ಚಿಕ್ಕಮಗಳೂರು: ಇತ್ತೀಚೆಗೆ ಕೇರಳ ವಯನಾಡಿನ ಸುಲ್ತಾನ್ ಬತೇರಿಯಲ್ಲಿ ಎಟಿಎಸ್ (ಭಯೋತ್ಪಾದನೆ ನಿಗ್ರಹ ದಳ)
ದಿಂದ ಬಂಧಿಸಲ್ಪಟ್ಟ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ ಅವರನ್ನು ಗುರುವಾರ ಜಿಲ್ಲೆಯ ನರಸಿಂಹರಾಜಪುರ ನ್ಯಾಯಲಯಕ್ಕೆ ಹಾಜರುಪಡಿಸಲಾಗಿದೆ.

ಮಲೆನಾಡಿನ ನಕ್ಸಲ್ ಚಟುವಟಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿ.ಜಿ.ಕೆ 2003ರಲ್ಲಿ ತಲೆಮರೆಸಿಕೊಂಡಿದ್ದರು. ಇವರ ಮೇಲೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 27ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.

ಮಲೆನಾಡಿನ ಯುವ ಪಡೆ ನಕ್ಸಲ್ ಚಟುವಟಿಕೆಯಿಂದ ದೂರ ಸರಿದ ಪರಿಣಾಮ‌ ನೆಲೆ ಕಂಡುಕೊಳ್ಳಲು ಕೇರಳದತ್ತ ಮುಖ ಮಾಡಿದ್ದ ಬಿ.ಜಿ.ಕೆ ಯನ್ನು ಕೇರಳದ ಎಟಿಎಸ್ ಪಡೆ ಸಾವಿತ್ರಿ ನಕ್ಸಲ್ ನಾಯಕಿ ಜೊತೆ ಬಂದಿಸಿದ್ದರು.

ಇವೆ ಮೇಲೆ ಜಿಲ್ಲೆಯಲ್ಲಿ ದಾಖಲಾದ ಪ್ರಕರಣಗಳ ವಿಚಾರಣೆಗಾಗಿ ಇಂದು ನರಸಿಂಹರಾಜಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Naxal leader B.G. Krishnamurthy