ಚಿಕ್ಕಮಗಳೂರು: ಕಂದಾಯ ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಗೆ ಗೈರು ಹಾಜರಾಗಿರುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್ ನೀಡುವುದಾಗಿ ಉಪವಿಭಾಧಿಕಾರಿ ಎಚ್.ಡಿ ರಾಜೇಶ್ ತಿಳಿಸಿದರು.

ಇಂದು ಇಲ್ಲಿನ ತಾಲ್ಲೂಕು ಪಂಚಾಯಿತಿಯ ಡಾ. ಬಿ.ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಏರ್ಪಡಿಸಲಾಗಿದ್ದ ಅನುಸೂಚಿತ ಜಾತಿ, ಬುಡಕಟ್ಟುಗಳ ದೌರ್ಜನ್ಯ ನಿಯಂತ್ರಣ ಕಾಯ್ದೆ ೧೯೮೯ ನಿಯಮ ೧೯೯೫ ತಿದ್ದುಪಡಿ ನಿಯಮಗಳು ೨೦೧೩ ರಂತೆ ನಿಯಮ ೧೭ಎ ಪ್ರಕಾರ ಚಿಕ್ಕಮಗಳೂರು ಕಂದಾಯ ಉಪ ವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಭೆ ಆಯೋಜಿಸಲಾಗಿತ್ತು.

ಈ ತ್ರೈಮಾಸಿಕ ಸಭೆ ತೀವ್ರ ಕಳಪೆ ಹಾಜರಾತಿ ಇರುವುದರಿಂದ ಬೇರೆ ತಾಲೂಕುಗಳ ತಹಸೀಲ್ದಾರರು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಇಓ, ವಿವಿಧ ಇಲಾಖೆ ಅಧಿಕಾರಿಗಳು ಗೈರು ಹಾಜರಾಗಿರುವುದರಿಂದ ಸಭೆಯನ್ನು ಮುಂದೂಡಿರುವುದಾಗಿ ಘೋಷಿಸಿದರು.

ಒಂದು ಬಾರಿ ಎರಡು ಬಾರಿ ತೀವ್ರ ಒತ್ತಡದ ಕೆಲಸ ಇತ್ತು ಅನ್ನುವ ಕಾರಣಕ್ಕೆ ಅಧಿಕಾರಿಗಳಿಗೆ ಸಭೆಗೆ ಗೈರು ಹಾಜರಾದರೂ ಕೇಳಿರಲಿಲ್ಲ ಆದರೆ ಇಂದಿನ ತ್ರೈಮಾಸಿಕ ಸಭೆಗೆ ಗೈರು ಹಾಜರಾಗಿರುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್ ನೀಡಲಾಗುವುದೆಂದು ಎಚ್ಚರಿಸಿದರು.

ಪದೇ ಪದೇ ಈ ರೀತಿ ಆಗಬಾರದೆಂದು ಎಚ್ಚರಿಸಿ ನೋಟೀಸ್ ಜಾರಿ ಮಾಡುತ್ತಿದ್ದೇವೆ ಇ? ಕಡಿಮೆ ಸಂಖ್ಯೆ ಇರುವ ಅಧಿಕಾರಿಗಳನ್ನು ಇಟ್ಟುಕೊಂಡು ಸಭೆ ನಡೆಸಲು ಸಾಧ್ಯವಿಲ್ಲ ಆದ್ದರಿಂದ ನೋಟೀಸ್ ನೀಡಿದ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ಶಿಸ್ತು ಕ್ರಮ ಜರುಗಿಸುವಂತೆ ಕೇಳಿಕೊಳ್ಳುತ್ತೇನೆ ಎಂದರು.

Notice to the officers who are absent from the meeting