ಚಿಕ್ಕಮಗಳೂರು:  ಪ್ರಧಾನಿ ನರೇಂದ್ರ ಮೋದಿಯವರು ಗುಣಮಟ್ಟ ಮತ್ತು ಅವಕಾಶಗಳಿಗೆ ಒತ್ತು ನೀಡುವ ಬಿಜೆಪಿ ಸಂಕಲ್ಪ ಪತ್ರವನ್ನು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಜನ್ಮ ದಿನದಂದು ಬಿಡುಗಡೆ ಮಾಡಿದ್ದು, ಇದು ನಾರಿ ಶಕ್ತಿ, ಯುವ ಶಕ್ತಿ, ರೈತ ಶಕ್ತಿ ಹೆಚ್ಚಿಸುವ ಪ್ರಣಾಳಿಕೆಯಾಗಿದೆ ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ ಪ್ರಾಣೇಶ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಸಮಗ್ರ ಭಾರತದ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಬಿಡುಗಡೆ ಮಾಡಿರುವ ಪ್ರಣಾಳಿಕೆ ದೇಶದ ಜನರಲ್ಲಿ ಭರವಸೆಯ ಬೆಳಕು ಮೂಡಿಸಲಿದ್ದು, ದೇಶದ ಭವಿಷ್ಯದ ದೃಷ್ಠಿಯಿಂದ ೨೦೪೭ರ ಹೊತ್ತಿಗೆ ಭಾರತವನ್ನು ಆರ್ಥಿಕವಾಗಿ ಸದೃಢವಾಗಿಸಿ ವಿಶ್ವದಲ್ಲೇ ಪ್ರಥಮ ಸ್ಥಾನಕ್ಕೆ ತರಲು ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು.

ಕಳೆದ ಹತ್ತು ವ?ಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅನು?ನಕ್ಕೆ ತಂದ ದೇಶ ಮತ್ತು ಜನಪರವಾದ ಕಾರ್ಯಕ್ರಮಗಳು ಅನುಷ್ಠಾನಗೊಂಡ ಪರಿಣಾಮ ಅರ್ಥ ವ್ಯವಸ್ಥೆಯಲ್ಲಿ ವಿಶ್ವದ ಐದನೇ ಸ್ಥಾನಕ್ಕೆ ಬರುವಂತಾಯಿತು. ಈಗ ಪ್ರಕಟಿಸಿರುವ ಸಂಕಲ್ಪ ಪತ್ರ ವಿಶ್ವ ಮಟ್ಟದಲ್ಲಿ ಭಾರತ ಅಗ್ರಸ್ಥಾನಕ್ಕೆ ಬರುವುದರಲ್ಲಿ ಸಂದೇಹ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾರಿ ಶಕ್ತಿ, ಯುವಶಕ್ತಿ, ಬಸವರು ಮತ್ತು ರೈತರ ಶಕ್ತಿ ಹೆಚ್ಚಿಸುವ ಮತ್ತು ಗುಣಮಟ್ಟ, ಅವಕಾಶಗಳಿಗೆ ಒತ್ತು ನೀಡುವ ಈ ನಮ್ಮ ಪಕ್ಷದ ಪಣಾಳಿಕೆ ಸರ್ವ ಸ್ಪರ್ಶಿಯಾಗಿದೆ. ಜೊತೆಗೆ ಸಂವಿಧಾನ ರಕ್ಷಣೆಯ ಹೊಣೆ ಮತ್ತು ಮೋದಿ ಗ್ಯಾರಂಟಿ ಪ್ರಣಾಳಿಕೆಯ ಪ್ರಮುಖ ಭರವಸೆಗಳಾಗಿವೆ ಎಂದರು.

ಕೌಶಲ್ಯ ತರಬೇತಿ ಮೂಲಕ ೩ ಕೋಟಿ ಮಹಿಳೆಯರಿಗೆ ಲಕ್‌ಪತಿ ದೀದಿ ಯೋಜನೆ ಜಾರಿಯೊಂದಿಗೆ ಸಬಲೀಕರಣಗೊಳಿಸುವುದು, ಒಂದು ರಾ? ಒಂದು ಚುನಾವಣೆ ಕಾರ್ಯಕ್ರಮ, ದೇಶದ ಪ್ರತಿ ಮನೆಗೆ ಅಡುಗೆ ಅನಿಲವನ್ನು ಪೈಪ್ ಲೈನ್ ಮೂಲಕ ವಿತರಣೆ ಮಾಡುವುದು, ಮುದ್ರಾ ಯೋಜನೆ ಅಡಿ ಈ ಹಿಂದೆ ನೀಡುತ್ತಿದ್ದ ಸಾಲದ ಮೊತ್ತ ೧೦ ಲಕ್ಷ ರೂಗಳಿಂದ ೨೦ ಲಕ್ಷ ರೂ ಗಳಿಗೆ ಹೆಚ್ಚಿಸುವುದು, ೨೦೧೮ರಲ್ಲಿ ಜಾರಿಗೆ ತಂದಿರುವ ಕಿಸಾನ್ ಸಮ್ಮಾನ್ ನಿಧಿಯನ್ನು ದೇಶದ ೧೦ ಕೋಟಿ ರೈತರಿಗೆ ಮುಂದುವರೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಜನೌ?ಧ ಕೇಂದ್ರದ ಶಾಖೆಗಳನ್ನು ದೇಶದ ವಿವಿಧ ಕಡೆಗಳಲ್ಲಿ ವಿಸ್ತರಿಸುವುದು, ಆಯು?ನ್ ಯೋಜನೆ ಅಡಿ ೭೦ ವ? ಮೇಲ್ಪಟ್ಟವರಿಗೂ ಸೌಲಭ್ಯ ದೊರೆಯುವಂತೆ ಮಾಡುವುದು, ದೇಶದ ವಿವಿಧ ಕಡೆಗಳಲ್ಲಿ ಬುಲೆಟ್ ಟ್ರೈನ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಓಡಿಸಲು ಯೋಜನೆ ರೂಪಿಸುವುದು, ಮಹಿಳಾ ಕ್ರೀಡಾಪಟುಗಳಿಗೆ ವಿಶೇ?ವಾದ ಸವಲತ್ತುಗಳನ್ನು ನೀಡುವುದು, ಸೂರ್ಯಘರ್ ಯೋಜನೆಯಡಿ ದೇಶದ ಜನರಿಗೆ ಉಚಿತವಾಗಿ ವಿದ್ಯುತ್ ವಿತರಣೆ, ೫ಜಿ ನೆಟ್ವರ್ಕ್ ಎಲ್ಲಾ ಕಡೆಗಳಲ್ಲಿ ದೊರೆಯುವಂತೆ ಮಾಡುವುದು ಜನರಲ್ಲಿ ಭರವಸೆ ಮೂಡಿಸಲಿದೆ ಎಂದು ತಿಳಿಸಿದರು.

ರಾಮಮಂದಿರ ನಿರ್ಮಾಣದ ಹಿನ್ನೆಲೆಯಲ್ಲಿ ಪ್ರಪಂಚದಾದ್ಯಂತ ರಾಮಾಯಣ ಹಬ್ಬ ಆಚರಣೆಗೆ ಯೋಜನೆ, ಉಚಿತ ಪಡಿತರ ಯೋಜನೆಯನ್ನು ಮುಂದಿನ ಐದು ವ?ಗಳಿಗೆ ವಿಸ್ತರಿಸುವುದು, ವಂದೇ ಭಾರತ್ ರೈಲ್ವೆ ವ್ಯವಸ್ಥೆಯನ್ನು ದೇಶದ ಮೂಲೆ ಮೂಲೆಗೆ ವಿಸ್ತರಿಸುವ ಉದ್ದೇಶವನ್ನು ಸಂಕಲ್ಪ ಪತ್ರ ಒಳಗೊಂಡಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್ ದೇವರಾಜ್‌ಶೆಟ್ಟಿ, ಮಾಧ್ಯಮ ಪ್ರಮುಖ್ ಮಧುಕುಮಾರ್ ರಾಜ್ ಅರಸ್, ಪ್ರಚಾರ ಸಮಿತಿ ಅಧ್ಯಕ್ಷ ಕೋಟೆ ರಂಗನಾಥ್, ಜಿಲ್ಲಾ ಬಿಜೆಪಿ ವಕ್ತಾರ ಹೆಚ್.ಎಸ್ ಪುಟ್ಟಸ್ವಾಮಿ ಇದ್ದರು.

Manifesto to increase women power youth power farmer power