂತಹ ಜನಪ್ರಿಯ ಘಟನೆಗಳನ್ನು ಬಳಸಿಕೊಂಡ ಹಲವು ಉದಾಹರಣೆಗಳಿವೆ.

ಬಾಲಿವುಡ್‌ ಖ್ಯಾತ ತಾರಾ ಜೋಡಿ ಕತ್ರೀನಾ ಕೈಫ್ ಹಾಗೂ ವಿಕ್ಕಿ ಕೌಶಲ್ ವಿವಾಹ ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್‌ನಲ್ಲಿ ಗುರುವಾರ ಅದ್ದೂರಿಯಾಗಿ ನಡೆದಿದೆ.

ಡಿಸೆಂಬರ್ 7ರಿಂದಲೇ ಆರಂಭವಾಗಿದ್ದ ವಿವಾಹಪೂರ್ವ ಕಾರ್ಯಕ್ರಮಗಳು ಹಾಗೂ 9ರಂದು ನಡೆದ ಮದುವೆಯಲ್ಲಿ ಕೇವಲ ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರಷ್ಟೇ ಉಪಸ್ಥಿತರಿದ್ದರು.

ಇದನ್ನೂ ಓದಿ: Katrina Kaif Vicky Kaushal: ಹೊಸಜೋಡಿಗೆ ಹರಸಲು ಬಂದ ಕತ್ರಿನಾ ಕೈಫ್‌ 3 ಅಕ್ಕಂದಿರು, 3 ತಂಗಿಯರು ಮತ್ತು ಓರ್ವ ಸೋದರ

(Delhi Police advice keep your password has vicky kaushal and katrina kaif)