ಸಿನಿಮಾದಲ್ಲಿ ಗೆಲ್ಲಲು ಶುರುವಾದರೆ ಏನು ಬೇಕಾದರು ಆಗಬಹುದು. ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಶುರು ಮಾಡಿದ ಗೀತಾ ಆರ್ಟ್ಸ್ ಗೆಲುವಿನ ಕುದುರೆ ಅಂತಲೇ ಹೇಳಬೇಕು. ಕಾದು, ಕಾದು ಸಿನಿಮಾ ನಿರ್ಮಿಸುವ ಈ ಪ್ರೊಡಕ್ಷನ್ ಹೌಸ್ ನಲ್ಲಿ ಮುಟ್ಟಿದ್ದೆಲ್ಲ ಚಿನ್ನವೇ.

ಗೀತಗೋವಿಂದಂ ಅದಕ್ಕೆ ಉದಾಹರಣೆ. ಕೇವಲ 8.52 ಕೋಟಿ ಹೂಡಿಕೆ ಮಾಡಿ 65 ಕೋಟಿ ಲಾಭ ಮಾಡಿದ ಸಿನಿಮಾ ಇದು. ಹರಿಕಾ, ಹಾಸಿನ ತಂಡದ ಕೈಚಳಕದಿಂದ ಅಲೋ ವೈಕುಂಠ ಪುರಂ ಗೆ ದೊರೆತ ಗೆಲುವಿನ ಬಗ್ಗೆ ಯಾರೂ ಹೇಳಬೇಕಿಲ್ಲ. 100 ಕೋಟಿ ಹೂಡಕೆ ಮಾಡಿ, 360 ಕೋಟಿ ಬಾಚಿದ ಸಿನಿಮಾ ಇದು. ಇಂಥ ಗೆಲುವಿನ ಚಮಕ್ ಗಳನ್ನು ನೀಡುವುದು ಗೀತಾ ಆರ್ಟ್ಸ್ ಉರುಫ್ ಅಲ್ಲು ಅರವಿಂದ್ ಅವರಿಗೆ ಮಾತ್ರ ಸಾಧ್ಯ.

ಈಗ ಅಲ್ಲು ಅರವಿಂದ್ ಮತ್ತೊಂದು ಸಾಹಸಕ್ಕೆ ಕೈ ಹಾಕುವ ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹೈದರಾಬಾದ್ ನಿಂದ ಬರುತ್ತಿದೆ. ಗೀತಗೋವಿಂದಂ ಮೂಲಕ ಜಗತ್ತಿಗೆ ಪರಶುರಾಮ್ ಎಂಬ ಸ್ಟಾರ್ ನಿರ್ದೇಶಕನನ್ನು ಪರಿಚಯಿಸಿದ ಅಲ್ಲು ಅರವಿಂದ್ ಮತ್ತೆ ಒಂದಾಗುವ ಸಾಧ್ಯತೆ ಇದೆ.  ಹೊಸ ಚಿತ್ರವೇನಾದರು ಸೆಟ್ಟೇರಿದರೆ ಅದಕ್ಕೆ ನಾಯಕ ನಟ ಜ್ಯು.ಎನ್.ಟಿ. ರಾಮರಾವ್ ಆಗಲಿದ್ದಾರೆ ಅನ್ನೋದು ಮತ್ತೊಂದು ಬಿಸಿಬಿಸಿ ಸುದ್ದಿ.

ಪ್ರಸ್ತುತ ನಿರ್ದೇಶಕ ಪರಶುರಾಮ್ ಮಹೇಶ್ ಬಾಬು ನಾಯಕ ನಟನಾಗಿ ನಟಿಸಿ, ನಿರ್ಮಿಸುತ್ತಿರುವ ಸರ್ಕಾರಿವಾರಿ ಪಟ್ಟ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.  ಇದು ಈ ವರ್ಷ ಮೇ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ಎಲ್ಲವೂ ಅಂದು ಕೊಂಡಂತೆ ಆದರೆ, ಸರ್ಕಾರಿ ವಾರಿಪಟ್ಟ ಸೂಪರ್ ಡೂಪರ್ ಹಿಟ್ ಆಗುತ್ತದೆ ಎನ್ನುವ ದೊಡ್ಡ ಲೆಕ್ಕಾಚಾರ ನಡೆಯುತ್ತಿದೆ. ನಿಜಕ್ಕೂ ಈಗ ಮಾಡುತ್ತಿರುವ ಹೈಪ್ ನಂತೆ ಮಹೇಶ್ ಬಾಬು ಸಿನಿಮಾಗೆ ದೊಡ್ಡ ಮಟ್ಟದ ಯಶಸ್ಸು ದೊರೆತರೆ, ನಿರ್ದೇಶಕ ಪರಶುರಾಮ್ ಮತ್ತೆ ಗೀತಾ ಆರ್ಟ್ಸ್ ಗೆ ಕೆಲಸ ಮಾಡುವ ಸುಯೋಗ ದೊರೆಯಲಿದೆ ಎನ್ನಲಾಗುತ್ತಿದೆ.

ಅಲ್ಲೂ ಅರವಿಂದ್, ನಿರ್ದೇಶಕ ಪರುಶುರಾಮ್, ಜ್ಯೂನಿಯರ್ ಎನ್. ಟಿ. ರಾಮರಾವ್ ಈ ಮೂರು ಜನರ ಕಾಂಬಿನೇಷನ್ ಅದ್ಬುತವಾಗಿದೆ. ಹೀಗಾಗಿ, ತೆಲುಗು ಚಿತ್ರರಂಗದಲ್ಲಿ ಮತ್ತೊಂದು ಮೈಲಿಗಲ್ಲಿನ ಚಿತ್ರ ನಿರ್ಮಾಣವಾಗುವ ಬಗ್ಗೆ ಈಗ ಯೋಚನೆ ಶುರುವಾಗಿದೆ. ಎಲ್ಲವೂ ಮಹೇಶ್ ಬಾಬು ಸಿನಿಮಾ ಯಾವ ರೀತಿ ಬಾಕ್ಸ್ ಆಫೀಸ್ ನಲ್ಲಿ ಗೆಲ್ಲುತ್ತದೆ ಎನ್ನುವುದರ ಮೇಲೆ ತೀರ್ಮಾನವಾಗಲಿದೆ.

(Jr. NTR May work with Geetha Arts, If possible parasuram Will direct the film)