ಚಿಕ್ಕಮಗಳೂರು: ದಿ ಮೋಟಾರ್ ಸ್ಪೋರ್ಟ್ಸ್ ಕ್ಲಬ್‌ಪ್ ಚಿಕ್ಕಮಗಳೂರು ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಐಎನ್‌ಟಿಎಸ್‌ಡಿಆರ್‌ಸಿ ರ್‍ಯಾಲಿಯಲ್ಲಿ ಅಜ್ಗರ್ ಅಲಿ ಹಾಗೂ ಸಹ ಚಾಲಕ ಮಹಮದ್ ಮುಸ್ತಾಫಾ ೩೬ ಸೆಕೆಂಡ್ ಪೆನಾಲ್ಟಿಯೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ದ್ವಿತೀಯ ಸ್ಥಾನವನ್ನು ಐಎನ್‌ಟಿಎಸ್‌ಡಿಆರ್‌ಸಿ /ಆರ್‌ಒಸಿ ವಿಭಾಗದಲ್ಲಿ ಸತೀಶ್‌ಗೋಪಾಲಕೃಷ್ಣನ್ ಮತ್ತು ಡೇವಿಡ್ ಜೋಡಿ ೪೧ ಸೆಕೆಂಡ್ ಪೆನಾಲ್ಟಿಯೊಂದಿಗೆ ದ್ವಿತೀಯ ಸ್ಥಾನ, ಐಎನ್‌ಟಿಎಸ್‌ಡಿಆರ್‌ಸಿ ಚಿಕ್ಕಮಗಳೂರು ವಿಭಾಗದಲ್ಲಿ ಏಮನ್ ಹಾಗೂ ಸಾಗರ್ ಜೋಡಿ ೪೪ ಸೆಕೆಂಡುಗಳ ಪೆನಾಲ್ಟಿಯೊಂದಿಗೆ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಐಎನ್‌ಟಿಎಸ್‌ಡಿಆರ್‌ಸಿ-೨: ವಿಭಾಗದಲ್ಲಿ ಮನೀಶ ಚಕ್ರವರ್ತಿ ಹಾಗೂ ಶೋಹೆಮ್‌ಪಾಲ್ ಪ್ರಥಮ, ದಿಲ್‌ನಿತ್ ಮತ್ತು ಲೋಹಿತ್, ಅಪರ್ಣಪಾಟಕ್ ಹಾಗೂ ಲಲಿತಾಗೌಡ ಪ್ರಥಮ ಮತ್ತು ದ್ವಿತೀಯ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ.

ಐಎನ್‌ಟಿಎಸ್‌ಡಿ ಆರ್‌ಸಿ ಮಹಿಳಾ ವಿಭಾಗ: ಜಸಿತ್‌ಕೌರ್ ಮತ್ತು ಜ್ಯೋತಿ ಅಯ್ಯಂಗಾರ್ ಪ್ರಥಮ, ರಿಹಾಜ ಮತ್ತು ಕಶಿಶ್ ಮಲ್ಹೋತ್ರ ಹಾಗೂ ಅಪರ್ಣಪಾಟಕ್ ಮತ್ತು ಲಲಿತಾಗೌಡ ಜೋಡಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ರನ್ನರ್ ಆಫ್ ಹೊರಹೊಮ್ಮಿದ್ದಾರೆ.

ಆರ್‌ಒಸಿ ವಿಭಾಗ: ಸತೀಶ ಗೋಪಾಲಕೃಷ್ಣ , ಡೇವಿಡ್ ಶರೂನ್ ಜೋಡಿ ಪ್ರಥಮ, ಏಮನ್ ಅಹ್ಮದ್ -ಸಾಗರ್ , ಡಾ.ಗಣೇಶ್, ಡಾ.ವಿಕ್ರಂಜೈನ್ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ರನ್ನರ್ ಅಪ್ ಆಗಿದ್ದಾರೆ.

ಕಾರ್ಪೋರೇಟ್ ವಿಭಾಗ: ಮನೀಶ್ ಚಕ್ರವರ್ತಿ ಮತ್ತು ಶೋಹೆಮ್‌ಪಾಲ್ ಪ್ರಥಮ, ದಿಲ್‌ನಿತ್ ಮತ್ತು ಲೋಹಿತ್, ಅಪರ್ಣಾಪಾಠಕ್ ಮತ್ತು ಲಲಿತಾಗೌಡ ಜೋಡಿ ಪ್ರಥಮ ಮತ್ತು ದ್ವಿತೀಯ ರನ್ನರ್ ಅಪ್ ಆಗಿದೆ.

ನಾವೀಸ್ ವಿಭಾಗ: ವಿಶ್ವಾಕ್ ಕಸ್ತೂರಿ ಮತ್ತು ವಿವೇಕ್ ತ್ರಿಪಥಿ ಪ್ರಥಮ ಸ್ಥಾನ, ಸಿರಿಲಕ್ಷ್ಮಿ ಜೋಷಿ, ಶ್ರೀದೇವಿ ಜೋಷಿ ಮತ್ತು ಸಂಪತ್‌ಗೌಡ, ವಿನಯ್ ಜೋಡಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.

ದಂಪತಿ ವಿಭಾಗ: ಶ್ರೀಲಕ್ಷ್ಮಿ ಜೋಷಿ, ಶ್ರೀದೇವಿ ಜೋಷಿ ಪ್ರಥಮ, ಭವಾನಿ, ಆನಂದ್‌ರಾಜ್ ಮತ್ತು ಶೃತಾಜಯಂತ್ ಮತ್ತು ಜಯಂತ್ ಎಂ ಜೈನ್ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.

ಚಿಕ್ಕಮಗಳೂರು ವಿಭಾಗ: ಏಮನ್ ಅಹ್ಮದ್ ಮತ್ತು ಸಾಗರ್ ಜೋಡಿ ಪ್ರಥಮ, ದಿಲ್‌ನಿತ್, ಲೋಹಿತ್ ಪ್ರಥಮ ರನ್ನರ್ ಅಪ್, ರಾಹೀಲ್‌ಮತ್ತು ಸರ್ವನಂ ಕುಮಾರ್ ದ್ವಿತೀಯ ರನ್ನರ್ ಅಪ್ ಪಡೆದುಕೊಂಡಿದ್ದಾರೆ.

ದಿಮೋಟಾರ್ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಜಯಂತ್ ಪೈ, ಕಾರ್ಯದರ್ಶಿ ಅಭಿಜಿತ ಪೈ, ಖಜಾಂಚಿ ದೀಪಕ್, ಸಮೃದ್ಧ ಪೈ ಮತ್ತಿತರರು ರ್‍ಯಾಲಿ ನೇತೃತ್ವ ವಹಿಸಿದ್ದರು.ನಗರದ ಖಾಸಗಿ ರೆಸಾರ್ಟ್ ನಲ್ಲಿ ಆರಂಭವಾದ ನಗರದ ವಿವಿಧೆಡೆ ೧೫೦ ಕಿಮೀ ಕ್ರಮಿಸಿತು,ರ್‍ಯಾಲಿ ಪ್ರಯರು ರಸ್ತೆಯ ಆಯಕಟ್ಟಿನ ಜಾಗದಲ್ಲಿ ಕುಳಿತು ಕಾರುಗಳ ರಭಸದ ಓಟವನ್ನು ವೀಕ್ಷಿಸಿದರು.

National Level INTSDRC Rally