ಸಿಲಿಕಾನ್ ಸಿಟಿ ಮಂದಿಗೆ ಕರೆಂಟ್ ಬಿಲ್ ಕಟ್ಟೋದೇ ದೊಡ್ಡ ತಲೆಬಿಸಿಯಾದ್ರೆ ಇದರ ಜತೆಗೆ ಇನ್ಮುಂದೆ ಗಾರ್ಬೇಜ್ ಬಿಲ್ ಕೂಡ ಕಟ್ಟಬೇಕಾಗಬಹುದು!

ಹೌದು, ಗಾರ್ಬೇಜ್ ಬಿಲ್, ಗಾರ್ಬೇಜ್ ಟ್ಯಾಕ್ಸ್ ಕಟ್ಟೋ ದಿನಗಳು ದೂರ ಇಲ್ಲ. ಗಾರ್ಬೇಜ್ ಸೆಸ್ ಜತೆ ಗಾರ್ಬೇಜ್ ಯೂಸರ್ ಫೀ ಕೂಡ ಶೀಘ್ರದಲ್ಲೇ ಜಾರಿ ಮಾಡಲು ಸರ್ಕಾರ ನಿರ್ಧರಿಸಿದೆ. ತಿಂಗಳ ಕೊನೆಯಲ್ಲಿ ಹೇಗೆ ಕರೆಂಟ್ ಬಿಲ್ ಬರುತ್ತದೆಯೋ ಅದೇ ರೀತಿ ಗಾರ್ಬೇಜ್ ಬಿಲ್ ಕೂಡ ಬರಲಿದೆ. ವರ್ಷಕ್ಕೊಮ್ಮೆ ಗಾರ್ಬೇಜ್ ಸೆಸ್ ಕೂಡ ಕಟ್ಟಬೇಕು. ಹೊಸ ನಿಯಮ ಜಾರಿಗೆ ಇಲಾಖೆ ಮುಂದಾಗಿದೆ.

ಕರೆಂಟ್ ಬಿಲ್ ಆಧಾರದ ಮೇಲೆ ಗಾರ್ಬೇಜ್ ಬಿಲ್ ನಿಗದಿಯಾಗುತ್ತದೆ. ಈಗಾಗಲೇ ನಗರಾಭಿವೃದ್ಧಿ ಇಲಾಖೆಗೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕರೆ ಕಸದ ಬಿಲ್ ಕಟ್ಟಲೇಬೇಕಾಗುತ್ತದೆ. ಬಿಬಿಎಂಪಿ ನಗರದಲ್ಲಿ ಮನೆ ಮನೆಯಿಂದ ಕಸ ಸಂಗ್ರಹಣೆ ಮಾಡುತ್ತಿದೆ. ಇದರ ನಿರ್ವಹಣೆಗೆ ಕೋಟ್ಯಂತರ ರೂ. ಖರ್ಚಾಗುತ್ತಿದೆ. ಸಿಲಿಕಾನ್ ಸಿಟಿ ಮಂದಿ ಸದ್ಯ ವರ್ಷಕ್ಕೊಮ್ಮೆ ಪ್ರಾಪರ್ಟಿ ಟ್ಯಾಕ್ಸ್ ಕಟ್ಟುವಾಗ ಗಾರ್ಬೇಜ್ ಸೆಸ್ ಕಟ್ಟುತ್ತಿದ್ದಾರೆ. ಆದರೆ ಈ ಹಣ ಸಾಕಾಗುತ್ತಿಲ್ಲ ಎಂದು ಬಿಬಿಎಂಪಿ ಹೇಳಿದೆ.

Garbage Bill