ಚಿಕ್ಕಮಗಳೂರು: ನಗರದ ಜಿಲ್ಲಾ ಹಾಗೂ ನಗರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ನ.೨೪ ರಿಂದ ೨೬ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಜಗದೀಶ್ ಕೋಟೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿದ ಅವರು ಕನ್ನಡ ರಾಜ್ಯೋತ್ಸವ ಪ್ರಯುಕ್ತ ನ.೨೪ರಂದು ನಗರದ ದೀಪ ನಸಿಂಗ್ ಹೋಂ ಎದುರು ರಸ್ತೆಯ ಪಟಾಕಿ ಮೈದಾನದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಂಡಿದ್ದೇವೆ ಎಂದರು.

ನ.೨೫ ರಂದು ಮಧ್ಯಾಹ್ನ ೧೨:೩೦ ಜೀವನ್ ಸಂಧ್ಯಾ ವೃದ್ಧಾಶ್ರಮ, ಅಂಧ ಮಕ್ಕಳ ಪಾಠ ಶಾಲೆ ಕೆಂಪನಹಳ್ಳಿ ಮತ್ತು ಅನ್ನಪೂರ್ಣ ವೃದ್ಧಾಶ್ರಮ ಇಂದಾವರ ಇಲ್ಲಿ ಸಂಘದ ವತಿಯಿಂದ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಹೇಳಿದರು.

ನ.೨೬ರ ಭಾನುವಾರ ಬೆಳಗ್ಗೆ ೮ ಗಂಟೆಗೆ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ವಂದೇ ಮಾತರಂ ಆಟೋ ನಿಲ್ದಾಣದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಹಾಗೂ ಇದೇ ದಿನ ಸಂಜೆ ೬ ಗಂಟೆಗೆ ಆರ್ಕೆಸ್ಟ್ರಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಮೇಲ್ಕಂಡ ಎಲ್ಲಾ ಕಾರ್ಯಕ್ರಮಗಳಿಗೆ ಆಗಮಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕಾರ ನೀಡಬೇಕಾಗಿ ಮನವಿ ಮಾಡಿದರು.

ಆಟೋ ಚಾಲಕರು ಮತ್ತು ಮಾಲೀಕರಿಗೆ ಆಟೋ ಕಪ್-೨೦೨೩ ಕ್ರಿಕೆಟ್ ಪಂದ್ಯಾವಳಿಯನ್ನು .೨೪ರಂದು ಹಮ್ಮಿಕೊಳ್ಳಲಾಗಿದ್ದು, ಪ್ರವೇಶ ಶುಲ್ಕ ರೂ ೧೫೦೦ ಆಗಿರುತ್ತದೆ. ಪ್ರಥಮ ಬಹುಮಾನ ರೂ. ೮೦೦೦ ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ರೂ. ೫೦೦೦ ಹಾಗೂ ಆಕ?ಕ ಟ್ರೋಫಿ ಇರುತ್ತದೆ. ಆಸಕ್ತ ತಂಡಗಳು ನ.೨೨ ರ ಸಂಜೆ ೫ ಗಂಟೆಯೊಳಗೆ ಮೊಬೈಲ್ ನಂಬರ್ ಉಮೇಶ್: ೯೭೪೦೩೪೨೯೪೯, ವಿಜಯ್: ೯೬೬೩೦೪೨೯೮೪, ವೆಂಕಟೇಶ್: ೮೨೭೭೪೫೦೪೯೮, ವಿಶಾಲ್: ೭೮೯೨೬೧೬೯೯೩ ಇವರಲ್ಲಿ ನಂದಯಿಸುವಂತೆ ವಿನಂತಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ರಾಮೇಗೌಡ, ಪ್ರಧಾನ ಕಾರ್ಯದರ್ಶಿ ಹೆಚ್.ಸಿ ರಾಘವೇಂದ್ರ, ಯಶ್ವಂತ್, ಬಸವರಾಜ್, ಉದಯ್‌ಕುಮಾರ್ ಇದ್ದರು.

District and City Auto Drivers and Owners Association