ಚಿಕ್ಕಮಗಳೂರು: ಶಿಥಿಲಾವಸ್ಥೆಯಿಂದ ಕೂಡಿರುವ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಕಟ್ಟಡವನ್ನು ನೂತನವಾಗಿ ನಿರ್ಮಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು ಎಂ ದು ಬಹುಜನ ಸಮಾಜ ಪಕ್ಷವು ಬುಧವಾರ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.

ಈ ಕುರಿತು ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ನಗರದ ಪೊಲೀಸ್ ಲೇಔಟ್ ಸಮೀಪದ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಕಟ್ಟಡ ಹಾಗೂ ಮೂಲ ಸೌಕರ್ಯಗಳ ಕೊರತೆಯಿಂದ ಮಕ್ಕ ಳು ನಲುಗುತ್ತಿರುವ ಪರಿಣಾಮ ವಿದ್ಯಾರ್ಜನೆಗೆ ತೀವ್ರ ಹಿನ್ನೆಡೆಯಾಗುತ್ತಿದೆ ಎಂದು ಹೇಳಿದರು.

ಪ್ರಸ್ತುತ ಶಾಲೆಯ ಕಟ್ಟಡವು ಕಾಫಿ ಕ್ಯೂರಿಂಗ್‌ನಲ್ಲಿ ಎಸಿ ಸೀಟ್‌ನಿಂದ ರೂಫಿಂಗ್ ಮಾಡಲ್ಪಟ್ಟ ಜಾಗ ದಲ್ಲಿ ನಡೆಯುತ್ತಿದೆ. ಇದರ ಪಕ್ಕದಲ್ಲೇ ಕಾಫಿ ಕ್ಯೂರಿಂಗ್ ಹಾಗೂ ಹಿಂಬದಿ ಸಿಮೆಂಟ್ ಮೌಲ್ಡ್ ಇಟ್ಟಿಗೆ ಫ್ಯಾಕ್ಟ ರಿಗಳ ಕೆಲಸಗಳು ನಡೆಯುತ್ತಿರುವ ಕಾರಣ ಅತಿಯಾದ ದೂಳು ಎರಡು ಕಡೆಯಿಂದ ವಸತಿ ಶಾಲೆಗೆ ಆವರಿ ಸಿಕೊಳ್ಳುತ್ತಿದೆ ಎಂದು ತಿಳಿಸಿದರು.

ವಸತಿ ಶಾಲೆಯ ಕಟ್ಟಡವು ತೀವ್ರ ಶಿಥಿಲಾವಸ್ಥೆಯಿರುವ ಕಾರಣ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾ ಗಿದೆ. ಇಲಾಖೆಯ ನಿರ್ಲಕ್ಷ್ಯತನದಿಂದ ಮಕ್ಕಳು ಪ್ರತಿನಿತ್ಯ ಸ್ನಾನ ಹಾಗೂ ಪರಿಸರವಿಲ್ಲದೇ ನಲುಗಿ ಹೋಗು ತ್ತಿರುವ ಜೊತೆಗೆ ಉತ್ತಮವಾಗಿ ಅಭ್ಯಾಸಿಸಬೇಕಾದ ಮಕ್ಕಳು ಕ್ಲೀಷ್ಟೆಗೆ ಒಳಗಾಗುತ್ತಿದೆ. ಅಲ್ಲದೇ ಕಟ್ಟಡಕ್ಕೆ ಎರ ಡು ಲಕ್ಷ ರೂ. ಬಾಡಿಗೆ ನೀಡುತ್ತಿರುವುದು ಕಂಡುಬಂದಿದೆ ಎಂದರು.

ಹೀಗಾಗಿ ಮಕ್ಕಳ ಹಿತದೃಷ್ಟಿಯಿಂದ ಜಿಲ್ಲಾಡಳಿತವು ಖುದ್ದು ಸ್ಥಳ ಪರಿಶೀಲನೆ ನಡೆಸಿ ನೂತನ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಸದ್ಯಕ್ಕೆ ಸುಸಜ್ಜಿತವಾದ ಕಟ್ಟಡಕ್ಕೆ ವಸತಿ ಶಾಲೆಯನ್ನು ವರ್ಗಾಯಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ, ತಾಲ್ಲೂಕು ಅಧ್ಯಕ್ಷ ಹೆಚ್.ಕುಮಾರ್, ಉಪಾಧ್ಯಕ್ಷೆ ಕೆ.ಎಸ್.ಮಂಜುಳಾ, ಪ್ರಧಾನ ಕಾರ್ಯದರ್ಶಿ ಆರ್.ವಸಂತ್, ಮುಖಂಡರುಗಳಾದ ಗಂಗಾ ಧರ್ ಮತ್ತಿತರರು ಹಾಜರಿದ್ದರು.

Forced the district administration to build a new Ambedkar hostel