ಅಮೇರಿಕಾ ಹವ್ಯಕರ ಒಕ್ಕೂಟದ (HAA) 19ನೇ ಸಮ್ಮೇಳನವು ಜುಲೈ 2-3 ಕ್ಕೆ ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾದಲ್ಲಿ ಜರುಗಲಿದೆ. ಸಮ್ಮೇಳನದ ಸವಿನೆನಪಿಗಾಗಿ ಈ ಸಂದರ್ಭದಲ್ಲಿ ಸ್ಮರಣ ಸಂಚಿಕೆ – “ಹವ್ಯಸಿರಿ 2022”ಯನ್ನು ಹೊರತರಲಾಗುವುದು. ಈ ಸಂದರ್ಭದಲ್ಲಿ ವಿಶ್ವದೆಲ್ಲೆಡೆ ಇರುವ ಸೃಜನಶೀಲ ಹವ್ಯಕ ಬರಹಗಾರರಿಗಾಗಿ ಸ್ಮರಣ ಸಂಚಿಕೆ ಸಮಿತಿ “ಸಣ್ಣ ಕಥೆ ಸ್ಪರ್ಧೆ”ಯನ್ನು ಹಮ್ಮಿಕೊಂಡಿದೆ. ಬಹುಮಾನಿತ ಕಥೆಗಳನ್ನು ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸಲಾಗುತ್ತದೆ. ವಿಜೇತರನ್ನು ಸಮ್ಮೇಳನದ ಸಂದರ್ಭದಲ್ಲಿ ಘೋಷಿಸಲಾಗುವುದು.

ಸ್ಪರ್ಧೆಯ ನಿಯಮಗಳು ಈ ಕೆಳಗಿನಂತಿವೆ:
• ಕಥೆಯನ್ನು ಕಳುಹಿಸಲು ಕೊನೆಯ ದಿನಾಂಕ ಮಾರ್ಚ್ 26, 2022
• ಕಥೆಯು ಕನ್ನಡ, ಹವಿಗನ್ನಡ ಇಲ್ಲವೆ ಇಂಗ್ಲೀಷ್ ನಲ್ಲಿರಬಹುದು.
• ಕಥೆ ಆರು ಪುಟ ಮೀರಬಾರದು.
• ಕಥೆ ಸ್ವಂತ ರಚನೆಯಾಗಿರಬೇಕು ಹಾಗೂ ಬೇರೆ ಎಲ್ಲೂ ಪ್ರಕಟವಾಗಿರಬಾರದು.
• ಅನುವಾದಿತ ಕಥೆಗೆ ಸ್ಪರ್ಧೆಯಲ್ಲಿ ಅವಕಾಶವಿಲ್ಲ.
• ಸ್ಪರ್ಧೆಗೆ ಕಳುಹಿಸಿದ ಕಥೆಯನ್ನು ಹವ್ಯಕ ಸಮ್ಮೇಳನದ ಸ್ಮರಣ ಸಂಚಿಕೆ ಪ್ರಕಟಣೆಯಾಗುವವರೆಗೆ ಬೇರೆಲ್ಲೂ (ಬ್ಲಾಗ್, ಸೋಷಿಯಲ್ ಮೀಡಿಯಾ ಸೇರಿದಂತೆ) ಪ್ರಕಟಿಸುವಂತಿಲ್ಲ.
• ಕಥೆಯನ್ನು ಯೂನಿಕೋಡ್ನಲ್ಲಿ, MS-Word/ google docನಲ್ಲಿ ಫಾಂಟ್ ಸೈಜ಼್ 12 ಬಳಸಿ ಕಳುಹಿಸತಕ್ಕದ್ದು, ಯಾವುದೇ ಕಾರಣಕ್ಕೂ ಹಸ್ತಪ್ರತಿಗಳನ್ನು ಸ್ವೀಕರಿಸಲಾಗುವುದಿಲ್ಲ.
• ಸ್ಪರ್ಧೆಗೆ ಒಂದಕ್ಕಿಂತ ಹೆಚ್ಚು ಕಥೆಯನ್ನು ಕಳುಹಿಸುವ ಹಾಗಿಲ್ಲ.
• ಕಥೆಯೊಂದಿಗೆ ನಿಮ್ಮ ಕಿರುಪರಿಚಯ, ಭಾವಚಿತ್ರ, ಈ-ಮೇಲ್ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ದಯವಿಟ್ಟು ಕಳುಹಿಸತಕ್ಕದ್ದು.
• ನಿಮ್ಮ ಕಥೆಯನ್ನು [email protected] ಗೆ ಕಳಿಸಿ.
• ತೀರ್ಪುಗಾರರ ನಿರ್ಧಾರವೇ ಅಂತಿಮ.
• ಸ್ಪರ್ಧೆಗೆ ಸಲ್ಲಿಸಿದ ಯಾವುದೇ ಕಥೆಯನ್ನು ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸುವ ಅಥವಾ ಪ್ರಕಟಿಸದೆ ಇರುವ ತೀರ್ಮಾನ ಸ್ಮರಣ ಸಂಚಿಕೆ ಸಂಪಾದಕ ಸಮಿತಿಯದ್ದಾಗಿರುತ್ತದೆ.
– ಹವ್ಯಸಿರಿ ಸಮಿತಿ – 2022.

ಇದನ್ನೂ ಓದಿ: Tax Benefits : ಎಲೆಕ್ಟ್ರಿಕ್ ವಾಹನ ಖರೀದಿಸಿದರೆ ಸಿಗುತ್ತೆ ತೆರಿಗೆ ವಿನಾಯ್ತಿ: ಕ್ಲೇಮ್ ಮಾಡಲು ನೀವು ಇಷ್ಟು ಮಾಡಬೇಕು

ಇದನ್ನೂ ಓದಿ: Government Travel Apps : ಸುಖಕರ ಪ್ರಯಾಣ ಮಾಡಲು ಸರ್ಕಾರದ ಈ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ!

(Havyaka Association of Americas convention story writing contest)