ನವದೆಹಲಿ: ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಮತ್ತು ವಯನಾಡು ಲೋಕಸಭಾ ಕ್ಷೇತ್ರದ ಸಂಸದ ರಾಹುಲ್​ ಗಾಂಧಿ ಅವರ ಟ್ವಿಟರ್​ ಖಾತೆಯನ್ನು ಫಾಲೋ ಮಾಡುತ್ತಿರುವವರ ಸಂಖ್ಯೆ 2 ಕೋಟಿ ದಾಟಿದೆ. ಇದು ಅವರ ಖಾತೆಯನ್ನು ಬಾಹ್ಯ ಪ್ರಭಾವದಿಂದ ನಿಯಂತ್ರಿಸಲಾಗುತ್ತಿತ್ತು ಎಂಬುದನ್ನು ಈ ಏರಿಕೆ ಎತ್ತಿ ತೋರಿಸಿದೆ ಎಂದು ಎಂದು ಕಾಂಗ್ರೆಸ್​ ಹೇಳಿದೆ.

ತಮ್ಮ ಟ್ವಿಟರ್​ ಖಾತೆಯ ಮೇಲೆ ಬಾಹ್ಯ ಪ್ರಭಾವ ಮೊದಲಿನಿಂದಲೂ ಇದೆ ಎಂಬ ಶಂಕೆ ಇದೆ. ಆದರೆ, ಭಾರತದಲ್ಲಿ ಕಾರ್ಯಚಟುವಟಿಕೆ ನಡೆಸುವ ಟ್ವಿಟರ್​ ಮುಕ್ತತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಯವನ್ನು ಗೌರವಿಸುತ್ತದೆ ಎಂದು ಭಾವಿಸಿರುವೆ ಎಂದು ಟ್ವಿಟರ್​ ಸಿಇಒ ಪರಾಗ್​ ಅಗರ್​ವಾಲ್​ಗೆ ಕಳೆದ ಡಿಸೆಂಬರ್​ನಲ್ಲಿ ಬರೆದಿದ್ದ ಪತ್ರದಲ್ಲಿ ರಾಹುಲ್​ ಗಾಂಧಿ ಹೇಳಿದ್ದರು.

2021ರ ಆಗಸ್ಟ್​ನಿಂದ ತಮ್ಮ ಖಾತೆ ಮತ್ತು ಫಾಲೋವರ್​ಗಳನ್ನು ನಿಯಂತ್ರಿಸಲಾಗುತ್ತಿದೆ. ಈ ಮಧ್ಯೆ ಕೆಲವು ಕಾಲ ತಮ್ಮ ಟ್ವಿಟರ್​ ಖಾತೆಯನ್ನು ಬ್ಲಾಕ್​ ಮಾಡಲಾಗಿತ್ತು ಎಂದು ರಾಹುಲ್​ ದೂರಿನಲ್ಲಿ ಉಲ್ಲೇಖಿಸಿದ್ದರು.

ರಾಹುಲ್​ ಅವರ ದೂರಿಗೆ ಪ್ರತಿಕ್ರಿಯಿಸಿದ್ದ ಟ್ವಿಟರ್​ ವಕ್ತಾರ ತಿರುಚುವಿಕೆ ಅಥವಾ ಬಾಹ್ಯ ಪ್ರಭಾವವನ್ನು ತಮ್ಮ ಸಂಸ್ಥೆ ಸಹಿಸುವುದಿಲ್ಲ ಎಂದಿದ್ದರು.
ಈ ದೂರು ದಾಖಲಾಗುವುದಕ್ಕೂ ಮುನ್ನ ಅವರ ಟ್ವಿಟರ್​ ಖಾತೆಯ ಅನುಸರಣೆಯಲ್ಲಿ ನಿತ್ಯ ಸರಾಸರಿ 2.30 ಲಕ್ಷ ಏರಿಕೆ ಇತ್ತು. ಆದರೆ ಬಾಹ್ಯ ಪ್ರಭಾವದಿಂದ ನಿಯಂತ್ರಣಕ್ಕೆ ಒಳಪಟ್ಟ ನಂತರ ಈ ವೇಗಕ್ಕೆ ಕಡಿವಾಣ ಬಿತ್ತು. 1.96 ಲಕ್ಷಕ್ಕೆ ಬಂದನಂತರ ಫಾಲೋವರ್​ಗಳ ಏರಿಕೆ ಪ್ರಮಾಣದಲ್ಲಿ ತುಸು ತುಸುವೇ ಕಡಿಮೆಯಾಯಿತು ಎಂದು ಕಾಂಗ್ರೆಸ್​ನ ವಕ್ತಾರರಾದ ಸುಪ್ರಿಯಾ ಶ್ರೀನಿತೆ ಹೇಳಿದ್ದಾರೆ.

ಇದನ್ನೂ ಓದಿ: Chitra Ramakrishna Arrested: ಎನ್‌ಎಸ್‌ಇ ಮಾಜಿ ಎಂಡಿ ಚಿತ್ರಾ ರಾಮಕೃಷ್ಣ ಬಂಧನ

ಇದನ್ನೂ ಓದಿ : Havyaka Association of Americas : HAA ಸಮ್ಮೇಳನ : ಹವ್ಯಸಿರಿ 2022 : ಸಣ್ಣ ಕಥೆ ಸ್ಪರ್ಧೆ : ಈ ಸಣ್ಣಕಥಾ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಿ!

(Rahul Gandhi has 20 million followers on Twitter)