ಶೃಂಗೇರಿ; ಭಗವಂತ ಎಲ್ಲಾ ಕಡೆ ಇದ್ದಾನೆ.ಭಕ್ತರು ಶ್ರದ್ಧಾಭಕ್ತಿಯಿಂದ ದೇವರನ್ನು ಪ್ರಾರ್ಥಿಸಿದ್ದರೆ ಸಾಕು ತನ್ನ ವಿಶೇಷ ಚೈತನ್ಯದ ಅಸ್ತಿತ್ವವನ್ನು ಪ್ರಕಟಿಸುತ್ತಾನೆ ಎಂದು ಜಗದ್ಗುರು ಶ್ರೀವಿಧುಶೇಖರಭಾರತೀಸ್ವಾಮೀಜಿ ತಿಳಿಸಿದರು.

ಅವರು ತಾಲೂಕಿನ ಮಲ್ನಾಡು ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯದ ಮಹಾಕುಂಭಾಭಿಷೇಕ ಹಾಗೂ ಪುನರ್ ಪ್ರತಿಷ್ಠೆ ನೆರವೇರಿಸಿ ಮಾತನಾಡಿ ಭಗವಂತನನ್ನು ನಾವು ಪರಿಶುದ್ಧವಾದ ಮನಸ್ಸಿನಿಂದ ಪ್ರಾರ್ಥಿಸಬೇಕು.ಆಗ ಮಾತ್ರ ಅಂತಹ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ.ನಮ್ಮ ದೇಶದ ಪಾರಂಪಾರಿಕ ಮೌಲ್ಯಗಳಿಗೆ ಆದ್ಯತೆ ನೀಡಿದ ಋಷಿಮುನಿಗಳು ಭಗವತ್ ಆರಾಧನೆಯನ್ನು ಶ್ರದ್ದೆಯಿಂದ ಮಾಡಿದರು.ಭಗವಮತನನ್ನು ನಾವು ಮಾನಸಿಕವಾಗಿ ಕೂಡಾ ಪ್ರಾರ್ಥನೆ ಮಾಡಬಹುದು ಎಂದರು

.ಆಗ ನಮ್ಮ ಮನಸ್ಸು ಭಗವಂತನಲ್ಲಿ ಐಕ್ಯವಾಗಬೇಕು.ಧ್ಯಾನಸ್ಥರಾಗಿ ಮಾನಸಿಕವಾಗಿ ಭಗವಂತನನ್ನು ಆರ್ಚಿಸಿದಾಗ ಮಾತ್ರ ನಮಗೆ ಆಧ್ಯಾತ್ಮಿಕ ಶ್ರೇಯಸ್ಸು ಲಭಿಸಲು ಸಾಧ್ಯ.ಶಿವನ ನಾಮಸ್ಮರಣೆಯನ್ನು ಸರಳವಾಗಿ ಮಾಡಿದ್ದರೂ ಕೂಡಾ ಆತನು ಬಲುಬೇಗ ಒಲಿಯುತ್ತಾನೆ.ತೋರಿಕೆಯ ಭಕ್ತಿ ಸಲ್ಲದು.ಶ್ರದ್ಧೆ ಎಂಬುದು ನಮ್ಮಲ್ಲಿದ್ದಾಗ ದೇವರು ಸದಾ ನಮ್ಮ ಜೊತೆಗಿರುತ್ತಾನೆ ಎಂದರು.

ಧ್ಯಾನ ಮಾಡಲು ಮನಸ್ಸು ಮುಖ್ಯ.ಮನಸ್ಸು ಹಾಗೂ ಬುದ್ಧಿಯಿಂದ ಪರಿಜ್ಞಾನ ಲಭ್ಯವಾಗುತ್ತದೆ.ಶಿವನನ್ನು ಆನೇಕ ಹೆಸರುಗಳಿಂದ ಕರೆಯಲಾಗುತ್ತದೆ,ಶಿವ,ರುದ್ರ,ಮಹೇಶ್ವರ ಹೀಗೆ ಎಂಟು ನಾಮಾವಳಿಗಳನ್ನು ಭಕ್ತಿಯಿಂದ ಹೇಳಿದಾಗ ಮಾತ್ರ ಶಿವ ಒಲಿಯುತ್ತಾನೆ.ವೇದ,ಪುರಾಣಗಳು,ಶಾಸ್ತ್ರಗಳಲ್ಲಿಯೂ ಭಗವಂತನ ಆರಾಧನೆ ಕುರಿತು ಸಾಕಷ್ಟು ಉಲ್ಲೇಖಗಳಿವೆ.ಒಂದು ಕ್ಷಣ ದೇವರ ಮುಂದೆ ಶ್ರದ್ಧಾಭಕ್ತಿಯಿಂದ ನಿಂತರೆ ಸಾಕು ಆತನು ಭಕ್ತರ ಅಭೀಷ್ಟೆಗಳನ್ನು ಅರಿತುಕೊಳ್ಳುತ್ತಾನೆ ಎಂದರು.

Jagadguru Srividhusekharabharat Swamiji performed the re-consecration of Sri Mallikarjunaswamy Temple.