ಚಿಕ್ಕಮಗಳೂರು: ತಾಲೂಕು ಮಲ್ಲೇನಹಳ್ಳಿ ಕುಮಾರಗಿರಿ ಶ್ರೀ ಸುಬ್ರಮಣ್ಯಸ್ವಾಮಿ ದೇವಸ್ಥಾನದಲ್ಲಿ ಮಾರ್ಚ್ ೨೩ ರಿಂದ ೨೫ರವರೆಗೆ ಪಂಗುನಿಲುತ್ತಿರ ಜಾತ್ರೆ ಹಾಗೂ ಸರಳ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ ಎಂದು ದೇವಸ್ಥಾನ ಧರ್ಮದರ್ಶಿ ಮಂಡಳಿ ಪ್ರಧಾನ ಕಾರ್ಯದರ್ಶಿ ಎಸ್.ವಿಜಯಕುಮಾರ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿ ಮಾರ್ಚ್ ೨೩ರಂದು ಶನಿವಾರ ಬೆಳಗ್ಗೆ ಅಭಿ?ಕ, ಅಲಂಕಾರ, ಧ್ವಜಾರೋಹಣ ಹಾಗೂ ಕಂಕಣ ಧಾರಣೆ ನಡೆಯಲಿದೆ ಎಂದು ಹೇಳಿದರು.

ಮಾರ್ಚ್ ೨೪ ರಂದು ಭಾನುವಾರ ಬೆಳಗ್ಗೆ ೯ ಗಂಟೆಯಿಂದ ಶ್ರೀ ಅವರಿಗೆ ಅಭಿ?ಕ, ಅಲಂಕಾರ ೧೦.೩೦ ಕ್ಕೆ ಶ್ರೀಸ್ವಾಮಿಯವರ ಉತ್ಸವಮೂರ್ತಿ ಮೆರವಣಿಗೆ ದೇವಾಲಯದಿಂದ ಹೊರಟು ಮಲ್ಲೇನಹಳ್ಳಿ, ಬಾವಿಕಟ್ಟೆ, ಹೆಬ್ಬಳ್ಳಿ, ಮಾವಿನಹಳ್ಳ, ಅರಿಶಿಣಗುಪ್ಪೆ, ದಾಸರಹಳ್ಳಿ, ಕೈಮರದಿಂದ ಅತ್ತಿಗಿರಿ ತಲುಪಿ ಪುನಃ ಕಂಬಿಹಳ್ಳಿ ಶಾಂತಿಪುರ, ಕಬ್ಬಿಣಸೇತುವೆ, ಹೊಸಪೇಟೆ, ಗುಡ್ಡೇನಹಳ್ಳಿ, ಅರವಿಂದನಗರ, ನೀರುಗಂಡಿ, ಎಮ್ಮೆಖಾನೆ, ಭಕ್ತರಹಳ್ಳಿ ಮೂಲಕ ಸ್ವಾಮಿಯ ಸನ್ನಿಧಿ ತಲುಪಲಿದೆ ಎಂದರು.

ಮಾರ್ಚ್ ೨೫ರಂದು ಸೋಮವಾರ ಪಂಗುನಿಲುತ್ತಿರ ಜಾತ್ರೆ ಕಾವಡಿ ಸಮರ್ಪಣೆ. ಶ್ರೀ ಸುಬ್ರಮಣ್ಯ ಸ್ವಾಮಿ ಹಾಗೂ ವಳ್ಳಿ ದೇವಾನೆರವರ ಕಲ್ಯಾಣೋತ್ಸವ ಮತ್ತು ಸರಳ ಸಾಮೂಹಿಕ ವಿವಾಹವನ್ನು ಹಿರೇಮಗಳೂರು ಕಣ್ಣನ್ ಮತ್ತು ತಂಡ ನಡೆಸಿಕೊಡಲಿದೆ ಈಗಾಗಲೇ ೬ ಜೋಡಿಗಳು ಹೆಸರು ನೋಂದಾಯಿಸಿದ್ದು ಇನ್ನು ಆರು ಜೋಡಿಗಳು ನೋಂದಾಯಿಸಿಕೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಮಧ್ಯಾನ ೧೨ ಗಂಟೆಗೆ ಸುಮಾರು ೧೨ ಸಾವಿರ ಜನರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಅನ್ನದಾನಕ್ಕೆ ದಾನ ನೀಡುವ ಭಕ್ತಾದಿಗಳು ಅಕ್ಕಿ, ಬಿಳಿ ಬೆಲ್ಲ, ಬೇಳೆ, ಎಣ್ಣೆ, ತರಕಾರಿ ಹಾಗೂ ಧನ-ಧಾನ್ಯಗಳನ್ನು ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಅವರ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.

ಸರಳ ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವ ವರನಿಗೆ ೨೧ ವ? ವಧುವಿಗೆ ೧೮ ವ? ಕಡ್ಡಾಯ ನಾಲ್ಕು ಭಾವಚಿತ್ರ, ವಿಳಾಸ ದೃಢೀಕರಣ ಪತ್ರದ ದಾಖಲಾತಿಗಳೊಂದಿಗೆ ೧೫ ದಿನಗಳ ಮುಂಚೆ ಹೆಸರು ನೊಂದಾಯಿಸಿಕೊಳ್ಳಬಹುದಾಗಿದ್ದು ವಧು ವರರ ಸಂಪ್ರದಾಯಕ್ಕೆ ತಕ್ಕಂತೆ ತಾಳಿ ಮಾಡಿಸಿಕೊಡಲಾಗುವುದು ಎಂದು ಹೇಳಿದರು. ೯೪೪೮೧೩೩೮೩೮, ೭೮೯೨೨೩೦೨೨೬, ೯೪೪೯೫೧೫೨೩೮ ಈ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಗುಣಶೇಖರ್ ಉಪಾಧ್ಯಕ್ಷ ಎ. ಮಹಾಲಿಂಗಂ, ಖಜಾಂಚಿ ಕೆ. ಕೃ?ರಾಜ್ ನಿರ್ದೇಶಕರುಗಳಾದ ಗೋಪಾಲ್, ವೆಂಕಟೇಶ್, ಪುವೆಂದಿರನ್, ಅಣ್ಣಾವೇಲು .ಎಸ್ ಮತ್ತಿತರರಿದ್ದರು

March 23 to 25 Pangunilam Jatra at Kumaragiri Temple