ಚಿಕ್ಕಮಗಳೂರು:  ಪ್ರಜ್ವಲ್ ರೇವಣ್ಣ ಮತ್ತು ಹೆಚ್.ಡಿ ರೇವಣ್ಣ ಅವರ ಲೈಂಗಿಕ ಹಗರಣದ ಬಗ್ಗೆ ಬೇರೆಲ್ಲಾ ಮಾತನಾಡುವ ಮೊದಲು ಸಂತ್ರಸ್ಥೆಯರ ಬಳಿಗೆ ಹೋಗಿ ಸಾಂತ್ವನ ಹೇಳುವ ಮೂಲಕ ಆತ್ಮಸ್ಥೈರ್ಯ ತುಂಬಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರು ತಿರುಗೇಟು ನೀಡಿದರು.

ಕಳೆದ ಕೆಲ ದಿನಗಳಿಂದ ಚುನಾವಣಾ ಪ್ರಚಾರದಲ್ಲಿ ಮುಳುಗಿದ್ದ ಡಿ.ಕೆ ಶಿವಕುಮಾರ್ ಅವರು ವಿಶ್ರಾಂತಿ ಪಡೆಯುವ ಸಲುವಾಗಿ ಜಿಲ್ಲೆಗೆ ಆಗಮಿಸಿದ್ದ ಇಂದು ಬೆಳಿಗ್ಗೆ ನಗರದ ಐಡಿಎಸ್‌ಜಿ ಕಾಲೇಜು ಬಳಿ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಶಿವಕುಮಾರ್‌ರವರನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದರು.

ಪೆನ್‌ಡ್ರೈವ್ ಪ್ರಕರಣದ ಬಗ್ಗೆ ತಮ್ಮ ಕೈವಾಡವಿದೆ ಎಂದು ಕುಮಾರಸ್ವಾಮಿ ಆರೋಪಿಸಿರುವ ಬಗ್ಗೆ ಕೇಳಿದ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಕುಮಾರಸ್ವಾಮಿಯವರು ಏನು ಬೇಕಾದರೂ ಹೇಳುತ್ತಾರೆ, ಮೊದಲ ದಿನ ಹೇಳಿದಂತೆ ನಡೆದುಕೊಳ್ಳಲಿ ನಮ್ಮ ಕುಟುಂಬವೇ ಬೇರೆ ರೇವಣ್ಣ ಕುಟುಂಬವೇ ಬೇರೆ ಉಪ್ಪು ತಿಂದವರು ನೀರು ಕುಡಿಯಲಿ ಎಂದು ಹೇಳಿರುವ ಮಾತಿಗೆ ನಡೆದುಕೊಳ್ಳಲಿ ಎಂದು ತಿರುಗೇಟು ನೀಡಿದರು.

ಎಸ್‌ಐಟಿ ತನಿಖೆ ಬಗ್ಗೆ ಸಿದ್ದರಾಮಯ್ಯ ತನಿಖಾ ತಂಡ, ಸುರ್ಜೇವಾಲ ತನಿಖಾ ತಂಡ, ಶಿವಕುಮಾರ್ ತನಿಖಾ ತಂಡ ಎಂದು ಏನೇನೋ ಹೇಳುತ್ತಿದ್ದಾರೆ. ಆದರೆ ಬಿಜೆಪಿಯವರ ಜೊತೆ ಸೇರಿ ಕುಮಾರಸ್ವಾಮಿಯವರೇ ರಚಿಸಿರುವ ಸಿನಿಮಾ ಇದು ಕಥಾನಾಯಕ, ನಿರ್ದೇಶಕ, ನಿರ್ಮಾಣವು ಅವರದೇ ಎಂದು ವ್ಯಂಗ್ಯವಾಡಿದರು.

ತಮ್ಮ ವಿರುದ್ಧ ಪ್ರತಿಭಟನೆಗೆ ಕರೆ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು ನನ್ನ ಹೆಸರು ಹೇಳದಿದ್ದರೆ ಕುಮಾರಸ್ವಾಮಿಗೆ ಮಾರ್ಕೆಟ್ ಇಲ, ಊಟವೂ ಸೇರುವುದಿಲ್ಲ, ನಿದ್ದೆಯೂ ಬರುವುದಿಲ್ಲ ಪ್ರತಿಭಟನೆ ಅಥವಾ ಬೇರೆ ಏನಾದರೂ ಮಾಡಿಕೊಳ್ಳಲಿ ಎಂದು ಲೇವಡಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕರಾದ ಹೆಚ್.ಡಿ ತಮ್ಮಯ್ಯ, ಟಿ.ಡಿ ರಾಜೇಗೌಡ, ನಯನ ಮೋಟಮ್ಮ, ಕಾಂಗ್ರೆಸ್ ಮುಖಂಡರಾದ ಡಾ|| ಡಿ.ಎಲ್ ವಿಜಯಕುಮಾರ್, ಗಾಯಿತ್ರಿ ಶಾಂತೇಗೌಡ, ಎಂ.ಎಲ್ ಮೂರ್ತಿ, ಕೆ.ಎಸ್ ಶಾಂತೇಗೌಡ ಮತ್ತಿತರರಿದ್ದರು.

Let’s console the affected women first DK responded to HDK’s statement