ಬೆಂಗಳೂರು:  ತಮ್ಮ ಪುತ್ರನ ಕ್ಯಾನ್ಸರ್‌ ಚಿಕಿತ್ಸೆಗೆ ಆರ್ಥಿಕ ಸಹಾಯ ಪಡೆಯುವ ನೆಪದಲ್ಲಿ ವ್ಯಕ್ತಿಯೊಬ್ಬರನ್ನು ಪರಿಚಯಿಸಿಕೊಂಡು ಬಳಿಕ ‘ಹನಿಟ್ರ್ಯಾಪ್‌’ ಬಲೆಗೆ ಬೀಳಿಸಿ ಇಬ್ಬರು ಮಹಿಳೆಯರು .82 ಲಕ್ಷ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿ ಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀನಗರದ 60 ವರ್ಷದ ನಿವಾಸಿ ಸಂತ್ರಸ್ತನಾಗಿದ್ದು, ಈ ಸಂಬಂಧ ಅವರ ಸ್ನೇಹಿತೆ 40 ವರ್ಷದ ಮಹಿಳೆ ಹಾಗೂ ಆಕೆಯ ಸೋದರಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಕಳೆದ ಏಪ್ರಿಲ್‌ನಲ್ಲಿ ದೂರುದಾರನಿಗೆ ಅವರ ಸ್ನೇಹಿತ, ‘ಮಹಿಳೆಯೊಬ್ಬರ ಪುತ್ರ ಕ್ಯಾನ್ಸರ್‌ ಪೀಡಿತನಾಗಿದ್ದಾನೆ. ಆತನಿಗೆ ಆರ್ಥಿಕ ನೆರವು ನೀಡುವಂತೆ’ ಕೋರಿದ್ದರು. ಅಂತೆಯೇ ಉತ್ತರಹಳ್ಳಿ ರಸ್ತೆಯ ರಜತಾದ್ರಿ ಹೋಟೆಲ್‌(Rajatadrii hotel uttarahalli)ಗೆ ಆಕೆಯನ್ನು ಕರೆಸಿಕೊಂಡು .5 ಸಾವಿರ ನೀಡಿದ್ದರು.

ಬಳಿಕ ಇಬ್ಬರ ನಡುವೆ ಒಡನಾಟ ಬೆಳದಿದೆ. ಈ ಗೆಳೆತನದ ಹಿನ್ನಲೆಯಲ್ಲಿ ಸಂತ್ರಸ್ತನಿಗೆ ಆರೋಪಿ ಕರೆ ಮಾಡಿ ಕಷ್ಟಹೇಳಿಕೊಳ್ಳುತ್ತಿದ್ದಳು. ಹೀಗಿರುವಾಗ ಮೇನಲ್ಲಿ ಎಲೆಕ್ಟ್ರಾನಿಕ್‌ ಸಿಟಿ(electronic city)ಯ ಹುಸ್ಕೂರ್‌ ಗೇಟ್‌ ಸಮೀಪ ಹೋಟೆಲ್‌ನಲ್ಲಿ ಸಂತ್ರಸ್ತನನ್ನು ಮಹಿಳೆ ಕರೆಸಿಕೊಂಡಿದ್ದಳು. ಬಳಿಕ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸುವಂತೆ ಪ್ರಚೋದಿಸಿದ್ದಳು. ಇದಾದ ಎರಡ್ಮೂರು ಬಾರಿ ಮತ್ತೆ ಅದೇ ಹೋಟೆಲ್‌ನಲ್ಲಿ ಇಬ್ಬರು ಭೇಟಿಯಾಗಿದ್ದರು. ಆಗ ಗೌಪ್ಯವಾಗಿ ಸಂತ್ರಸ್ತನ ನಗ್ನ ಫೋಟೋ, ವಿಡಿಯೋಗಳನ್ನು ಚಿತ್ರೀಕರಿಸಿಕೊಂಡಿದ್ದಳು.

ಹೀಗಿರುವಾಗ ಸಂತ್ರಸ್ತನಿಗೆ ತನ್ನ ಸೋದರಿ ಎಂದು ಮತ್ತೊಬ್ಬ ಮಹಿಳೆಯನ್ನು ಆರೋಪಿ ಪರಿಚಯಿಸಿದ್ದಳು. ಕೆಲ ದಿನಗಳ ಬಳಿಕ ಸಂತ್ರಸ್ತನ ಮೊಬೈಲ್‌ಗೆ ಅವರ ಬೆತ್ತಲೆ ಫೋಟೋ ಕಳುಹಿಸಿದ ಆರೋಪಿಯ ಸೋದರಿ, ಹಣ ನೀಡದಿದ್ದರೆ ಫೋಟೋ, ವಿಡಿಯೋಗಳನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರಿಗೆ ಕಳುಹಿಸುತ್ತೇವೆ ಎಂದು ಬೆದರಿಸಿದ್ದರು. ಈ ಬ್ಲ್ಯಾಕ್‌ಮೇಲ್‌ಗೆ ಹೆದರಿದ ಸಂತ್ರಸ್ತ, ಹಂತ ಹಂತವಾಗಿ .82 ಲಕ್ಷ ನೀಡಿದ್ದರು. ಈ ಹಣ ಸ್ವೀಕರಿಸಿದ ಆರೋಪಿಗಳು, ಈ ಕೃತ್ಯದ ಬಗ್ಗೆ ಯಾರಿಗಾದರೂ ಹೇಳಿದರೆ ನಿಮ್ಮ ಮಗಳ ಮೇಲೆ ಅತ್ಯಾಚಾರ ಮಾಡಿಸುತ್ತೇವೆ ಎಂದು ಬೆದರಿಸಿದ್ದರು. ಇತ್ತೀಚೆಗೆ ಮತ್ತೆ .40 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಬ್ಲ್ಯಾಕ್‌ಮೇಲ್‌ನಿಂದ ಬೇಸತ್ತ ಸಂತ್ರಸ್ತ, ಕೊನೆಗೆ ಜಯನಗರ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಅವರ ಮೊಬೈಲಿಗೆ ಯಾರೋ ಅಪರಿಚಿತರು ಕರೆ ಮಾಡಿ ಪಾರ್ಚ್‌ ಟೈಮ್‌ ಉದ್ಯೋಗ ನೀಡುವುದಾಗಿ ನಂಬಿಸಿ, ಆನ್‌ಲೈನ್‌ನಲ್ಲಿ ಟೆಲಿಗ್ರಾಮ್‌ ಆ್ಯಪ್‌ ಮೂಲಕ ಲಿಂಕ್‌ ಕಳುಹಿಸಿದ್ದರು. ಅದನ್ನು ನಂಬಿದ ಪೃಥ್ವಿರಾಜ್‌ ಆ.8 ಮತ್ತು 10ರಂದು ಒಟ್ಟು 2,70,999 ರು.ಗಳನ್ನು ಆನ್‌ಲೈನ್‌ ಮುಖೇನ ಪಾವತಿಸಿದ್ದರು. ಇದೀಗ ತನಗೆ ಉದ್ಯೋಗ ನೀಡದೆ, ಪಡೆದ ಹಣವನ್ನು ವಾಪಸು ನೀಡದೇ ಮೋಸ ಮಾಡಿದ್ದಾರೆ ಎಂದವರು ನೀಡಿದ ದೂರಿನಂತೆ ಉಡುಪಿ ಸೆನ್‌ ಅಪರಾಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Honeytrap on the pretense of getting help for cancer