ಚಿಕ್ಕಮಗಳೂರು: ತಾಲೂಕು ಜಾಗರ ಹೋಬಳಿ ಕನ್ನಡ ಸಾಹಿತ್ಯ ಪರಿ?ತ್ ವತಿಯಿಂದ ಗಾಳಿಗುಡ್ಡೆ ಗ್ರಾಮದಲ್ಲಿ ಫೆ.೨೯ ರಂದು ಗುರುವಾರ ಡಾ. ಪುನೀತ್‌ರಾಜ್‌ಕುಮಾರ್ ಪುತ್ಥಳಿ ಲೋಕಾರ್ಪಣೆ ಮಾಡಲಾಗುವುದೆಂದು ಕಸಾಪ ಹೋಬಳಿ ಅಧ್ಯಕ್ಷ ವಾಸುಪೂಜಾರಿ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಕೆಳಚಂದ್ರ ಗ್ರೂಪ್ ಆಫ್ ಎಸ್ಟೇಟ್ ಗರಿಗೆಖಾನ್ ಪುನೀತ್‌ರಾಜ್‌ಕುಮಾರ್ ಅಭಿಮಾನಿ ಬಳಗ ಗಾಳಿಗುಡ್ಡೆ ಗ್ರಾಮಸ್ಥರು ಮತ್ತು ದಾನಿಗಳ ನೆರವಿನಿಂದ ಪುತ್ಥಳಿಯನ್ನು ಪ್ರತಿ?ಪಿಸಿದ್ದು, ಅಂದು ಸಂಜೆ ೪ ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಪ್ರತಿಮೆಯನ್ನು ಮಾಡಲಿದ್ದಾರೆ ಎಂದರು.

ಸಮಾರಂಭ ಗಾಳಿಗುಡ್ಡೆ ಗ್ರಾಮದ ಸರ್ಕಾರಿ ಪಾಠಶಾಲಾ ಅವರಣದ ಭಗತ್‌ಸಿಂಗ್ ಬಯಲು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದು ಶಾಸಕರುಗಳಾದ ಟಿ.ಡಿ ರಾಜೇಗೌಡ, ಎಚ್.ಡಿ ತಮ್ಮಯ್ಯ, ಎಸ್.ಎಲ್ ಭೋಜೇಗೌಡ, ಮಾಜಿ ಶಾಸಕ ಸಿ.ಟಿ ರವಿ, ಕಸಾಪ ಜಿಲ್ಲಾಧ್ಯಕ್ಷ ಸೂರಿಶ್ರೀನಿವಾಸ್, ತಾಲೂಕು ಅಧ್ಯಕ್ಷ ಸೋಮಶೇಖರ್, ಎಸ್.ವೆಂಕಟೇಶ್, ಜಿ.ಬಿ ಪವನ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಈ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಿಕಟ ಪೂರ್ವ ಅಧ್ಯಕ್ಷ ಕೆ.ವಿ ರವಿಕುಮಾರ್, ಲಕ್ಷ್ಮಣ್, ಶಂಕರ್ ಇದ್ದರು.

Puneeth Putthali Lokarpana at Ghadgudda on Feb. 29