ನಂದಿಬೆಟ್ಟಕ್ಕೆ ( nandibetta ) ತೆರಳುವ ಪ್ರವಾಸಿಗರಿಗೆ ಜಿಲ್ಲಾಡಳಿತ ಗುಡ್ ನ್ಯೂಸ್ ನೀಡಿದ್ದು, ನಂದಿಗಿರಿಧಾಮಕ್ಕೆ ವಿಧಿಸಿದ್ದ ಕರ್ಪ್ಯೂ ತೆರವು ಮಾಡಲಾಗಿದೆ. ಹೌದು, ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ವಿಧಿಸಿದ್ದ ವೀಕೆಂಡ್ ಕರ್ಪ್ಯೂ ತೆರವುಗೊಳಿಸಿ ಜಿಲ್ಲಾಡಳಿತ ಶನಿವಾರ ,ಮತ್ತು ಭಾನುವಾರ ಪ್ರವಾಸಿಗರಿಗೆ ಮುಕ್ತ ಅವಕಾಶ ಕಲ್ಪಿಸಿದೆ.

ಮುಂದುವರೆದು, ಆನ್ ಲೈನ್ ಹಾಗೂ ಆಫ್ ಲೈನ್ ಮೂಲಕ ಟಿಕೆಟ್ ಪಡೆದವರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಆದರೆ ವೀಕೆಂಡ್ ನಲ್ಲಿ ಒಂದು ದಿನ ಹಿಂದೆಯೇ ಟಿಕೆಟ್ ಕಾಯ್ದಿರಿಸಬೇಕು. ಶೇ 50 ರಷ್ಟು ಟಿಕೆಟ್ ಆನ್ ಲೈನ್ ಮೂಲಕ ಬುಕ್ಕಿಂಗ್ ಗೆ ಅವಕಾಶ ನೀಡಲಾಗಿದೆ. ಕೆ ಎಸ್ ಟಿಡಿಸಿ ಸಂಸ್ಥೆಯ ಅಂತರ್ಜಾಲ ಮೂಲಕ ಬುಕ್ಕಿಂಗ್ ಮಾಡಬಹುದು.

ಉಳಿದ ಶೇ. 50 ರಷ್ಟು ಟಿಕೆಟ್ ಆಫ್ ಲೈನ್ ಮೂಲಕ ವಿತರಣೆಗೆ ವ್ಯವಸ್ಥೆ ಮಾಡಬಹುದಾಗಿದೆ. ಜೊತೆಗೆ ವೀಕೆಂಡ್ ನಲ್ಲಿ 1000 ಬೈಕ್ , 300 ಲಘು ವಾಹನಗಳಾದ ಮಿನಿ ಬಸ್, ಕಾರು, ಆಟೋಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

nandibetta

ಇದನ್ನೂ ಓದಿ: ವಿಶ್ವವಿಖ್ಯಾತ ನಂದಿಬೆಟ್ಟಕ್ಕೆ ವಿಧಿಸಿದ್ದ ವೀಕೆಂಡ್ ಕರ್ಪ್ಯೂ ತೆರವು

ಇದನ್ನೂ ಓದಿ: Adi Shankaracharya: ಆದಿಶಂಕರಾಚಾರ್ಯರು ಮೂಡಿಸಿದ ಧರ್ಮಜಾಗೃತಿ ಹಿಂದೂಧರ್ಮ ಸ್ಥಿರ