ಚಿಕ್ಕಮಗಳೂರು: ನಗರದ ತಮಿಳು ಕಾಲೋನಿಯ (ಸಂತೆ ಮೈದಾನ) ಶ್ರೀ ಕರುಮಾರಿಯಮ್ಮ ದೇವಾಲಯದಲ್ಲಿ ಮೇ.೧ ರಿಂದ ೫ರವರೆಗೆ ಕರಗ ಮಹೋತ್ಸವ ಜರುಗಲಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಬಿ.ಮುನಿ ತಿಳಿಸಿದ್ದಾರೆ.

ಮೇ.೦೧ರಂದು ಬೆಳಿಗ್ಗೆ ೬.೩೦ಕ್ಕೆ ಅಮ್ಮನವರಿಗೆ ವಿಶೇಷ ಪೂಜೆ ಮತ್ತು ಧ್ವಜಸ್ಥಂಭ ಕಂಕಣಧಾರಣೆ ನಡೆಯಲಿದೆ ಮೇ.೦೨ರಂದು ಬೆಳಿಗ್ಗೆ ಗಣಪತಿ ಹೋಮ ಮತ್ತು ನವಗ್ರಹ ಹೋಮ ಜರುಗಲಿದ್ದು ನಂತರ ೮.೩೦ಕ್ಕೆ ಬಸವನಹಳ್ಳಿ ಶ್ರೀಶಾರದಾಂಬೆಯ ದೇವಸ್ಥಾನದ ಆವರಣದಿಂದ ಹಾಲಿನ ಕಳಸದ ಮೆರವಣಿಗೆ ನಡೆಯಲಿದ್ದು ೧೨ ಗಂಟೆಗೆ ಪ್ರಸಾದ ವಿನಿಯೋಗ ನಡೆಯಲಿದೆ.

ಮೇ.೦೩ರಂದು ೧೨ ಗಂಟೆಗೆ ದಂಟರಮಕ್ಕಿ ಕೆರೆಕೋಡಮ್ಮ ದೇವಸ್ಥಾನದ ಆವರಣದಿಂದ ಅಲಂಕರಿಸಿದ ಕರಗ ಮೆರವಣಿಗೆ ನಡೆಯಲಿದೆ. ಸಂಜೆ ೫ ಗಂಟೆಗೆ ದೇವಾಲಯದ ಆವರಣದಲ್ಲಿ ಸಿಡಿಮಹೋತ್ಸವ ನಡೆಯಲಿದೆ.

ಮೇ.೦೪ರಂದು ಮಧ್ಯಾಹ್ನ ೧೨ ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿದ್ದು, ಮೇ.೦೫ರಂದು ಮಧ್ಯಾಹ್ನ ೨ ಗಂಟೆಗೆ ವಾದ್ಯಗೋಷ್ಠಿಗಳೊಂದಿಗೆ ಕರಗದ ವಿಸರ್ಜನಾ ಮೆರವಣಿಗೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಎಲ್ಲಾ ಕಾರ್ಯಕ್ರಮಗಳ ನೇತೃತ್ವವನ್ನು ಉಪಾಧ್ಯಕ್ಷ ಎಸ್.ಎನ್ ಮಂಜು, ಪ್ರಧಾನ ಕಾರ್ಯದರ್ಶಿ ಆರ್.ಮಂಜು, ಖಜಾಂಚಿ ಎಂ.ಶಿವಕುಮಾರ್, ಕಾರ್ಯದರ್ಶಿ ವೇಲನ್ ವಹಿಸಲಿದ್ದಾರೆ ಎಂದು ಹೇಳಿದರು.

Karaga Mahotsava at Sri Karumariyamma Temple