ಚಿಕ್ಕಮಗಳೂರು : ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರೋಧಿಸಿ ನಡೆದ ಚಳುವಳಿ ವೇಳೆ ಮೃತಪಟ್ಟ ರೈತರಿಗೆ ಜಿಲ್ಲಾ ಕಿಸಾನ್ ಕಾಂಗ್ರೆಸ್  ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಶ್ರದ್ದಾಂಜಲಿ ಸಲ್ಲಿಸಿದರು.

ಆಜಾದ್ ಪಾರ್ಕ್ ವೃತ್ತದ ಬಳಿ ಸಂಜೆ ಜಮಾವಣೆಗೊಂಡ ಮುಖಂಡರು ಮತ್ತು ಕಾರ್ಯಕರ್ತರು ಸಾಮೂಹಿಕವಾಗಿ ಮೇಣದ ಬತ್ತಿ ಬೆಳಗಿಸುವುದರ ಜೊತೆಗೆ  ಮೃತ ರೈತರ ಆತ್ಮಕ್ಕೆ ಶಾಂತಿಕೋರಿ ಒಂದು ನಿಮಿಷ ಮೌನಾಚರಣೆ ಮಾಡಿದರು.

ಈ ವೇಳೆ ಮಾತನಾಡಿದ ಕಿಸಾನ್ ಕಾಂಗ್ರೆಸ್ ಕಿಸಾನ್‍ ಘಟಕದ ಜಿಲ್ಲಾಧ್ಯಕ್ಷ ಅರೇನಳ್ಳಿ ಪ್ರಕಾಶ್ ಚಳುವಳಿ ವೇಳೆ ೭೦೦ ರೈತರು ಹುತಾತ್ಮರಾಗಿದ್ದು, ಅದರ ನೈತಿಕ ಹೊಣೆಯನ್ನು ಹೊತ್ತು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ಕಿಸಾನ್ ಸೆಲ್ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್ ಮಾತನಾಡಿ ಚಳುವಳಿ ನಿರತ ರೈತರ ಸಾವಿಗೆ ಬಿಜೆಪಿ ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದರು. ಕಿಸಾನ್ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ರಸೂಲ್ ಖಾನ್, ಮುಖಂಡರಾದ ಜೆ.ವಿನಾಯಕ, ಅಮೀರ್, ವಿನಯ್ ಕೋಟೆ, ಬಲರಾಮ್, ಅಭಿಷೇಕ್, ಲೋಹಿತ್, ಅಶೋಕ್, ಗುರುಮೂರ್ತಿ, ರಾಹೀಲ್ ಷರೀಫ್ ಪಾಲ್ಗೊಂಡಿದ್ದರು.

3 lakh compensation: ದೆಹಲಿ ಗಡಿಗಳಲ್ಲಿ ಹುತಾತ್ಮರಾದ ರೈತರಿಗೆ ತಲಾ 3 ಲಕ್ಷ ಪರಿಹಾರ ಘೋಷಿಸಿದ ತೆಲಂಗಾಣ