ಚಿಕ್ಕಮಗಳೂರು:  ಮಳೆ ಇಲ್ಲದೆ ಜಿಲ್ಲೆ ತೀವ್ರ ಸ್ವರೂಪದ ಬರಗಾಲಕ್ಕೆ ತುತ್ತಾಗಿದ್ದು ಇದೀಗ ೪೩೬ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆಯಾಗಿದ್ದು ಜೂನ್‌ವರೆಗೆ ನೀರು ಸರಬರಾಜು ಮಾಡಲು ಕ್ರಿಯಾಯೋಜನೆ ಸಿದ್ಧಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್ ಅವರು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|| ಬಿ. ಗೋಪಾಲಕೃ? ಅವರೊಂದಿಗೆ ತಮ್ಮ ಕಚೇರಿಯಲ್ಲಿ ಕರೆದಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿವರ ನೀಡಿದರು.

ಪೂರ್ವ ಮುಂಗಾರು ಕಾಲವಾದ ಜನವರಿಯಿಂದ ಈವರೆಗೆ ಶೇ ಮೈನಸ್ ೬ ರ? ಕಡಿಮೆ ಪ್ರಮಾಣದ ಮಳೆಯಾಗಿದ್ದು ಅಜ್ಜಂಪುರ ಮತ್ತು ತರೀಕೆರೆ ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಸಂಪೂರ್ಣವಾಗಿ ಕುಸಿದಿದ್ದು ಎಲ್ಲಾ ಕೊಳವೆ ಬಾವಿಗಳು ಬತ್ತಿ ಹೋಗಿವೆ ಎಂದರು.

ಕಡೂರು, ಅಜ್ಜಂಪುರ, ತರೀಕೆರೆ ತಾಲೂಕುಗಳಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆಯಾಗಿದ್ದು ಜೂನ್ ತಿಂಗಳವರೆಗೆ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ಸಲುವಾಗಿ ಕ್ರಿಯಾ ಯೋಜನೆ ಸಿದ್ದಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ತೀವ್ರ ಸಮಸ್ಯೆ ಇರುವ ೪೩೬ ಹಳ್ಳಿಗಳನ್ನು ಗುರುತಿಸಿದ್ದು ೩೯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೯೫ ಹಳ್ಳಿಗಳಿಗೆ ಈಗಾಗಲೇ ೫೯ ಟ್ಯಾಂಕರ್‌ಗಳ ಮೂಲಕ ೧೫೦ ಟ್ರಿಪ್ ನೀರು ಸರಬರಾಜು ಮಾಡಲಾಗಿದೆ ಎಂದು ವಿವರಿಸಿದರು.

ಜಿಲ್ಲಾ ವಿಪತ್ತು ನಿರ್ವಹಣಾ ಕಾರ್ಯಪಡೆ ಹಾಗೂ ರಾಜ್ಯ ವಿಪತ್ತು ನಿಧಿ ವ್ಯಾಪ್ತಿಯಲ್ಲಿ ಬರುವ ಅನುದಾನದಲ್ಲಿ ಹಳೆ ಕೊಳವೆ ಬಾವಿ ದುರಸ್ಥಿ ಹಾಗೂ ೧೬೦ ಖಾಸಗಿ ಬೊರ್‌ವೆಲ್‌ಗಳಿಂದ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗಿದೆ. ತರೀಕೆರೆ ಮತ್ತು ಚಿಕ್ಕಮಗಳೂರು ಎನ್‌ಆರ್ ಪುರದಲ್ಲಿ ೩೬ ಮಂದಿ ತಮ್ಮ ಖಾಸಗಿ ಬೋರ್‌ವೆಲ್‌ನಿಂದ ಹಣ ಪಡೆಯದೆ ಉಚಿತವಾಗಿ ನೀರು ನೀಡುತ್ತಿದ್ದು ಇದಕ್ಕಾಗಿ ಜಿಲ್ಲಾಡಳಿತ ಧನ್ಯವಾದ ಅರ್ಪಿಸುತ್ತದೆ ಎಂದರು.

ಕುಡಿಯುವ ನೀರು ಸರಬರಾಜು ಮಾಡುವ ಖಾಸಗಿ ಕೊಳವೆ ಬಾವಿಗೆ ೫೦ ಸಾವಿರದ ವರೆಗೆ ಬಾಡಿಗೆ ನೀಡಲಾಗುವುದು. ಈ ಹಿಂದೆ ಕುಡಿಯುವ ನೀರು ಸರಬರಾಜು ಮಾಡಿರುವ ಖಾಸಗಿ ವ್ಯಕ್ತಿಗಳಿಗೆ ಮಾರ್ಚ್ ಅಂತ್ಯದವರೆಗೆ ೫.೬೦ ಲಕ್ಷ ರೂ ಬಿಲ್ ಪಾವತಿಸಲಾಗಿದೆ. ಎಸ್‌ಡಿಆರ್‌ಎಫ್ ಯೋಜನೆಯಡಿ ಪೈಪ್‌ಲೈನ್ ಅಳವಡಿಸಲು ೬೫ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು ೨೫ ಕಾಮಗಾರಿಗಳು ಪೂರ್ಣಗೊಂಡಿದ್ದು ೮೫.೫ ಲಕ್ಷ ರೂ ಪಾವತಿಸಲಾಗಿದೆ. ಒಟ್ಟು ೧೪.೧೨ ಕಿ.ಮೀ ಪೈಪ್‌ಲೈನ್ ಅಳವಡಿಸಲಾಗಿದೆ ಎಂದು ಹೇಳಿದರು.

ಬರ ಪರಿಸ್ಥಿತಿ ನಿರ್ವಹಣೆಗೆ ಪ್ರಕೃತಿ ವಿಕೋಪ ನಿಧಿಯಲ್ಲಿ ಸಾಕ? ಹಣವಿದ್ದು ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ೧೨ ಕೋಟಿ ರೂ ಬಿಡುಗಡೆಯಾಗಿದ್ದು ೩೬ ಲಕ್ಷ ರೂ ಖರ್ಚಾಗಿದೆ ಎಂದು ವಿವರಿಸಿದರು.

ವಾಡಿಕೆಗಿಂತ ತುಂಬಾ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ಪೂರ್ವ ಮುಂಗಾರು ಬಿತ್ತನೆ ಹಿನ್ನೆಡೆಯಾಗಿದೆ ಮೇ ೯ರ ನಂತರ ಮಳೆ ಬರುವ ನಿರೀಕ್ಷೆಯಿರುವುದಾಗಿ ಹವಮಾನ ಇಲಾಖೆ ತಿಳಿಸಿರುವುದರಿಂದ ಅಗತ್ಯ ಇರುವ? ಬಿತ್ತನೆ ಬೀಜ ಮತ್ತು ರಸಗೊಬ್ಬರದ ದಾಸ್ತಾನು ಇಟ್ಟುಕೊಂಡಿದ್ದು ೮೯೦೦ ಹೆಕ್ಟೇರ್ ಭೂಮಿಯನ್ನು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಪೂರ್ವ ಮುಂಗಾರಿನಲ್ಲಿ ದ್ವಿದಳ ಧಾನ್ಯ, ತರಕಾರಿ ಹಾಗೂ ಹತ್ತಿ ಬಿತ್ತನೆ ಆಗಬೇಕಾಗಿದ್ದು ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದರು.

ತೋಟಗಾರಿಕೆ ಬೆಳೆಗಳಲ್ಲಿ ಟೊಮೊಟೊ ಸೇರಿದಂತೆ ತರಕಾರಿ ಬೆಳೆಗಳಿಗೆ ಮಳೆ ಬರದೆ ತೊಂದರೆ ಆಗಿದೆ. ಅಡಿಕೆ ಬೆಳೆಗೆ ಮಲೆನಾಡು ಭಾಗದಲ್ಲಿ ಎಲೆ ಚುಕ್ಕಿ ರೋಗ ಕಾಣಿಸಿಕೊಂಡಿದ್ದು ಮಳೆಗಾಲದಲ್ಲಿ ಇದ್ದ ಪ್ರದೇಶದಷ್ಟೇ ಮುಂದುವರೆದಿದ್ದು ಹೆಚ್ಚಿನ ಪ್ರದೇಶಕ್ಕೆ ವಿಸ್ತರಣೆ ಆಗಿಲ್ಲ ಎಂದರು.

ತೆಂಗು ಬೆಳೆಗೆ ಕಪ್ಪು ತಲೆ ಹುಳುವಿನ ಬಾದೆ ಕಾಣಿಸಿಕೊಂಡಿದ್ದು ಸಾಮೂಹಿಕ ನಿಯಂತ್ರಣದಿಂದ ಮಾತ್ರ ಇದನ್ನು ತಡೆಗಟ್ಟಬಹುದಾಗಿದ್ದು ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿದ್ದು ವಾರಕ್ಕೊಮ್ಮೆ ಅಂತರ್ಜಲದ ಬಗ್ಗೆ ಪರಿಶೀಲನೆ ನಡೆಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ತಿಳಿಸಲಾಗಿದೆ ಎಂದು ಹೇಳಿದ ಜಿಲ್ಲಾಧಿಕಾರಿಗಳು ಅಡಿಕೆ ಬೆಳೆ ಪ್ರದೇಶ ವ್ಯಾಪಕವಾಗಿ ಹೆಚ್ಚಾಗುತ್ತಿದ್ದು ಅಡಿಕೆ ಬೆಳೆಗೆ ಹೆಚ್ಚಿನ ನೀರು ಬೇಕಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೊಳವೆ ಬಾವಿ ಕೊರೆಯುತ್ತಿರುವುದರಿಂದ ಬಯಲುಸೀಮೆ ಭಾಗದಲ್ಲಿ ಅಂತರ್ಜಲ ಮಟ್ಟ ಕುಸಿಯಲು ಕಾರಣವಾಗುತ್ತಿದೆ ಆದ್ದರಿಂದ ಇರುವ ಅಡಿಕೆ ಪ್ರದೇಶದಲ್ಲಿಯೇ ಮಧ್ಯಂತರ ಉಪ ಬೆಳೆ ಬೆಳೆಯಲು ರೈತರು ಮುಂದಾದರೆ ಒಳ್ಳೆಯದೆಂದು ಸಲಹೆ ನೀಡಿದರು.

ಜಲಮೂಲಗಳಿರುವ ಕೆರೆ ಹಳ್ಳಗಳಿಂದ ಅಕ್ರಮವಾಗಿ ನೀರು ಬಳಸುತ್ತಿರುವ ಬಗ್ಗೆ ಗಮನ ಸೆಳೆದಾಗ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

Drinking water is likely to be a serious problem in 436 villages in the district